Udayavni Special

ಈ ಹೆಪ್ಟಾತ್ಲಾನ್‌ ಸ್ಪರ್ಧಿಗೆ ಸರಿಯಾದ ಶೂಗಳೇ ಭಾರತದಲ್ಲಿ ಸಿಗುತ್ತಿಲ್ಲ


Team Udayavani, Aug 22, 2018, 6:00 AM IST

13.jpg

ಜಕಾರ್ತಾ: ಭಾರತದಲ್ಲಿ ಕ್ರೀಡಾಪಟುಗಳು ಪದಕ ಗೆಲ್ಲುವುದಿಲ್ಲವೆಂದು ಆರೋಪಿಸಲಾಗುತ್ತದೆ. ಆದರೆ ಅವರಿಗಿರುವ ಸಮಸ್ಯೆಗಳ ಬಗ್ಗೆ ಬಹುತೇಕರು ತಲೆಕೆಡಿಸಿಕೊಳ್ಳುವುದಿಲ್ಲ. ಬಂಗಾಳದಲ್ಲಿರುವ ಸ್ವಪ್ನಾ ಬರ್ಮನ್‌ ಎಂಬ ಈ ಪ್ರತಿಭಾವಂತ ಹೆಪಾrತ್ಲಾನ್‌ ಸ್ಪರ್ಧಿಗೆ ಕಾಲಿನಲ್ಲಿ ಆರು ಬೆರಳುಗಳಿವೆ. ಆದ್ದರಿಂದ ಆಕೆಯ ಪಾದಗಳು ಬಹಳ ಅಗಲ. ಆಕೆಗೆ ಸರಿಹೊಂದುವಂತಹ ಕ್ರೀಡಾ ಶೂಗಳು ಇಡೀ ಭಾರತದಲ್ಲೇ ಸಿಗುತ್ತಿಲ್ಲ! ಈಗ ಆಕೆ ತನ್ನಲ್ಲಿರುವ ಹಳೇ ಶೂಗಳೊಂದಿಗೆ ಏಶ್ಯಾಡ್‌ನ‌ಲ್ಲಿ ಸ್ಪರ್ಧಿಸಬೇಕಿದೆ.

ಆಕೆಯ ಸ್ಪರ್ಧೆಗಳು ಆ. 28ರಿಂದ ಶುರುವಾಗಲಿವೆ. ಅದಕ್ಕೂ ಮುನ್ನ ಆಕೆಗೆ ಶೂಗಳನ್ನು ಹೊಂದಿಸಿಕೊಳ್ಳುವುದು ಹೇಗೆ ಎಂಬುದೇ ಚಿಂತೆ. ತನ್ನ ಕಾಲಿಗೆ ತಕ್ಕಂತೆ ರೂಪುಗೊಳಿಸಿದ ಶೂಗಳು ತನಗೆ ಯಾವತ್ತೂ ಸಿಗಲಿಲ್ಲ. ಅದರ ಬದಲಿಗೆ ಒಂದು ಮಾಡೆಲ್‌ನ ಶೂಗಳನ್ನು ಬಳಸಲು ಆರಂಭಿಸಿದ್ದೆ. ಆದರೆ ಈಗ ಅಂತಹ ಶೂಗಳೇ ಭಾರತದಲ್ಲಿ ಸಿಗುವುದಿಲ್ಲ ಎಂದು ಬರ್ಮನ್‌ ಹೇಳುತ್ತಾರೆ.

ಇನ್ನು ಬೇರೆ ಬ್ರ್ಯಾಂಡ್‌ಗಳನ್ನು ಆಕೆ ಪ್ರಯತ್ನಿಸಿದ್ದಾರೆ. ಆದರೆ ಅವು ಯಾವುವೂ ಆಕೆಯ ಕಾಲಿಗೆ ಹೊಂದುತ್ತಿಲ್ಲ. ಹೇಗೋ ಹಾಕಿಕೊಂಡರೆ ಅಸಾಧ್ಯವಾದ ಕಾಲುನೋವು. ಆ 6ನೇ ಬೆರಳನ್ನು ಎರಡೂ ಕಾಲಿನಿಂದ ತೆಗೆಸಿ ಬಿಡು ಎಂದು ಹಲವರು ಸ್ವಪ್ನಾಗೆ ಸಲಹೆ ನೀಡಿದ್ದಾರೆ. ಅದನ್ನು ಆಕೆ ಗಂಭೀರವಾಗಿ ಪರಿಗಣಿಸಿಲ್ಲ. ಅದು ಹೇಗೋ ತಾನು ನಿಭಾಯಿಸಿ ಕೊಳ್ಳುತ್ತೇನೆ. ಸದ್ಯ ತನ್ನ ಗಮನ ಕ್ರೀಡಾಕೂಟದ ಮೇಲಿದೆ. ಉಳಿದಿ ದ್ದನ್ನು ಮರೆತುಬಿಟ್ಟು ಫ‌ಲಿತಾಂಶದ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂದು ಹೇಳಿಕೊಳ್ಳುತ್ತಾರೆ.

ಹೆಪ್ಟಾತ್ಲಾನ್‌ ಅಂದರೆ ಏನು?: ಹೆಪ್ಟಾತ್ಲಾನ್‌ ಎಂದರೆ 7 ಬೇರೆ ಬೇರೆ ರೀತಿಯ ಕ್ರೀಡೆಗಳನ್ನೊಳಗೊಂಡ ಸ್ಪರ್ಧೆ. ಇದು ಪುರುಷರಿಗೆ ಮತ್ತು ಮಹಿಳೆಯರಿಗೆ ಬೇರೆ ಬೇರೆ ಇರುತ್ತದೆ. ಮಹಿಳೆಯರ ಸ್ಪರ್ಧೆಯಲ್ಲಿ 100 ಮೀ. ಹರ್ಡಲ್ಸ್‌, ಎತ್ತರ ಜಿಗಿತ, ಶಾಟ್‌ಪುಟ್‌ ಎಸೆತ, 200 ಮೀ. ಓಟ, ಉದ್ದಜಿಗಿತ, ಜಾವೆಲಿನ್‌ ಎಸೆತ, 800 ಮೀ. ಓಟವಿರುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

siddaramih

ಯಡಿಯೂರಪ್ಪ ಡೋಂಗಿ ರೈತ ನಾಯಕ: ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ಗುಡ್ ನ್ಯೂಸ್:ಭಾರತ -11 ದಿನದಲ್ಲಿ 10 ಲಕ್ಷ ಮಂದಿ ಕೋವಿಡ್ ಸೋಂಕಿತರು ಗುಣಮುಖ

ಗುಡ್ ನ್ಯೂಸ್: ಭಾರತ -11 ದಿನದಲ್ಲಿ 10 ಲಕ್ಷ ಮಂದಿ ಕೋವಿಡ್ ಸೋಂಕಿತರು ಗುಣಮುಖ

ಕಾಡಂಚಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಎರಡು ಚಿರತೆಗಳ ದಾಳಿ ೬ ಮೇಕೆಗಳು ಬಲಿ

ಕಾಡಂಚಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಚಿರತೆಗಳ ದಾಳಿ 6 ಮೇಕೆಗಳು ಬಲಿ

ಕರ್ನಾಟಕ ಬಂದ್ ಗೆ ಹಾವೇರಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಕರ್ನಾಟಕ ಬಂದ್ ಗೆ ಹಾವೇರಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಬಾಬಾ ಬುಡನ್ ಗಿರಿ ಗುಹೆಯೊಳಗೆ ಸಚಿವ ಸಿ.ಟಿ ರವಿಯಿಂದ ಕಾನೂನು ಉಲ್ಲಂಘನೆ?

ಬಾಬಾ ಬುಡನ್ ಗಿರಿ ಗುಹೆಯೊಳಗೆ ಸಚಿವ ಸಿ.ಟಿ ರವಿಯಿಂದ ಕಾನೂನು ಉಲ್ಲಂಘನೆ?

ಕೊನೆಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಎರಡು ಆಸೆಗಳು ಈಡೇರಲೇ ಇಲ್ಲ!

ಕೊನೆಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಎರಡು ಆಸೆಗಳು ಈಡೇರಲೇ ಇಲ್ಲ!

ಗಬ್ಬುನಾರುತ್ತಿರುವ ಶೌಚಾಲಯ ಗುಂಡಿಗಳೇ ಉಗ್ರರ ಅಡಗು ತಾಣ!

ಗಬ್ಬುನಾರುತ್ತಿರುವ ಶೌಚಾಲಯ ಗುಂಡಿಗಳೇ ಉಗ್ರರ ಅಡಗು ತಾಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೂರನ್ ಫೀಲ್ಡಿಂಗ್

ಎಂಚಿನ ಫೀಲ್ಡಿಂಗ್ ಮಾರ್ರೆ:ಪೂರನ್ ಫೀಲ್ಡಿಂಗ್ ಕಂಡು ತುಳು ಟ್ವೀಟ್ ಮಾಡಿದ ಸ್ಟಾರ್ ಸ್ಪೋರ್ಟ್ಸ್

Tewatia-1

ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ರಾಹುಲ್ ಸ್ಪೋಟಕ ಬ್ಯಾಟಿಂಗ್!

Mayank-01

ರಾಹುಲ್–ಮಯಾಂಕ್ ಭರ್ಜರಿ ಬ್ಯಾಟಿಂಗ್ ಜೊತೆಯಾಟ: ರಾಯಲ್ಸ್ ಬೆವರಿಳಿಸಿದ ‘ಹುಡುಗರು’!

smith

ಪಂಜಾಬ್–ರಾಜಸ್ಥಾನ್ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಮಿತ್ ಪಡೆ

ಸಂಜು ಸ್ಯಾಮ್ಸನ್ ಗೆ ಭಾರತೀಯ ತಂಡದಲ್ಲಿ ಆಡಲು ಅವಕಾಶ ಸಿಗುವುದಿಲ್ಲ ಎಂದರೆ ಆಶ್ಚರ್ಯ: ವಾರ್ನೆ

ಸಂಜು ಸ್ಯಾಮ್ಸನ್ ಗೆ ಭಾರತೀಯ ತಂಡದಲ್ಲಿ ಆಡಲು ಅವಕಾಶ ಸಿಗುವುದಿಲ್ಲ ಎಂದರೆ ಆಶ್ಚರ್ಯ: ವಾರ್ನೆ

MUST WATCH

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!ಹೊಸ ಸೇರ್ಪಡೆ

ಜಾನಪದ ಕಲೆಯೇ ಬದುಕು:ಕಲಾವಿದ ಶಿವಣ್ಣ

ಜಾನಪದ ಕಲೆಯೇ ಬದುಕು:ಕಲಾವಿದ ಶಿವಣ್ಣ

siddaramih

ಯಡಿಯೂರಪ್ಪ ಡೋಂಗಿ ರೈತ ನಾಯಕ: ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ರೈತರ ವಿರೋಧಿ ಕಾಯ್ದೆಗಳಿಗೆ ಧಿಕ್ಕಾರ

ರೈತರ ವಿರೋಧಿ ಕಾಯ್ದೆಗಳಿಗೆ ಧಿಕ್ಕಾರ

br-tdy-1

ಭಗತ್‌ಸಿಂಗ್‌ ಅಪ್ರತಿಮ ಹೋರಾಟಗಾರ: ನರೇಂದ್ರ

ಗುಡ್ ನ್ಯೂಸ್:ಭಾರತ -11 ದಿನದಲ್ಲಿ 10 ಲಕ್ಷ ಮಂದಿ ಕೋವಿಡ್ ಸೋಂಕಿತರು ಗುಣಮುಖ

ಗುಡ್ ನ್ಯೂಸ್: ಭಾರತ -11 ದಿನದಲ್ಲಿ 10 ಲಕ್ಷ ಮಂದಿ ಕೋವಿಡ್ ಸೋಂಕಿತರು ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.