90 ಮೀಟರ್ ದೂರ ಜಾವೆಲಿನ್ ಎಸೆಯುವ ಗುರಿ: ನೀರಜ್ ಚೋಪ್ರಾ
Team Udayavani, Jun 17, 2022, 10:37 PM IST
ನವದೆಹಲಿ: ಈಗಾಗಲೇ 89.30 ಮೀಟರ್ ಸಾಧನೆಯೊಂದಿಗೆ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, 90 ಮೀ. ಗುರಿಗಿಂತ ಕೇವಲ 70 ಸೆ.ಮೀ. ಹಿಂದಿದ್ದಾರೆ. ಫಿನ್ಲಂಡ್ನಲ್ಲಿ ಶನಿವಾರ ಕುವೋರ್ತಾನ್ ಗೇಮ್ಸ್ ಆರಂಭವಾಗಲಿದ್ದು, ಇಲ್ಲಿ ಚೋಪ್ರಾ 90 ಮೀಟರ್ ದೂರದ ಗುರಿಯನ್ನು ಸಾಧಿಸಬಲ್ಲರೇ ಎಂಬ ಕುತೂಹಲ ಎಲ್ಲರದು.
ಇದೇ ವಾರ ಫಿನ್ಲಂಡ್ನಲ್ಲಿ ಮುಗಿದ ಪಾವೊ ನುರ್ಮಿ ಗೇಮ್ಸ್ನಲ್ಲಿ ನೀರಜ್ ಚೋಪ್ರಾ 89.30 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿದ್ದರು. ಇದು ಟೋಕಿಯೊ ಒಲಿಂಪಿಕ್ಸ್ಗೂ ಮಿಗಿಲಾದ ಸಾಧನೆಯಾಗಿತ್ತು. ಆದರೂ ಲಭಿಸಿದ್ದು ಬೆಳ್ಳಿ. ಇಲ್ಲಿನ ಚಿನ್ನ ಆತಿಥೇಯ ದೇಶದ ಒಲಿವರ್ ಹೆಲಾಂಡರ್ ಪಾಲಾಗಿತ್ತು (89.83 ಮೀ.). 93.07 ಮೀ. ದಾಖಲೆ ಹೊಂದಿರುವ ಹಾಲಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ ಇಲ್ಲಿ 86.30 ಮೀ. ಸಾಧನೆಯೊಂದಿಗೆ ನೀರಜ್ ಅನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಬಳಿಕ ಪಾಲ್ಗೊಂಡ ಮೊದಲ ಕೂಟದಲ್ಲೇ ನೀರಜ್ ಚೋಪ್ರಾ ಜೀವನಶ್ರೇಷ್ಠ ಸಾಧನೆಗೈದದ್ದು ವಿಶೇಷವಾಗಿತ್ತು. ಆದರೆ ಕುವೋರ್ತಾನ್ನಲ್ಲಿ ಚಿನ್ನ ಗೆಲ್ಲಬೇಕಾದರೆ ಇದಕ್ಕೂ ಮಿಗಿಲಾದ ಸಾಧನೆ ಮಾಡಬೇಕಿದೆ ಎಂಬುದು ಚೋಪ್ರಾ ಲೆಕ್ಕಾಚಾರ.
ಆದರೆ ನೀರಜ್ ಚೋಪ್ರಾ ಅವರ ಜರ್ಮನ್ ಗೆಳೆಯ ಜೊಹಾನ್ನೆಸ್ ವೆಟ್ಟರ್ ಇಲ್ಲಿಯೂ ಸ್ಪರ್ಧಿಸುತ್ತಿಲ್ಲ. ಕಳೆದ ವರ್ಷ ಅವರಿಲ್ಲಿ 93.59 ಮೀ. ಸಾಧನೆಗೈದರೆ, ಚೋಪ್ರಾ 86.79 ಮೀ. ದೂರಕ್ಕಷ್ಟೇ ಜಾವೆಲಿನ್ ಎಸೆದು ತೃತೀಯ ಸ್ಥಾನಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ