Asian Olympics ಕ್ವಾಲಿಫೈರ್ ಶೂಟಿಂಗ್ ರುದ್ರಾಂಕ್ಷ್ -ಮೆಹುಲಿ ಜೋಡಿಗೆ ಚಿನ್ನ
Team Udayavani, Jan 9, 2024, 11:34 PM IST
ಜಕಾರ್ತಾ: ಏಷ್ಯನ್ ಒಲಿಂಪಿಕ್ಸ್ ಕ್ವಾಲಿಫೈರ್ ಶೂಟಿಂಗ್ ಸ್ಪರ್ಧೆಯಲ್ಲಿ ರುದ್ರಾಂಕ್ಷ್ ಪಾಟೀಲ್-ಮೆಹುಲಿ ಘೋಷ್ ಜೋಡಿಯಿಂದ ಭಾರತಕ್ಕೆ 5ನೇ ಚಿನ್ನದ ಪದಕ ಒಲಿದು ಬಂದಿದೆ. ಮಂಗಳವಾರದ ಸ್ಪರ್ಧೆಯಲ್ಲಿ ಇವರು 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಬಂಗಾರಕ್ಕೆ ಗುರಿ ಇರಿಸಿದರು.
ಫೈನಲ್ನಲ್ಲಿ ಭಾರತದ ಜೋಡಿ ಚೀನದ ಶೆನ್ ಯುಫಾನ್-ಝು ಮಿಂಗ್ಶುಯಿ ವಿರುದ್ಧ 16-10 ಅಂತರದ ಮೇಲುಗೈ ಸಾಧಿಸಿತು. ಅರ್ಹತಾ ಸುತ್ತಿನಲ್ಲಿ ರುದ್ರಾಂಕ್ಷ್ -ಮೆಹುಲಿ ದ್ವಿತೀಯ ಸ್ಥಾನದಲ್ಲಿದ್ದರು (631.3). ಚೀನದ ಜೋಡಿಗೆ ಮೊದಲ ಸ್ಥಾನ ಲಭಿಸಿತ್ತು (632.3). ಫೈನಲ್ ಅದೃಷ್ಟ ಭಾರತಕ್ಕೆ ಒಲಿಯಿತು.
ಆದರೆ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದ ಫೈನಲ್ನಲ್ಲಿ ಇದಕ್ಕೆ ತದ್ವಿರುದ್ಧ ಫಲಿತಾಂಶ ಲಭಿಸಿತು. ಭಾರತದ ಅರ್ಜುನ್ ಚೀಮಾ-ರಿದಂ ಸಂಗ್ವಾನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ವಿಯೆಟ್ನಾಮ್ನ ತು ವಿನ್ ಟ್ರಿನ್ ಮತ್ತು ಕ್ವಾಂಗ್ ಹುಯ್ ಫಾಮ್ ಚಿನ್ನದ ಪದಕ ಗೆದ್ದರು. ಅರ್ಹತಾ ಸುತ್ತಿನಲ್ಲಿ ಭಾರತದ ಜೋಡಿ ಅಗ್ರಸ್ಥಾನದಲ್ಲಿತ್ತು (582). ಇಲ್ಲಿ ವಿಯೆಟ್ನಾಮ್ ಜೋಡಿ ದ್ವಿತೀಯ ಸ್ಥಾನಿಯಾಗಿತ್ತು (580). ಆದರೆ ಫೈನಲ್ ಫಲಿತಾಂಶ ತಿರುವು ಮುರುವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ