ಚಾಲನೆ ವೇಳೆ ಮೊಬೈಲ್ ಬಳಕೆ:ಬೇಕ್‌ಹ್ಯಾಮ್‌ಗೆ ಡ್ರೈವಿಂಗ್ ನಿಷೇಧ
Team Udayavani, May 10, 2019, 6:00 AM IST
ಲಂಡನ್: ಇಂಗ್ಲೆಂಡಿನ ಮಾಜಿ ಫುಟ್ಬಾಲಿಗ ಡೇವಿಡ್ ಬೇಕ್‌ಹ್ಯಾಮ್ 6 ತಿಂಗಳ ವಾಹನ ಚಾಲನೆ ನಿಷೇಧಕ್ಕೊಳಗಾಗಿದ್ದಾರೆ. ಕಾರಣ, ವಾಹನ ಚಲಾಯಿಸುತ್ತಿರುವಾಗ ಮೊಬೈಲ್ ಬಳಸಿದ್ದು!
44ರ ಹರೆಯದ ಬೇಕ್‌ಹ್ಯಾಮ್ ಕಳೆದ ವರ್ಷ ನ. 21ರಂದು ಲಂಡನ್ ರಸ್ತೆಯಲ್ಲಿ ತಮ್ಮ ‘ಬೆಂಟ್ಲಿ’ ಕಾರನ್ನು ಚಲಾಯಿಸುತ್ತಿರುವಾಗ ಮೊಬೈಲ್ ಬಳಸಿದ್ದರು. ಇದನ್ನು ಸಾರ್ವ ಜನಿಕರೊಬ್ಬರು ಗಮನಿಸಿ ದೂರು ಸಲ್ಲಿಸಿದ್ದರು.
ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ರಿಯಲ್ ಮ್ಯಾಡ್ರಿಡ್‌ನ ಮಾಜಿ ಫುಟ್ಬಾ ಲಿಗನೂ ಆಗಿರುವ ಬೇಕ್‌ಹ್ಯಾಮ್ ಈ ಘಟನೆಯ ಸಂಬಂಧ ದಕ್ಷಿಣ ಲಂಡನ್ನಿನ ಬ್ರೋಮ್ಲಿ ಕ್ಯಾಜಿಸ್ಟ್ರೇಟ್ಸ್ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಈಗ 6 ತಿಂಗಳ ಡ್ರೈವಿಂಗ್ ನಿಷೇಧ ತೀರ್ಪು ಹೊರಬಿದ್ದಿದೆ.
ಬೇಕ್‌ಹ್ಯಾಮ್ ಇಂಥ ಎಡವಟ್ಟು ಮಾಡಿಕೊಂಡದ್ದು ಇದೇ ಮೊದಲಲ್ಲ. 2018ರ ಜನವರಿಯಲ್ಲಿ ಲಂಡನ್ನಿನ 40 ಕಿ.ಮೀ. ಚಾಲನಾ ವಲಯದಲ್ಲಿ 95 ಕಿ.ಮೀ. ವೇಗದಲ್ಲಿ ಕಾರು ಓಡಿಸಿ ಭಾರೀ ದಂಡ ತೆತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸದ್ಯದಲ್ಲೇ ಸೆರೆನಾ ವಿಲಿಯಮ್ಸ್ ನಿವೃತ್ತಿ! ಶ್ರೇಷ್ಠ ಟೆನಿಸ್ ಆಟಗಾರ್ತಿಯಿಂದ ಸುಳಿವು
ಭೀಕರ ಕಾರು ಅಪಘಾತದಲ್ಲಿ ಮಾಜಿ ಅಂಪೈರ್ ರೂಡಿ ಕೊರ್ಜೆನ್ ವಿಧಿವಶ: ಕಂಬನಿ ಮಿಡಿದ ಸೆಹವಾಗ್
ಕ್ರೀಸಿಗೆ ಹೋಗುವ ಭರದಲ್ಲಿ ಬಿದ್ದ ಭಾಟಿಯಾ: ಬಿದ್ದುಬಿದ್ದು ನಕ್ಕ ಹರ್ಮನ್, ಮಂಧನಾ; ವಿಡಿಯೋ
ಏಷ್ಯಾ ಕಪ್ ತಂಡದಲ್ಲಿ ಶಮಿಗಿಲ್ಲ ಅವಕಾಶ: ಅಸಮಾಧಾನ ತೋರಿದ ಮಾಜಿ ಆಟಗಾರ
ತ್ರಿವರ್ಣದೊಂದಿಗೆ ಹೆಜ್ಜೆ ಹಾಕಿದ ಶರತ್ ಕಮಲ್, ನಿಖತ್ ಜರೀನ್