Australian Open Tennis;ಸ್ವಿಯಾಟೆಕ್ ಮುನ್ನಡೆ : ಅಲ್ಕರಾಜ್, ರೂಡ್ ಮೂರನೇ ಸುತ್ತಿಗೆ
Team Udayavani, Jan 18, 2024, 11:44 PM IST
ಮೆಲ್ಬರ್ನ್: ಸ್ಪೇನ್ನ ದ್ವಿತೀಯ ಶ್ರೇಯಾಂಕದ ಕಾರ್ಲೊಸ್ ಅಲ್ಕರಾಜ್ ನಾಲ್ಕು ಸೆಟ್ಗಳ ಹೋರಾಟದಲ್ಲಿ ಇಟಲಿಯ ಲಾರೆಂಜೊ ಸೊನೆಗೊ ಅವರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಅಲ್ಕರಾಜ್ 6-4, 6-7 (3), 6-3, 7-6 (3) ಸೆಟ್ಗಳಿಂದ ಸೊನೆಗೊ ಅವರನ್ನು ಉರುಳಿಸಿ ಮುನ್ನಡೆದರು.
ಇನ್ನೊಂದು ಐದು ಸೆಟ್ಗಳ ಕಠಿನ ಹೋರಾಟದಲ್ಲಿ 11ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಅವರು ಸ್ಥಳೀಯ ಮ್ಯಾಕ್ಸ್ ಪುರ್ಸೆಲ್ ಅವರನ್ನು ಸೋಲಿಸಿ ಮೂರನೇ ಸುತ್ತಿಗೇರಿದ್ದಾರೆ. 6-3, 6-7 (5), 6-3, 3-6, 7-6 (7) ಸೆಟ್ಗಳಿಂದ ಎದುರಾಳಿಯನ್ನು ಮಣಿಸಿದ ರೂಡ್ ಅವರು ಮೂರನೇ ಸುತ್ತಿನಲ್ಲಿ ಬ್ರಿಟನ್ನ ಕ್ಯಾಮರಾನ್ ನೂರಿ ಅವರ ಸವಾಲನ್ನು ಎದುರಿಸಲಿದ್ದಾರೆ. ನೂರಿ ಕೂಡ ಇನ್ನೊಂದು ಐದು ಸೆಟ್ಗಳ ಹೋರಾಟದಲ್ಲಿ ಇಟಲಿನ ಅರ್ಹತಾ ಆಟಗಾರ ಜಿಲಿಯೊ ಜೆಪ್ಪೀರಿ ಅವರನ್ನು ಕೆಡಹಿದ್ದರು.
ಜ್ವರೇವ್ ಮುನ್ನಡೆ
ಆರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ ಅವರು ಸ್ಲೊವಾಕಿಯದ ಅರ್ಹತಾ ಆಟಗಾರ ಲುಕಾಸ್ ಕ್ಲೈನ್ ಅವರನ್ನು 7-5, 3-6, 4-6, 7-6 (5), 7-6 (7) ಸೆಟ್ಗಳಿಂದ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಮಳೆಯಿಂದ ಈ ಪಂದ್ಯ ಛಾವಣಿ ಇರುವ ಮೈದಾನದಲ್ಲಿ ನಡೆಯಿತು.
ಸ್ವಿಯಾಟೆಕ್ಗೆ ಗೆಲುವು
ವಿಶ್ವದ ನಂಬರ್ ವನ್ ಇಗಾ ಸ್ವಿಯಾಟೆಕ್ ಅವರು ಎರಡು ಬ್ರೇಕ್ ಅಂಕದಿಂದ ಹಿನ್ನೆಡೆಯಲ್ಲಿದ್ದರೂ ಚೇತರಿಸಿಕೊಂಡು ಡೇನಿಯಲ್ ಕಾಲಿನ್ಸ್ ಅವರನ್ನು 6-4, 3-6, 6-4 ಸೆಟ್ಗಳಿಂದ ಸೋಲಿಸಿ ಮೂರನೇ ಸುತ್ತಿಗೇರಿದರು. ಅವರು ಸತತ ಐದನೇ ವರ್ಷ ಅವರು ಮೂರನೇ ಸುತ್ತಿಗೇರಿದ ಸಾಧನೆ ಮಾಡಿದ್ದಾರೆ. ನಾಲ್ಕು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಸ್ವಿಯಾಟೆಕ್ ಅವರು ಮುಂದಿನ ಸುತ್ತಿನಲ್ಲಿ ಜೆಕ್ನ ಲಿಂಡಾ ನೊಸ್ಕೋವಾ ಅವರನ್ನು ಎದುರಿಸಲಿದ್ದಾರೆ.
ಎಮ್ಮಾ ರಾಡುಕಾನು ಅವರು ಚೀನದ ಯಫಾನ್ ವಾಂಗ್ ಕೈಯಲ್ಲಿ 6-4, 4-6, 6-4 ಸೆಟ್ಗಳಿಂದ ಸೋತು ಹೊರಬಿದ್ದರು. ಗಾಯದಿಂದಾಗಿ ಎಂಟು ತಿಂಗಳ ವಿಶ್ರಾಂತಿಯ ಬಳಿಕ ಅವರು ಇಲ್ಲಿ ಆಡಲು ಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್