ಅಂಪಾಯರ್ಗಳಿಗೆ “ಎ ಪ್ಲಸ್’ ಕೆಟಗರಿ ರಚಿಸಿದ ಬಿಸಿಸಿಐ
Team Udayavani, Jul 22, 2022, 11:21 PM IST
ಹೊಸದಿಲ್ಲಿ: ಬಿಸಿಸಿಐ ನೂತನವಾಗಿ ಅಂಪಾಯರ್ಗಳ “ಎ ಪ್ಲಸ್’ ಕೆಟಗರಿಯೊಂದನ್ನು ರಚಿಸಿದೆ.
ಐಸಿಸಿ ಎಲೈಟ್ ಪ್ಯಾನಲ್ನ ಅಂಪಾಯರ್ ನಿತಿನ್ ಮೆನನ್ ಸೇರಿದಂತೆ ಒಟ್ಟು 10 ಮಂದಿ ಅಂಪಾಯರ್ಗಳು ಈ ವರ್ಗಕ್ಕೆ ಸೇರ್ಪಡೆಗೊಂಡಿದ್ದಾರೆ.
“ಎ ಪ್ಲಸ್’ ವರ್ಗದಲ್ಲಿ ಭಾರತದ ನಾಲ್ವರು ಅಂತಾರಾಷ್ಟ್ರೀಯ ಅಂಪಾಯರ್ಗಳಿದ್ದಾರೆ. ಇವರೆಂದರೆ ಅನಿಲ್ ಚೌಧರಿ, ಮದನಗೋಪಾಲ್ ಜಯರಾಮನ್, ವೀರೇಂದರ್ ಕುಮಾರ್ ಶರ್ಮ ಮತ್ತು ಕೆ.ಎನ್. ಅನಂತ ಪದ್ಮನಾಭನ್. ಉಳಿದವರೆಂದರೆ ರೋಹನ್ ಪಂಡಿತ್, ನಿಖೀಲ್ ಪಟವರ್ಧನ್, ಸದಾಶಿವ ಅಯ್ಯರ್, ಉಲ್ಲಾಸ್ ಗಂಧೆ ಮತ್ತು ನವದೀಪ್ ಸಿಂಗ್ ಸಿಧು.