ಡೆಲ್ಲಿಗೆ 51 ರನ್‌ ಗೆಲುವು

Team Udayavani, Apr 16, 2017, 1:22 PM IST

dellhi.jpg

ಹೊಸದಿಲ್ಲಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ಐಪಿಎಲ್‌ 10ರ ಶನಿವಾರದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು 51 ರನ್ನುಗಳಿಂದ ಸೋಲಿಸಿದೆ.

ಸ್ಯಾಮ್‌ ಬಿಲ್ಲಿಂಗ್ಸ್‌ ಮತ್ತು ಕೋರಿ ಆ್ಯಂಡರ್ಸನ್‌ ಅವರ ಉಪಯುಕ್ತ ಆಟದಿಂದಾಗಿ ಡೆಲ್ಲಿ ತಂಡವು ಆರು ವಿಕೆಟಿಗೆ 188 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ಪಂಜಾಬ್‌ 9 ವಿಕೆಟಿಗೆ 137 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮಿಲ್ಲರ್‌, ಮ್ಯಾಕ್ಸ್‌ವೆಲ್‌ ಅವರಂತಹ ಬ್ಯಾಟ್ಸ್‌ಮನ್‌ಗಳೆಲ್ಲ ವೈಫ‌ಲ್ಯ ಅನುಭವಿಸಿದರೆ ಬೌಲರ್‌ ಅಕ್ಷರ್‌ ಪಟೇಲ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.  29 ಎಸೆತ ಎದುರಿಸಿದ ಅವರು 1 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 44 ರನ್‌ ಗಳಿಸಿ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆದರು.
ಕ್ರಿಸ್‌ ಮೊರಿಸ್‌ 23 ರನ್ನಿಗೆ 3 ವಿಕೆಟ್‌ ಪಡೆದರೆ ಕಮಿನ್ಸ್‌ ಮತ್ತು ನದೀಮ್‌ ತಲಾ ಎರಡು ವಿಕೆಟ್‌ ಉರುಳಿಸಿದರು.

ಈ ಮೊದಲು ಟಾಸ್‌ ಗೆದ್ದ ಆತಿಥೇಯ ಡೆಲ್ಲಿ ತಂಡವು ಮೊದಲು ಬ್ಯಾಟಿಂಗ್‌ ನಡೆಸಿತು. ಈ ಹಿಂದಿನ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್‌ ಮತ್ತು ಸ್ಯಾಮ್‌ ಬಿಲ್ಲಿಂಗ್ಸ್‌ ಇನ್ನಿಂಗ್ಸ್‌ ಆರಂಭಿಸಿ 6.5 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 53 ರನ್‌ ಪೇರಿಸಿದರು. ನಿಧಾನಗತಿಯಲ್ಲಿ ಆಡಿದ ಸ್ಯಾಮ್ಸನ್‌ 18 ಎಸೆತಗಳಿಂದ 19 ರನ್‌ ಗಳಿಸಿ ಔಟಾದರು.

ವನ್‌ಡೌನ್‌ ಕರುಣ್‌ ನಾಯರ್‌ ಬ್ಯಾಟಿಂಗ್‌ ವೈಫ‌ಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. 3 ಎಸೆತ ಎದುರಿಸಿದರೂ ರನ್‌ ಖಾತೆ ತೆರೆಯಲು ಅವರು ವಿಫ‌ಲರಾದರು. ಈ ಪಂದ್ಯಕ್ಕೆ ಆಯ್ಕೆಯಾದ ಶ್ರೇಯಸ್‌ ಅಯ್ಯರ್‌ 22 ರನ್ನುಗಳ ಕೊಡುಗೆ ಸಲ್ಲಿಸಿದರು. ವಿಕೆಟ್‌ನ ಒಂದು ಕಡೆ ಉತ್ತಮವಾಗಿ ಆಡುತ್ತಿದ್ದ ಬಿಲ್ಲಿಂಗ್ಸ್‌ ನಾಲ್ಕನೆಯವರಾಗಿ ಔಟ್‌ ಆದಾಗ 40 ಎಸೆತಗಳಿಂದ 55 ರನ್‌ ಹೊಡೆದಿದ್ದರು. 9 ಬೌಂಡರಿ ಒಳಗೊಂಡಿತ್ತು.

ಸ್ಕೋರ್‌ ಪಟ್ಟಿ
ಡೆಲ್ಲಿ ಡೇರ್‌ಡೆವಿಲ್ಸ್‌

ಸಂಜು ಸ್ಯಾಮ್ಸನ್‌    ಸಿ ಮಾರ್ಗನ್‌ ಬಿ ಕಾರಿಯಪ್ಪ    19
ಸ್ಯಾಮ್‌ ಬಿಲ್ಲಿಂಗ್ಸ್‌    ಸಿ ಮಿಲ್ಲರ್‌ ಬಿ ಪಟೇಲ್‌    55
ಕರುಣ್‌ ನಾಯರ್‌    ಸಿ ಸಾಹ ಬಿ ಅರೋನ್‌    0
ಶ್ರೇಯಸ್‌ ಅಯ್ಯರ್‌    ಸಿ ಮಾರ್ಗನ್‌ ಬಿ ಶರ್ಮ    22
ರಿಷಬ್‌ ಪಂತ್‌    ಸಿ ಮಾರ್ಗನ್‌ ಬಿ ಅರೋನ್‌    15
ಕೋರಿ ಆ್ಯಂಡರ್ಸನ್‌    ಔಟಾಗದೆ    39
ಕ್ರಿಸ್‌ ಮೊರಿಸ್‌    ಸಿ ಶರ್ಮ ಬಿ ಸಂದೀಪ್‌    16
ಪ್ಯಾಟ್‌ ಕಮಿನ್ಸ್‌    ಔಟಾಗದೆ    12
ಇತರ:        10
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ)    188
ವಿಕೆಟ್‌ ಪತನ:
1-53, 2-55, 3-96, 4-103, 5-120, 6-151
ಬೌಲಿಂಗ್‌: ಸಂದೀಪ್‌ ಶರ್ಮ 4-0-41-1, ಮೋಹಿತ್‌ ಶರ್ಮ 4-0-37-1, ಅಕ್ಷರ್‌ ಪಟೇಲ್‌  4-0-33-1, ವರುಣ್‌ ಅರೋನ್‌ 4-0-45-2, ಕೆಸಿ ಕಾರಿಯಪ್ಪ 3-0-23-1, ಗ್ಲೆನ್‌ ಮ್ಯಾಕ್ಸ್‌ವೆಲ್‌ 1-0-7-0

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಮನನ್‌ ವೋಹ್ರ    ಎಲ್‌ಬಿಡಬ್ಲ್ಯು ಬಿ ನದೀಮ್‌    3
ಹಾಶಿಮ್‌ ಆಮ್ಲ    ಸಿ ಬಿಲ್ಲಿಂಗ್ಸ್‌ ಬಿ ಮೊರಿಸ್‌    19
ವೃದ್ಧಿಮಾನ್‌ ಸಾಹ    ಸಿ ಜಹೀರ್‌ ಬಿ ನದೀಮ್‌    7
ಇವೋನ್‌ ಮಾರ್ಗನ್‌    ಸಿ ನಾಯರ್‌ ಬಿ ಕಮಿನ್ಸ್‌    22
ಡೇವಿಡ್‌ ಮಿಲ್ಲರ್‌    ಎಲ್‌ಬಿಡಬ್ಲ್ಯು ಬಿ ಆ್ಯಂಡರ್ಸನ್‌    24
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ಬಿಲ್ಲಿಂಗ್ಸ್‌ ಬಿ ಮಿಶ್ರಾ    0
ಅಕ್ಷರ್‌ ಪಟೇಲ್‌    ಬಿ ಮೊರಿಸ್‌    44
ಮೋಹಿತ್‌ ಶರ್ಮ    ಬಿ ಕಮಿನ್ಸ್‌    13
ಕೆಸಿ ಕಾರಿಯಪ್ಪ    ಬಿ ಮೊರಿಸ್‌    1
ಸಂದೀಪ್‌ ಶರ್ಮ    ಔಟಾಗದೆ    2
ಇತರ:        2
ಒಟ್ಟು  (20 ಓವರ್‌ಗಳಲ್ಲಿ 9 ವಿಕೆಟಿಗೆ)    137
ವಿಕೆಟ್‌ ಪತನ:
1-5, 2-21, 3-31, 4-64, 5-65, 6-88, 7-133, 8-134, 9-137
ಬೌಲಿಂಗ್‌: ಜಹೀರ್‌ ಖಾನ್‌  4-0-38-0, ಶಾಹಬಾಜ್‌ ನದೀಮ್‌ 2-0-13-2, ಕ್ರಿಸ್‌ ಮೊರಿಸ್‌ 4-0-23-3, ಪ್ಯಾಟ್‌ ಕಮಿನ್ಸ್‌ 4-0-23-2, ಆಮಿತ್‌ ಮಿಶ್ರಾ 3-0-16-1, ಕೋರಿ ಆ್ಯಂಡರ್ಸನ್‌ 3-0-23-1

ಪಂದ್ಯಶ್ರೇಷ್ಠ: ಕೋರಿ ಆ್ಯಂಡರ್ಸನ್‌

ಟಾಪ್ ನ್ಯೂಸ್

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

7-chitradurga

ಒತ್ತಡಕ್ಕೆ ಮಣಿಯದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಾಗಲಿ; ಬಿ.ವೈ.ವಿಜಯೇಂದ್ರ

On Camera: ರಿವರ್ಸ್‌ ಅವಾಂತರ-ಗೆಳೆಯನ ಕಣ್ಣೆದುರೇ ಕಾರು ಕಂದಕಕ್ಕೆ ಬಿದ್ದು ಗೆಳತಿ ಸಾವು

On Camera: ರಿವರ್ಸ್‌ ಅವಾಂತರ-ಗೆಳೆಯನ ಕಣ್ಣೆದುರೇ ಕಾರು ಕಂದಕಕ್ಕೆ ಬಿದ್ದು ಗೆಳತಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lF

T20 World Cup; ಲಾಕೀ ಫ‌ರ್ಗ್ಯುಸನ್‌ ಅಮೋಘ ದಾಖಲೆ; 4-4-0-3!

1-babar

Pakistan ತಂಡದ ನಾಯಕತ್ವ ಬಿಡುವ ಬಗ್ಗೆ ಯೋಚಿಸಿಲ್ಲ: ಬಾಬರ್‌

1-sasaasd

Finland Games: ನೀರಜ್‌ ಚೋಪ್ರಾ ಮರಳಿ ಕಣಕ್ಕೆ

chess

AICF ವಿರುದ್ಧ ಕರುಣ್‌ ದುಗ್ಗಲ್‌ ಲೀಗಲ್‌ ನೊಟೀಸ್‌

1-sad-sddasd

Archery: ಅಂಕಿತಾ, ಭಜನ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌

MUST WATCH

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

ಹೊಸ ಸೇರ್ಪಡೆ

10-

Chikkamagaluru: ಪೆಟ್ರೋಲ್-ಡಿಸೇಲ್ ಬೆಲೆಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

9-bellary

Ballari: ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.