ಸತತ 4ನೇ ಬಾರಿ ಮಂಗಳೂರು ವಿ.ವಿ. ಚಾಂಪಿಯನ್‌

80ನೇ ಅಂತರ್‌ ವಿ.ವಿ. ಕ್ರೀಡಾಕೂಟ: ಆಳ್ವಾಸ್‌ ಆ್ಯತ್ಲೀಟ್‌ಗಳದೇ ಪಾರಮ್ಯ

Team Udayavani, Jan 7, 2020, 6:30 AM IST

champion

ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ 80ನೇ ಅ.ಭಾ. ಅಂತರ್‌ ವಿ.ವಿ. ಆ್ಯತ್ಲೆಟಿಕ್‌ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸಮಗ್ರ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಸತತ 4ನೇ ಬಾರಿ ಈ ಸಾಧನೆಗೈದು ದಾಖಲೆ ನಿರ್ಮಿಸಿದೆ.

ಮಂಗಳೂರು ವಿ.ವಿ. 170 ಅಂಕ ಗಳಿಸಿ ಅಗ್ರಸ್ಥಾನ ಪಡೆಯಿತು. 98.5 ಅಂಕ ಗಳಿಸಿದ ಚೆನ್ನೈಯ ಮದ್ರಾಸ್‌ ವಿ.ವಿ. ದ್ವಿತೀಯ ಹಾಗೂ 80 ಅಂಕ ಪಡೆದ ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿ.ವಿ. ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದೆ.

ಕ್ರೀಡಾಕೂಟದಲ್ಲಿ ಒಟ್ಟು 9 ಕೂಟ ದಾಖಲೆಯಾಗಿದ್ದು 4 ಕೂಟ ದಾಖಲೆಗಳನ್ನು ಮಂಗಳೂರು ವಿ.ವಿ. ಕ್ರೀಡಾಳುಗಳೇ ನಿರ್ಮಿಸಿ ದ್ದಾರೆ. ಮಂಗಳೂರು ವಿ.ವಿ. 9 ಚಿನ್ನ, 9 ಬೆಳ್ಳಿ ಹಾಗೂ 5 ಕಂಚಿನ ಪದಕ ಸಹಿತ ಒಟ್ಟು 23 ಪದಕ ಪಡೆದ ಸಾಧನೆ ಮಾಡಿದೆ.

ಅಂತಿಮ ದಿನ ಎರಡು ಕೂಟ ದಾಖಲೆ
ಕೂಟದ ಅಂತಿಮ ದಿನವಾದ ಸೋಮವಾರ ಎರಡು ಕೂಟ ದಾಖಲೆಗಳು ನಿರ್ಮಾಣವಾಗಿವೆ. ಮಹಿಳೆಯರ 1,500 ಮೀ. ಓಟದಲ್ಲಿ ಪಟಿಯಾಲದ ಪಂಜಾಬಿ ವಿ.ವಿ.ಯ ಹರ್‌ಮಿಲನ್‌ 4 ನಿ.24.86ಸೆ.ನಲ್ಲಿ ಗುರಿ ಮುಟ್ಟುವ ಮೂಲಕ ಕ್ಯಾಲಿಕಟ್‌ ವಿ.ವಿ. ಯ ಚಿತ್ರಾ ಪಿ.ಯು. (4ನಿ.24.87ಸೆ.) ಅವರ ಹೆಸರಲ್ಲಿದ್ದ ದಾಖಲೆ ಅಳಿಸಿ ಹಾಕಿದರು.

ಪುರುಷರ ವಿಭಾಗದ ಟ್ರಿಪಲ್‌ ಜಂಪ್‌ನಲ್ಲಿ ಮಂಗಳೂರು ವಿ.ವಿ.ಯ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿ ಪ್ರದೀಪ್‌ ಜಯ್‌ ಶಾ (16.53 ಮೀ) ಹಿಂದಿನ ತಮ್ಮದೇ ಕೂಟ ದಾಖಲೆ (16.36 ಮೀ.) ಮುರಿದು ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.

ಜಯ್‌ ಶಾ, ಜ್ಯೋತಿ ಉತ್ತಮ ಆ್ಯತ್ಲೀಟ್ಸ್‌
ಮಂಗಳೂರು ವಿ.ವಿ.ಯ ಆಳ್ವಾಸ್‌ ಕಾಲೇಜಿನ ಜಯ್‌ ಶಾ ಪ್ರದೀಪ್‌ ಪುರುಷರ ವಿಭಾಗದ ಉತ್ತಮ ಕ್ರೀಡಾಪಟು ಪ್ರಶಸ್ತಿ ಎತ್ತಿಕೊಂಡರು. ಮಹಿಳೆಯರಲ್ಲಿ ಆಚಾರ್ಯ ನಾಗಾರ್ಜುನ ವಿ.ವಿ.ಯ ವೈ. ಜ್ಯೋತಿ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

81 ಕ್ರೀಡಾಳುಗಳಲ್ಲಿ 75 ಮಂದಿ ಆಳ್ವಾಸ್‌ನವರು
ಮಂಗಳೂರು ವಿ.ವಿ.ಯನ್ನು ಪ್ರತಿನಿ ಧಿಸಿದ ಒಟ್ಟು 81 ಕ್ರೀಡಾಪಟುಗಳ ಪೈಕಿ 75 ಮಂದಿ ಆಳ್ವಾಸ್‌ ಕಾಲೇಜಿನವರು. ಮಂಗಳೂರು ವಿ.ವಿ. ನಿರ್ಮಿಸಿದ ಒಟ್ಟು 4 ಕೂಟ ದಾಖಲೆಗಳು ಮತ್ತು 9 ಚಿನ್ನ, 9 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಪಡೆದ ಕೀರ್ತಿ ಆಳ್ವಾಸ್‌ ಕಾಲೇಜಿನವರದ್ದೇ ಆಗಿದೆ. ಕ್ರೀಡಾಕೂಟವನ್ನು ಆಯೋಜಿಸಿದ್ದ ರಾಜೀವ್‌ ಗಾಂ ಧಿ ಆರೋಗ್ಯ ವಿಜ್ಞಾನಗಳ ವಿ.ವಿ. 3 ಕಂಚಿನ ಪದಕಗಳನ್ನು ಪಡೆದಿದೆ.

ವ್ಯವಸ್ಥೆಗೆ ಮೆಚ್ಚುಗೆ
80ನೇ ಕ್ರೀಡಾಕೂಟದಲ್ಲಿ ದಾಖಲೆಯ 400ಕ್ಕೂ ಹೆಚ್ಚಿನ ವಿ.ವಿ.ಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರೀಡಾ ಅಧಿ ಕಾರಿಗಳು ಸೇರಿದಂತೆ ಒಟ್ಟು 6000ಕ್ಕೂ ಹೆಚ್ಚಿನ ಮಂದಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರೂ ಕಿಂಚಿತ್ತೂ ಲೋಪವಾಗದಂತೆ ವ್ಯವಸ್ಥಿತವಾಗಿ ಕೂಟವನ್ನು ಆಯೋಜಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವರ ನೇತೃತ್ವದಲ್ಲಿ ನಡೆದಿದ್ದ ಆಹಾರೋಪಚಾರ, ವಾಸ್ತವ್ಯ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು.

9 ಕೂಟ ದಾಖಲೆಗಳು
ಈ ಕೂಟವು ಒಟ್ಟು 9 ಕೂಟ ದಾಖಲೆಗಳಿಗೆ ಸಾಕ್ಷಿಯಾಯಿತು. ಪುರುಷರ ವಿಭಾಗದಲ್ಲಿ 5,000 ಮೀ., 10,000 ಮೀ. ಓಟ, 20 ಕಿ.ಮೀ ನಡಿಗೆ ಹಾಗೂ ಟ್ರಿಪಲ್‌ ಜಂಪ್‌, ಮಹಿಳೆಯರ ವಿಭಾಗದಲ್ಲಿ 100 ಮೀ. ಹರ್ಡಲ್ಸ್‌, 1,500 ಮೀ. ಓಟ, 3,000 ಮೀ. ಸ್ಟೀಪಲ್‌ ಚೇಸ್‌, 20 ಕಿ.ಮೀ. ನಡಿಗೆ, ಉದ್ದ ಜಿಗಿತದಲ್ಲಿ ಕೂಟ ದಾಖಲೆಗಳು ನಿರ್ಮಾಣವಾದವು.

ಟಾಪ್ ನ್ಯೂಸ್

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Protest across the state if Ramanagara name is changed: pramod muthalik

Bengaluru South; ರಾಮನಗರ ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಮುತಾಲಿಕ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Screenshot (7) copy

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.