Cross Country; ಮಂಗಳೂರು ವಿವಿ ಚಾಂಪಿಯನ್
Team Udayavani, Mar 10, 2024, 11:41 PM IST
ಮೂಡುಬಿದಿರೆ: ಮಹಾರಾಷ್ಟ್ರದಲ್ಲಿ ನಡೆದ ಅಖಿಲ ಭಾರತ ಅಂತರ್ ವಿವಿ ಮಹಿಳಾ ಹಾಗೂ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್- 2024ರಲ್ಲಿ ಮಂಗಳೂರು ವಿವಿಯು ಮಹಿಳೆಯರ ಮತ್ತು ಪುರುಷರ ವಿಭಾಗ ಗಳೆರಡರಲ್ಲೂ ಗೆದ್ದು ಸಮಗ್ರ ಚಾಂಪಿಯನ್ಶಿಪ್ ತನ್ನದಾಗಿಸಿಕೊಂಡಿದೆ.
ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ 51 ಅಂಕ ಗಳಿಸಿ ಪ್ರಥಮ ಸ್ಥಾನಿಯಾಯಿತು. ರಾಜಸ್ಥಾನ ವಿವಿ (61 ಅಂಕ) ದ್ವಿತೀಯ, ಗುರು ಕಾಶಿ ವಿವಿ (63 ಅಂಕ) ತೃತೀಯ ಸ್ಥಾನ ಪಡೆದವು.
ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿ 36 ಅಂಕ ಗಳಿಸಿತು. ಶಿವಾಜಿ ವಿವಿಯು (44 ಅಂಕ) ದ್ವಿತೀಯ ಸ್ಥಾನ ಹಾಗೂ ಗೋರಖ್ ಪುರದ ದೀನ್ ದಯಾಳ್ ವಿವಿಯು (106) ತೃತೀಯ ಸ್ಥಾನ ಪಡೆದವು.
ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಪುರುಷ ಮತ್ತು ಮಹಿಳೆ ಯರ ತಂಡದಲ್ಲಿದ್ದ 10 ಕ್ರೀಡಾ ಪಟುಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಶಿಕ್ಷಣ ಯೋಜನೆಯಡಿಯಲ್ಲಿ ಶಿಕ್ಷಣ ಪಡೆಯು ತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹರ್ಷ ವ್ಯಕ್ತ ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ