ಪಿಸ್ಟೋರಿಯಸ್ 400 ಮೀ. ವಿಶ್ವ ದಾಖಲೆ ಮುರಿದ ಬ್ಲೇಡ್ ರನ್ನರ್
Team Udayavani, Jun 25, 2017, 3:45 AM IST
ನ್ಯೂಯಾರ್ಕ್: ಗೆಳತಿ ಕೊಂದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ದಕ್ಷಿಣ ಆಫ್ರಿಕಾದ ಬ್ಲೇಡ್ ರನ್ನರ್ ಅಸ್ಕರ್ ಪಿಸ್ಟೋರಿಯಸ್ ಪ್ಯಾರಾಲಿಂಪಿಕ್ಸ್ನ 400 ಮೀ. ವಿಶ್ವ ದಾಖಲೆಯನ್ನು ಅಮೆರಿಕದ ಬ್ಲೇಡ್ ರನ್ನರ್ ಬ್ಲೇಕ್ ಲೀಪರ್ ಮುರಿದು ಹಾಕಿದ್ದಾರೆ.
ಆಸ್ಕರ್ 2011ರಲ್ಲಿ 45.30 ಸೆಕೆಂಡ್ಸ್ಗಳಲ್ಲಿ ಓಡಿ ಟಿ43 ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದನ್ನು ಬ್ಲೇಕ್ ಯುಎಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 45.25 ಸೆಕೆಂಡ್ಸ್ಗಳಲ್ಲಿ ಓಡಿ ಗುರಿ ಮುಟ್ಟಿ ಅಳಿಸಿ ಹಾಕಿದರು. 2013ರಲ್ಲಿ ಪಿಸ್ಟೋರಿಯಸ್ ಗೆಳತಿಯನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಆರೋಪ ಸಾಬೀತಾಗಿದ್ದು ಈಗ 6 ವರ್ಷದ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾರೆ.