ಏಷ್ಯನ್ ಮಹಿಳಾ ಕುಸ್ತಿ: ಭಾರತದ ನವಜೋತ್ ಕೌರ್ಗೆ ಚಿನ್ನ
Team Udayavani, Mar 3, 2018, 6:35 AM IST
ನವದೆಹಲಿ: ಏಷ್ಯನ್ ಚಾಂಪಿಯನ್ಶಿಪ್ನ 65 ಕೆಜಿ ವಿಭಾಗದ ಮಹಿಳಾ ಕುಸ್ತಿಯಲ್ಲಿ ಭಾರತದ ನವಜೋತ್ ಕೌರ್ ಚಿನ್ನ ಗೆದ್ದಿದ್ದಾರೆ.
ಕಿರ್ಗಿಸ್ತಾನದ ಬಿಷ್ಟೆಕ್ನಲ್ಲಿ ನಡೆದ ಪಂದ್ಯದಲ್ಲಿ ಅವರು ಜಪಾನಿನ ಮಿಯಾ ಎಲ್ಮಾಯಿಯನ್ನು 9-1 ಅಂಕಗಳಿಂದ ಸೋಲಿಸಿದ್ದಾರೆ. ಮತ್ತೂಂದು ಕಡೆ ಒಲಿಂಪಿಕ್ಸ್ ಕಂಚು ವಿಜೇತೆ ಸಾಕ್ಷಿ ಮಲಿಕ್ 62 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ.