ಮೆಲ್ಟ್ ವಾಟರ್ ಚಾಂಪಿಯನ್ಸ್ ಚೆಸ್: ಪ್ರಶಸ್ತಿ ಸುತ್ತಿಗೆ ಪ್ರಗ್ನಾನಂದ
Team Udayavani, May 25, 2022, 11:27 PM IST
ಚೆನ್ನೈ: ಯುವ ಗ್ರ್ಯಾನ್‌ಮಾಸ್ಟರ್ ಆರ್. ಪ್ರಗ್ನಾನಂದ ನೆದರ್ಲೆಂಡ್ಸ್‌ನ ಗ್ರ್ಯಾನ್‌ಮಾಸ್ಟರ್ ಅನೀಶ್ ಗಿರಿ ಅವರನ್ನು ಕಠಿನ ಹೋರಾಟ ದಲ್ಲಿ ಕೆಡಹಿ ಮೆಲ್ಟ್ ವಾಟರ್ ಚಾಂಪಿಯನ್ಸ್ ಚೆಸ್ ಟೂರ್ ಚೆಸೇಬಲ್ ಮಾಸ್ಟರ್ ಕೂಟದ ಫೈನಲ್ ಹಂತಕ್ಕೇರಿದ್ದಾರೆ.
ಭಾರತೀಯ ಚೆಸ್ ತಾರೆ ತನ ಗಿಂತ ಉನ್ನತ ರ್‍ಯಾಂಕಿನ ಗಿರಿ ಅವ ರನ್ನು 3.5-2.5 ಅಂಕಗಳಿಂದ ಉರುಳಿಸಿ ಆಘಾತಗೊಳಿಸಿದರು. ನಾಲ್ಕು ಪಂದ್ಯಗಳ ರ್ಯಾಪಿಡ್ ಆನ್‌ಲೈನ್ ಸೆಮಿಫೈನಲ್ ಪಂದ್ಯ 2-2 ಸಮಬಲ ಗೊಂಡ ಬಳಿಕ ಟೈಬ್ರೇಕರ್‌ನಲ್ಲಿ ಪ್ರಗ್ನಾನಂದ ಅಮೋಘವಾಗಿ ಆಡಿ ಗಿರಿ ಅವರನ್ನು ಸೋಲಿಸಲು ಯಶಸ್ವಿಯಾದರು.
ಪ್ರಶಸ್ತಿ ಸುತ್ತಿನಲ್ಲಿ ಪ್ರಗ್ನಾನಂದ ವಿಶ್ವದ ಎರಡನೇ ರ್‍ಯಾಂಕಿನ ಚೀನದ ಡಿಂಗ್ ಲಿರೆನ್ ಅವರ ಸವಾಲನ್ನು ಎದುರಿಸಲಿದ್ದಾರೆ. ಲಿರೆನ್ ಇನ್ನೊಂದು ಸೆಮಿಫೈನಲ್ ಹೋರಾಟದಲ್ಲಿ ವಿಶ್ವದ ನಂಬರ್ ವನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು 2.5-1.5 ಅಂಕಗಳಿಂದ ಸೋಲಿಸಿದ್ದರು.
ಪ್ರಗ್ನಾನಂದ ಮತ್ತು ಗಿರಿ ನಡುವೆ ನಡೆದ ಸೆಮಿಫೈನಲ್ ಹೋರಾಟದ ಮೊದಲ ಪಂದ್ಯ ನೀರಸವಾಗಿ ಡ್ರಾ ಗೊಂಡಿತ್ತು. ಆದರೆ ದ್ವಿತೀಯ ಪಂದ್ಯ ದಲ್ಲಿ ಅದ್ಭುತ ಆಟದ ಪ್ರದರ್ಶನ ನೀಡಿದ ಪ್ರಗ್ನಾನಂದ ಜಯ ಸಾಧಿ ಸಿದರು. ಇದು ಗಿರಿ ಅವರಿಗೆ ಈ ಕೂಟದ ಮೊದಲ ಸೋಲು ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್
ಟಿ20 ಪಂದ್ಯ: ಪೊವೆಲ್ ಪರಾಕ್ರಮ; ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ವಿಜಯ
ವಿಂಬಲ್ಡನ್-2022: ರಿಬಾಕಿನಾ, ಗಾರಿನ್ ಕ್ವಾ.ಫೈನಲ್ ಪ್ರವೇಶ
ಬರ್ಮಿಂಗ್ಹ್ಯಾಮ್ ಟೆಸ್ಟ್: ಟಾರ್ಗೆಟ್ 378; ಗೆಲುವಿಗೆ ಪೈಪೋಟಿ
ಮಂಧನಾ-ಶಫಾಲಿ ಅಜೇಯ ಜೊತೆಯಾಟ: ಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ವನಿತೆಯರು