Udayavni Special

ತಿಂಗಳೊಳಗೆ ಬಿಸಿಸಿಐಗೆ ಹೊಸ ಸಂವಿಧಾನ


Team Udayavani, Aug 10, 2018, 6:00 AM IST

supreme-court-800.jpg

ಹೊಸದಿಲ್ಲಿ: ಕಳೆದ 2 ವರ್ಷಗಳಿಂದ ಬಿಸಿಸಿಐ ಮತ್ತು ಅದರ ನಿಯೋಜಿತ ಆಡಳಿತಾಧಿಕಾರಿಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ. ಬಿಸಿಸಿಐನ ಸಂವಿಧಾನ ಬದಲಾವಣೆ ಮಾಡಲೇಬೇಕೆಂದು ಸರ್ವೋಚ್ಚ ನ್ಯಾಯಾಲಯ ಗುರುವಾರ ಅಂತಿಮ ಆದೇಶ ನೀಡಿದೆ. 

ಬಿಸಿಸಿಐ ಪಾಲಿಗೆ ಸಮಾಧಾನಕರ ಸಂಗತಿಯೆಂದರೆ, ಅದರ ಕೆಲ ಬೇಡಿಕೆಗಳನ್ನು ನ್ಯಾಯಪೀಠ ಮನ್ನಿಸಿದೆ.2016, ಜು. 18ರಂದು ಸರ್ವೋಚ್ಚ ನ್ಯಾಯಾಲಯ ಲೋಧಾ ಶಿಫಾರಸಿನ ಆಧಾರದ ಮೇಲೆ ಬಿಸಿಸಿಐಗೆ ಆಡಳಿತಾತ್ಮಕ ಸುಧಾರಣೆ ಘೋಷಿಸಿತ್ತು. ಆದರೆ ಲೋಧಾ ಸಮಿತಿಯ 4 ಮುಖ್ಯ ಶಿಫಾರಸುಗಳನ್ನು ಬಿಸಿಸಿಐ ಪದಾಧಿಕಾರಿಗಳು ಹಾಗೂ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಬಲವಾಗಿ ವಿರೋಧಿಸಿದ್ದವು.

ಒಂದು ರಾಜ್ಯಕ್ಕೆ ಒಂದೇ ಮತ, ಒಂದು ಅಧಿಕಾರಾವಧಿ ನಂತರ 3 ವರ್ಷಗಳ ಕಡ್ಡಾಯ ವಿಶ್ರಾಂತಿ, 70 ವರ್ಷ ಮೀರಿದವರಿಗೆ ಅಧಿಕಾರವಿಲ್ಲ, ಒಬ್ಬ ಸದಸ್ಯನಿಗೆ ಒಂದೇ ಹುದ್ದೆ… ಇವನ್ನು ಇಡೀ ದೇಶದಲ್ಲಿ ಬಹುತೇಕ ಕ್ರಿಕೆಟ್‌ ಸಂಸ್ಥೆಗಳು ವಿರೋಧಿಸಿದ್ದವು.

ಒಂದು ರಾಜ್ಯಕ್ಕೆ ಒಂದು ಮತ ರದ್ದು
ಒಂದು ರಾಜ್ಯಕ್ಕೆ ಒಂದೇ ಮತ ಎಂಬ ನೀತಿಯಿಂದ ಕೆಲವು ರಾಜ್ಯಗಳಲ್ಲಿರುವ ಇತರೆ ಕ್ರಿಕೆಟ್‌ ಸಂಸ್ಥೆಗಳು ಇಕ್ಕಟ್ಟಿಗೆ ಸಿಲುಕಿದ್ದವು. ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯಲ್ಲದೇ ಮುಂಬಯಿ, ವಿದರ್ಭ ಎಂಬ ಇನ್ನಿತರ ಎರಡು ಸಂಸ್ಥೆಗಳು ಇದ್ದವು. ಗುಜರಾತ್‌ನಲ್ಲಿ ವಡೋದರಾ, ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯೂ ಇದ್ದವು. ಇವೆಲ್ಲ ಮತದಾನದ ಅಧಿಕಾರ ಕಳೆದುಕೊಂಡಿದ್ದವು.

ತೀಪೇìನು?: ಎಲ್ಲ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಪೂರ್ಣ ಸದಸ್ಯತ್ವ ಲಭಿಸಿದೆ. ಅವೆಲ್ಲ ಈಗ ಆರಾಮಾಗಿ ಬಿಸಿಸಿಐನಿಂದ ತಮ್ಮ ಸೌಲಭ್ಯಕ್ಕಾಗಿ ಒತ್ತಾಯಿಸಬಹುದು.

ರೈಲ್ವೇಸ್‌, ಸರ್ವಿಸಸ್‌ ಬಚಾವ್‌
ಒಂದು ರಾಜ್ಯಕ್ಕೆ ಒಂದೇ ಮತದ ನಿಯಮದಿಂದ ದೀರ್ಘ‌ ಕಾಲದಿಂದ ಕ್ರಿಕೆಟನ್ನು ಪೋಷಿಸಿಕೊಂಡು ಬಂದಿದ್ದ ರೈಲ್ವೇಸ್‌, ಸರ್ವಿಸಸ್‌, ಯೂನಿವರ್ಸಿಟೀಸ್‌ ಎಂಬ ಸಂಸ್ಥೆಗಳು ಮಾನ್ಯತೆ ಕಳೆದುಕೊಂಡಿದ್ದವು.

ನ್ಯಾಯಪೀಠ ಈ ಸಂಸ್ಥೆಗಳಿಗೂ ಈಗ ಮಾನ್ಯತೆ ನೀಡಿದೆ. ಹಾಗಾಗಿ ಇವು ಮತದಾನ ಮಾಡುವುದರ ಜತೆಗೆ ಕ್ರಿಕೆಟ್‌ ಚಟುವಟಿಕೆಯಲ್ಲೂ ನಿರಾತಂಕವಾಗಿ ಪಾಲ್ಗೊಳ್ಳಬಹುದು.

2 ಅವಧಿ ಬಳಿಕ ಕಡ್ಡಾಯ ವಿಶ್ರಾಂತಿ
ಮೂರು ವರ್ಷಗಳ ಒಂದು ಅಧಿಕಾರಾವಧಿ ಬಳಿಕ 3 ವರ್ಷ ಕಡ್ಡಾಯ ವಿಶ್ರಾಂತಿ ಪಡೆಯಲೇಬೇಕೆಂದು ಲೋಧಾ ಹೇಳಿತ್ತು. ಇದರಿಂದ ಅನುಭವದ ಬಳಕೆಗೆ ತೊಂದರೆಯಾಗುತ್ತದೆ ಎಂದು ಬಿಸಿಸಿಐ ವಾದಿಸಿತ್ತು.

ಒಂದು ಅಧಿಕಾರಾವಧಿ ಬಳಿಕ ಕಡ್ಡಾಯ ವಿಶ್ರಾಂತಿಯನ್ನು ನ್ಯಾಯಪೀಠ ರದ್ದುಗೊಳಿಸಿದೆ. ಅದರ ಬದಲು ಸತತ 2 ಅಧಿಕಾರಾವಧಿ ನಂತರ 3 ವರ್ಷ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಹೇಳಿದೆ. ಇದು ಬಿಸಿಸಿಐ ಪಾಲಿಗೆ ಸಮಾಧಾನದ ಸಂಗತಿ.

30 ದಿನದಲ್ಲಿ ಜಾರಿಯಾಗಬೇಕು
ಬಿಸಿಸಿಐ ನೋಂದಾವಣಿಗೊಂಡಿರುವುದು ತಮಿಳುನಾಡು ಸೊಸೈಟೀಸ್‌ ಕಾಯ್ದೆಯಡಿ. ಆ ಸಂಸ್ಥೆಯ ರಿಜಿಸ್ಟ್ರಾರ್‌ ಜನರಲ್‌ಗೆ ಆದೇಶ ನೀಡಿರುವ ಸರ್ವೋಚ್ಚ ನ್ಯಾಯಾಲಯ, ಇನ್ನು 4 ವಾರದೊಳಗೆ ಹೊಸ ಸಂವಿಧಾನವನ್ನು ಸಿದ್ಧ ಮಾಡಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದೆ. ಇದನ್ನು 30 ದಿನದೊಳಗೆ ಕಡ್ಡಾಯವಾಗಿ ಜಾರಿ ಮಾಡಲೇಬೇಕೆಂದು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಕಠಿನ ಸೂಚನೆ ನೀಡಿದೆ. ಒಂದಷ್ಟು ನಿರಾಳತೆ ಲಭಿಸಿರುವುದನ್ನು ಹೊರತುಪಡಿಸಿದರೆ ತೀರ್ಪನ್ನು ಜಾರಿಮಾಡದೇ ಬಿಸಿಸಿಐ ಪದಾಧಿಕಾರಿಗಳು ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಇನ್ನು ಯಾವುದೇ ಅವಕಾಶಗಳು ಉಳಿದಿಲ್ಲ.

ಪ್ರಕರಣದ ಹಿನ್ನೆಲೆಯೇನು?
2013ರ ಐಪಿಎಲ್‌ನಲ್ಲಿ ಭಾರೀ ಹಗರಣಗಳು ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಬಿಸಿಸಿಐಯನ್ನು ಮುಕುಲ್‌ ಮುದ್ಗಲ್‌ ಸಮಿತಿ ತನಿಖೆಗೊಳಪಡಿಸಿ ಸಮಗ್ರ ಸುಧಾರಣೆಗೆ ಶಿಫಾರಸು ಮಾಡಿತ್ತು. ಅದರ ಹಿನ್ನೆಲೆಯಲ್ಲಿ ಲೋಧಾ ಸಮಿತಿ ಜಾರಿಯಾಗಿತ್ತು. ಅದು ದೀರ್ಘ‌ ಕಾಲ ಅಧ್ಯಯನ ಮಾಡಿ ಶಿಫಾರಸುಗಳನ್ನು ಸಿದ್ಧಪಡಿಸಿತ್ತು. 2016, ಜು. 18ರಂದು ಈ ಶಿಫಾರಸನ್ನು ನ್ಯಾಯಪೀಠ ಪುರಸ್ಕರಿಸಿತ್ತು. ಅದರ ವಿರುದ್ಧ ಪದಾಧಿಕಾರಿಗಳು ಮತ್ತೆ ಅರ್ಜಿ ಸಲ್ಲಿಸಿದ್ದರಿಂದ ಪ್ರಕರಣ ಮುಂದುವರಿದಿತ್ತು.

ಅಮಿತಾಭ್‌, ಅನಿರುದ್ಧ್ಗೆ ಸಂಕಷ್ಟ
ನ್ಯಾಯಪೀಠದ ತೀರ್ಪಿನಿಂದ ಒಟ್ಟಾರೆ ಬಿಸಿಸಿಐ ವಲಯದಲ್ಲಿ ಅಲ್ಪ ಸಮಾಧಾನ ನೆಲೆಸಿದೆ. ಆದರೆ ಇಬ್ಬರು ಪ್ರಮುಖ ವ್ಯಕ್ತಿಗಳು ಮಾತ್ರ ಇಕಟ್ಟಿಗೆ ಸಿಲುಕಿದ್ದಾರೆ. ಕಾರ್ಯದರ್ಶಿ ಅಮಿತಾಭ್‌ ಚೌಧರಿ, ಖಜಾಂಚಿ ಅನಿರುದ್ಧ ಚೌಧರಿ ಇಬ್ಬರೂ ಕೂಡಲೇ ಅಧಿಕಾರ ಬಿಡಲೇಬೇಕಾಗುತ್ತದೆ. ನ್ಯಾಯಪೀಠದ ತೀರ್ಪಿನ ಒಂದು ಸಾಲು ಹೀಗಿದೆ: “ಸತತ 2ಅಧಿಕಾರಾವಾಧಿ ನಂತರ 3 ವರ್ಷ ವಿಶ್ರಾಂತಿ ತೆಗೆದುಕೊಳ್ಳಲೇಬೇಕು. ಅದು ಬಿಸಿಸಿಐನಲ್ಲಾಗಿರಲಿ ಅಥವಾ ರಾಜ್ಯ ಸಂಸ್ಥೆಯಲ್ಲಾಗಿರಲಿ ಅಥವಾ ಎರಡೂ ಸಂಸ್ಥೆಗಳಲ್ಲಿ ಸೇರಿ ಕಾರ್ಯ ನಿರ್ವಹಿಸಿದ್ದರೂ ವಿಶ್ರಾಂತಿ ಕಡ್ಡಾಯ’.

ಈ  ಪ್ರಕಾರ ನೋಡಿದರೆ ಅಮಿತಾಭ್‌, ಬಿಸಿಸಿಐ ಕಾರ್ಯದರ್ಶಿ ಹುದ್ದೆಗೂ ಮುನ್ನ ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ 10 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದರು. ಅನಿರುದ್ಧ ಚೌಧರಿ ಹರ್ಯಾಣ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿಯಾಗಿ 6 ವರ್ಷ ಕಾರ್ಯ ನಿರ್ವಹಿಸಿ ಬಿಸಿಸಿಐಗೆ ಬಂದಿದ್ದರು! ಇದು ಅವರ ಸ್ಥಿತಿಯನ್ನು ಸಂಕಷ್ಟಕ್ಕೆ ಒಡ್ಡಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ಶಾಲಾ ಕಾಲೇಜು ಪ್ರಾರಂಭಿಸುವ ಮೊದಲು ಸಂಪುಟದ ಸಲಹೆ ಪಡೆಯಲಿ: ಧ್ರುವನಾರಾಯಣ

ಶಾಲಾ ಕಾಲೇಜು ಪ್ರಾರಂಭಿಸುವ ಮೊದಲು ಸಂಪುಟದ ಸಲಹೆ ಪಡೆಯಲಿ: ಧ್ರುವನಾರಾಯಣ

ಅರ್ಮೇನಿಯಾ, ಅಝರ್ ಬೈಜಾನ್ ಯುದ್ಧ ತೀವ್ರ: 58 ಸೈನಿಕರು, 9 ನಾಗರಿಕರು ಸಾವು

ಅರ್ಮೇನಿಯಾ, ಅಝರ್ ಬೈಜಾನ್ ಯುದ್ಧ ತೀವ್ರ: 58 ಸೈನಿಕರು, 9 ನಾಗರಿಕರು ಸಾವು

ವಿಧಾನಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಅ.28ರಂದು ಚುನಾವಣೆ

ವಿಧಾನ ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಅ.28ರಂದು ಚುನಾವಣೆ

ಅಗತ್ಯ ಮೂಲ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್ ಎಚ್ಚರಿಕೆ

ಅಗತ್ಯ ಮೂಲ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್ ಎಚ್ಚರಿಕೆ

ಭಗವಂತನನ್ನಾದರೂ ನೋಡಬಹುದು ಆದರೆ ಬಿಜೆಪಿ ಸಂಸದರಿಗೆ ಮೋದಿ ನೋಡಲು ಸಾಧ್ಯವಿಲ್ಲ: BN ಚಂದ್ರಪ್ಪ

ಭಗವಂತನನ್ನಾದರೂ ನೋಡಬಹುದು ಆದರೆ ಬಿಜೆಪಿ ಸಂಸದರಿಗೆ ಮೋದಿ ನೋಡಲು ಸಾಧ್ಯವಿಲ್ಲ: BN ಚಂದ್ರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಎಬಿ ಡಿವಿಲಿಯರ್ಸ್

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಎಬಿ ಡಿವಿಲಿಯರ್ಸ್

ತೆವಾತಿಯಾ: ದುರದೃಷ್ಟ , ಅದೃಷ್ಟ ಮತ್ತು ತಾರಾಪಟ್ಟ!

ತೆವಾತಿಯಾ: ದುರದೃಷ್ಟ , ಅದೃಷ್ಟ ಮತ್ತು ತಾರಾಪಟ್ಟ!

ಸೋತು ಹೈರಾಣಾದ ಹೈದರಾಬಾದ್‌ಗೆ ಅಜೇಯ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು

ಸೋತು ಹೈರಾಣಾದ ಹೈದರಾಬಾದ್‌ಗೆ ಅಜೇಯ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ಪ್ರತಿಭಟನೆಗೆ ಸೀಮಿತವಾದ ಬಂದ್‌

ಪ್ರತಿಭಟನೆಗೆ ಸೀಮಿತವಾದ ಬಂದ್‌

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ಸದನದಲ್ಲಿ ಶಾಸಕ ಯತ್ನಾಳ್ ವೈದ್ಯರ ವಿರುದ್ಧ ಆಧಾರ ರಹಿತ‌ ಆರೋಪ : ಡಾ.ಬಿದರಿ

ಸದನದಲ್ಲಿ ಶಾಸಕ ಯತ್ನಾಳರಿಂದ ವೈದ್ಯರ ವಿರುದ್ಧ ಆಧಾರ ರಹಿತ‌ ಆರೋಪ : ಡಾ.ಬಿದರಿ

KOLAR-TDY-1

ಪ್ರಧಾನಿ ಮೋದಿ-ಸಿಎಂ ಯಡಿಯೂರಪ್ಪಗಿಲ್ಲ ರೈತ ಪರ ಕಾಳಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.