3rd Test; ಪಂದ್ಯಕ್ಕೂ ಜಡೇಜ, ಕೊಹ್ಲಿ ಇಲ್ಲ?
Team Udayavani, Feb 4, 2024, 6:20 AM IST
ಹೊಸದಿಲ್ಲಿ: ಭಾರತದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಇಂಗ್ಲೆಂಡ್ ಎದುರಿನ 3ನೇ ಟೆಸ್ಟ್ ಪಂದ್ಯದಲ್ಲೂ ಆಡುವುದು ಅನುಮಾನ ಎಂಬ ಆಘಾತಕಾರಿ ಸುದ್ದಿಯೊಂದು ಕೇಳಿಬಂದಿದೆ.
ರವೀಂದ್ರ ಜಡೇಜ ಸ್ನಾಯು ಸೆಳೆತದಿಂದಾಗಿ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಸಾಮಾನ್ಯವಾಗಿ ಸ್ನಾಯು ಸೆಳೆತದಿಂದ ಸಂಪೂರ್ಣ ಮುಕ್ತರಾಗಲು 4ರಿಂದ 8 ವಾರ ಬೇಕಾಗುತ್ತದೆ. “ಜಡೇಜ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ, ಅವರ ಸಂಪೂರ್ಣ ಚೇತರಿಕೆಗೆ ಇನ್ನಷ್ಟು ಸಮಯ ಬೇಕಿದೆ. ಹೀಗಾಗಿ ತವರಿನ ರಾಜ್ಕೋಟ್ ಟೆಸ್ಟ್ ಪಂದ್ಯದಿಂದ ಅವರು ಹೊರಗುಳಿಯುವ ಸಾಧ್ಯತೆಯೇ ಹೆಚ್ಚು’ ಎಂದು ಮಂಡಳಿಯ ಮೂಲವೊಂದು ಹೇಳಿದೆ.
ಆದರೆ 2ನೇ ಹಾಗೂ 3ನೇ ಟೆಸ್ಟ್ ಪಂದ್ಯದ ನಡುವೆ ಹೆಚ್ಚಿನ ಅಂತರ ಇರುವುದರಿಂದ ಜಡೇಜ ಪೂರ್ತಿ ಫಿಟ್ನೆಸ್ ಪಡೆಯಲೂಬಹುದು ಎಂಬ ದೂರದ ನಿರೀಕ್ಷೆ ಒಂದಿದೆ. 3ನೇ ಟೆಸ್ಟ್ ಫೆ. 15ರಂದು ಆರಂಭವಾಗಲಿದೆ.
ಕೊಹ್ಲಿ ಕೌಟುಂಬಿಕ ಕಾರಣ
ವಿರಾಟ್ ಕೊಹ್ಲಿ ವಿಷಯದಲ್ಲಿ ಬಿಸಿಸಿಐ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ ಅವರು ಮೊದಲು ಕುಟುಂಬಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದಿದೆ. ಕ್ರಿಕೆಟ್ ವೆಬ್ಸೈಟ್ ಒಂದರ ವರದಿಯಂತೆ, ಕೊಹ್ಲಿ ವಿದೇಶದಲ್ಲಿದ್ದಾರೆ. ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಎಬಿ ಡಿ ವಿಲಿಯರ್ ತಮ್ಮ ಯೂ ಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ತಂಡದ ಪ್ರಧಾನ ವೇಗಿ ಮೊಹಮ್ಮದ್ ಶಮಿ ಕಡೆಯಿಂದಲೂ ಸಕಾರಾತ್ಮಕ ಸುದ್ದಿ ಬಿತ್ತರಗೊಂಡಿಲ್ಲ. ಆದರೆ ತೊಡೆಯ ನೋವಿಗೆ ಸಿಲುಕಿರುವ ಕೆ.ಎಲ್. ರಾಹುಲ್ ಚೇತರಿಸಿಕೊಂಡಿದ್ದಾಗಿ ಬಿಸಿಸಿಐ ತಿಳಿಸಿದೆ. ಹೀಗಾಗಿ ಅವರು ರಾಜ್ಕೋಟ್ ಟೆಸ್ಟ್ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!