ಏಶ್ಯಾಡ್ ಬ್ಯಾಡ್ಮಿಂಟನ್: ಪುರುಷರ ತಂಡವೂ ಹೊರಕ್ಕೆ
Team Udayavani, Aug 21, 2018, 6:10 AM IST
ಪಾಲೆಂಬಾಂಗ್: ಏಶ್ಯಾಡ್ ಬ್ಯಾಡ್ಮಿಂಟನ್ನಲ್ಲಿ ಭಾರತದ ಪುರುಷರ ತಂಡದ ಪದಕ ನಿರೀಕ್ಷೆಯೂ ಹುಸಿಯಾಗಿದೆ. ವನಿತೆಯರಂತೆ ಪುರುಷರೂ ಕ್ವಾರ್ಟರ್ ಫೈನಲ್ನಲ್ಲಿ ಎಡಿವದರು. ಆತಿಥೇಯ ಇಂಡೋನೇಶ್ಯ ತಂಡ ಭಾರತವನ್ನು 3-1 ಅಂತರದಿಂದ ಮಣಿಸಿತು.
ಕೆ. ಶ್ರೀಕಾಂತ್ ಅವರನ್ನು ಅಂಟೋನಿ ಸಿನಿಸುಕ 23-21, 20-22, 21-10 ಅಂತರದಿಂದ ಸೋಲಿಸಿರು. ಡಬಲ್ಸ್ನಲ್ಲಿ ಸಾತ್ವಿಕ್ರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ವಿಶ್ವದ ನಂ.1 ಜೋಡಿಯಾದ ಕೆವಿನ್ ಸಂಜಯ ಸುಕಮುಲೊj-ಮಾರ್ಕಸ್ ಫೆರ್ನಾಲ್ಡಿ ಗಿಡೆಯೇನ್ ವಿರುದ್ಧ 21-19, 19-21, 16-21 ಅಂತರದ ಸೋಲನುಭವಿಸಿದರು.
ಎಚ್.ಎಸ್. ಪ್ರಣಯ್ 21-15, 19-21, 21-19ರಿಂದ ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸಿ ಭರವಸೆ ಮೂಡಿಸಿದರು. ಆದರೆ 4ನೇ ಪಂದ್ಯದಲ್ಲಿ ಮನು ಅತ್ರಿ-ಬಿ. ಸುಮೀತ್ ರೆಡ್ಡಿ 14-21, 18-21 ಅಂತರದಿಂದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್ ಅರ್ದಿಯಾಂಟೊ ವಿರುದ್ಧ ಎಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ