ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ರುಬ್ಲೆವ್‌, ಪ್ಲಿಸ್ಕೋವಾ ಮುನ್ನಡೆ

ಡಬಲ್ಸ್‌: ಭಾರತದ ಬಾಲಾಜಿ-ನೆಡುಂಚಿಜಿಯಾನ್‌ ಮುನ್ನಡೆ

Team Udayavani, Jan 21, 2023, 11:03 PM IST

 ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ರುಬ್ಲೆವ್‌, ಪ್ಲಿಸ್ಕೋವಾ ಮುನ್ನಡೆ

ಮೆಲ್ಬರ್ನ್: ಐದನೇ ಶ್ರೇಯಾಂಕದ ರಷ್ಯಾದ ಆ್ಯಂದ್ರೆ ರುಬ್ಲೆವ್‌, ಮಾಜಿ ನಂಬರ್‌ ವಭ್‌ ಕ್ಯಾರೋಲಿನಾ ಪ್ಲಿಸ್ಕೋವಾ ಅವರು ಸುಲಭ ಗೆಲುವು ಸಾಧಿಸಿ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ.

ರುಬ್ಲೆವ್‌ ಅವರು ಬ್ರಿಟನ್‌ನ 25ನೇ ಶ್ರೇಯಾಂಕದ ಡೇನಿಯಲ್‌ ಇವಾನ್ಸ್‌ ಅವರನ್ನು 6-4, 6-2, 6-3 ಸೆಟ್‌ಗಳಿಂದ ಉರುಳಿಸಿ ಮುನ್ನಡೆದರು. ಎರಡು ವರ್ಷಗಳ ಹಿಂದೆ ಅವರಿಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದರು. ಆಸ್ಟ್ರೇಲಿಯದ 23ರ ಹರೆಯದ ಅಲೆಕ್ಸ್‌ ಡಿ ಮಿನೌರ್‌ ಕೂಡ ನಾಲ್ಕನೇ ಸುತ್ತು ತಲುಪಿದ್ದಾರೆ. ಅಲ್ಲಿ ಅವರು 21 ಬಾರಿಯ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ನೋವಾಕ್‌ ಜೊಕೋವಿಕ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

ಜೊಕೋವಿಕ್‌ ಈ ಹಿಂದಿನ ಪಂದ್ಯದಲ್ಲಿ ಗ್ರಿಗರ್‌ ದಿಮಿತ್ರೋವ್‌ ಅವರನ್ನು 7-6 (7), 6-3, 6-4 ಸೆಟ್‌ಗಳಿಂದ ಸೋಲಿಸಿದ್ದರು.

ಅಮೆರಿಕದ ಹಲವು ಮಂದಿ
ಸುಮಾರು ಎರಡು ದಶಕಗಳ ಬಳಿಕ ಅಮೆರಿಕದ ಹಲವು ಆಟಗಾರರು ಇಲ್ಲಿ ಎರಡನೇ ವಾರಕ್ಕೆ ತಲುಪಿದ ಸಾಧನೆ ಮಾಡಿದ್ದಾರೆ. ಟಾಮಿ ಪಾಲ್‌, ಜೆ.ಜೆ. ವೂಲ್ಫ್, ಸೆಬಾಸ್ಟಿಯನ್‌ ಕೋರ್ಡ ಮತ್ತು ಬೆನ್‌ ಶಲ್ಟನ್‌ ಚೊಚ್ಚಲ ಬಾರಿ ನಾಲ್ಕನೇ ಸುತ್ತು ತಲುಪಿದ ಅಮೆರಿಕದ ಆಟಗಾರರಾಗಿದ್ದಾರೆ. ಟಾಮಿ ಪಾಲ್‌ ಅವರು ನಾಲ್ಕನೇ ಸುತ್ತಿನಲ್ಲಿ ರಾಬೆರ್ಟೊ ಬಾಟಿಸ್ಟ ಆಗುಟ್‌ ಅವರ ಸವಾನ್ನು ಎದುರಿ ಸಲಿದ್ದಾರೆ. ಬಾಟಿಸ್ಟ ತಮ್ಮ ಪಂದ್ಯದಲ್ಲಿ ಆ್ಯಂಡಿ ಮರ್ರೆ ಅವರನ್ನು 6-1, 6-7 (7-9), 6-3, 6-4 ಸೆಟ್‌ಗಳಿಂದ ಸೋಲಿಸಿದ್ದರು.

ಪ್ಲಿಸ್ಕೋವಾಗೆ ಗೆಲುವು
ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಪ್ಲಿಸ್ಕೋವಾ ರಷ್ಯಾದ ವಾರ್ವರಾ ಗ್ರಾಚೇವಾ ಅವರನ್ನು 6-4, 6-2 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ನಾಲ್ಕನೇ ಸುತ್ತಿನಲ್ಲಿ ಅವರು ಚೀನದ ಝಾಂಗ್‌ ಶುಯಿ ಅವರನ್ನು ಎದುರಿಸಲಿದ್ದಾರೆ. 12ನೇ ಶ್ರೇಯಾಂಕದ ಬೆಲಿಂಡಾ ಬೆನ್ಸಿಕ್‌ 6-2, 7-5 ಸೆಟ್‌ಗಳಿಂದ ಕ್ಯಾಮಿಲಾ ಜಿಯೊರ್ಜಿ ಅವರನ್ನು ಸೋಲಿಸಿದರು.

ಡಬಲ್ಸ್‌: ಭಾರತದ ಬಾಲಾಜಿ-ನೆಡುಂಚಿಜಿಯಾನ್‌ ಮುನ್ನಡೆ
ಮೆಲ್ಬರ್ನ್: ಭಾರತದ ಎನ್‌. ಶ್ರೀರಾಮ್‌ ಬಾಲಾಜಿ ಮತ್ತು ಜೀವನ್‌ ನೆಡುಂಚಿಜಿಯಾನ್‌ ಅವರು ಆಸ್ಟ್ರೇಲಿಯನ್‌ ಓಪನ್‌ನ ಡಬಲ್ಸ್‌ ಸ್ಪರ್ಧೆಯ ಮೊದಲ ಸುತ್ತಿನ ಹೋರಾಟದಲ್ಲಿ ಐದನೇ ಶ್ರೇಯಾಂಕದ ಐವಾನ್‌ ಡೊಡಿಗ್‌ ಮತ್ತು ಆಸ್ಟಿನ್‌ ಕ್ರ್ಯಾಜಿಸೆಕ್‌ ಅವರನ್ನು ಕಠಿನ ಸೆಟ್‌ಗಳಿಂದ ಸೋಲಿಸಿ ಅಚ್ಚರಿಯ ಫ‌ಲಿತಾಂಶಕ್ಕೆ ಕಾರಣರಾಗಿದ್ದಾರೆ.

ಬದಲಿ ತಂಡವಾಗಿ ಈ ಕೂಟದಲ್ಲಿ ಆಡಿದ ಬಾಲಾಜಿ ಮತ್ತು ನೆಡುಂಚಿಜಿಯಾನ್‌ ಅವರು ಅದ್ಭುತ ಆಟದ ಪ್ರದರ್ಶನ ನೀಡಿ ಗಮನ ಸೆಳೆದರು. ಎರಡು ತಾಸು ಮತ್ತು 20 ನಿಮಿಷಗಳ ಹೋರಾಟದಲ್ಲಿ ಅವರು ಡೊಡಿಗ್‌-ಕ್ರ್ಯಾಜಿಸೆಕ್‌ ಅವರನ್ನು 7-6 (6), 2-6, 6-4 ಸೆಟ್‌ಗಳಿಂದ ಉರುಳಿಸಿದರು.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್‌ ಬೋಪಣ್ಣ ಅವರು ನೇರ ಸೆಟ್‌ಗಳ ಗೆಲುವಿನೊಂದಿಗೆ ದ್ವಿತೀಯ ಸುತ್ತಿಗೇರಿದ್ದಾರೆ. ಅವರು ಸ್ಥಳೀಯ ಪ್ರತಿಭೆ ಜೈಮಿ ಫೋರ್ಲಿಸ್‌ ಮತ್ತು ಲ್ಯೂಕ್‌ ಸವಿಲೆ ಅವರನ್ನು 7-5, 66-3 ಸೆಟ್‌ಗಳಿಂದ ಮಣಿಸಿದರು.

ಚೊಚ್ಚಲ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡುತ್ತಿರುವ ಬಾಲಾಜಿ ಮತ್ತು ನೆಡುಂಚಿಜಿಯಾನ್‌ ದ್ವಿತೀಯ ಸುತ್ತಿನಲ್ಲಿ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಮತ್ತು ಫ್ಯಾಬ್ರೈಸ್‌ ಮಾರ್ಟಿನ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಬಾಲಾಜಿ ಮತ್ತು ನೆಡುಂಚಿಜಿಯಾನ್‌ ಕಳೆದ ತಿಂಗಳು ನಡೆದ ಟಾಟಾ ಓಪನ್‌ ಮಹಾರಾಷ್ಟ್ರ ಕೂಟದಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.