ಪ್ಯಾರಾ ಲಿಫ್ಟರ್ ಸಚಿನ್ ಚೌಧರಿಗೆ ಕಂಚು
Team Udayavani, Apr 11, 2018, 6:00 AM IST
ಹೊಸದಿಲ್ಲಿ: ಭಾರತದ ಪ್ಯಾರಾ ಲಿಫ್ಟರ್ ಸಚಿನ್ ಚೌಧರಿ ಗೇಮ್ಸ್ನ ಪುರುಷರ ಹೆವಿವೇಟ್ ಫೈನಲ್ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. 10 ಸ್ಪರ್ಧಿಗಳಿದ್ದ ಫೈನಲ್ನಲ್ಲಿ ಅವರು ಒಟ್ಟಾರೆ 181 ಕೆ.ಜಿ. ಎತ್ತುವ ಮೂಲಕ ಕಂಚು ಪಡೆದಿದ್ದಾರೆ. ಇದು ದೇಶದ ಪ್ಯಾರಾ ಆ್ಯತ್ಲೆಟಿಕ್ ತಂಡಕ್ಕೆ ಲಭಿಸಿದ ಮೊದಲ ಪದಕವಾಗಿದೆ. ಈ ವಿಭಾಗ ದಲ್ಲಿ ನೈಜೀರಿಯಾದ ಅಬ್ದುಲಾಝೀಝ್ ಇಬ್ರಾಹಿಂ ಚಿನ್ನ ಗೆದ್ದರೆ ಮಲೇಶ್ಯದ ಯಿ ಖೀಯಿ ಜಾಂಗ್ ಕಂಚು ಪಡೆದಿದ್ದಾರೆ.
35ರ ಹರೆಯದ ಚೌಧರಿ ಕಳೆದ ವರ್ಷ ದುಬೈಯಲ್ಲಿ ನಡೆದ ವಿಶ್ವಕಪ್ ಪವರ್ಲಿಫ್ಟಿಂಗ್ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. ಅವರು ಜೀವನಶ್ರೇಷ್ಠ 200 ಕೆ.ಜಿ. ಎತ್ತಿ ಈ ಸಾಧನೆ ಮಾಡಿದ್ದಾರೆ. 2012ರ ಸಮ್ಮರ್ ಪ್ಯಾರಾಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು 9ನೇ ಸ್ಥಾನ ಪಡೆದಿದ್ದರು.
ಭಾರತದ ಮೂವರು ಪುರುಷ ಪವರ್ಲಿಫ್ಟರ್ಗಳು ಫೈನಲ್ ಸುತ್ತಿಗೆ ಪ್ರವೇಶ ಪಡೆದಿದ್ದರು. ಆದರೆ ಸಚಿನ್ ಮಾತ್ರ ಪದಕ ಗೆಲ್ಲಲು ಯಶಸ್ವಿಯಾಗಿದ್ದರು. ಇನ್ನಿಬ್ಬರು ಲಿಫ್ಟರ್ಗಳಾದ ಫರ್ಮಾನ್ ಬಾಶ್ ಮತ್ತು ಅಶೋಕ್ ಕುಮಾರ್ ಅವರು ಲೈಟ್ವೇಟ್ ಫೈನಲ್ನಲ್ಲಿ ಅನುಕ್ರಮವಾಗಿ 5 ಮತ್ತು 11ನೇ ಸ್ಥಾನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ