ಫೆಲಿಕ್ಸ್‌ ಸ್ಟಾಮ್‌ ಬಾಕ್ಸಿಂಗ್‌: ಗೌರವ್‌, ಮನೀಷ್‌ಗೆ ಚಿನ್ನ


Team Udayavani, May 6, 2019, 9:56 AM IST

gaurav

ವಾರ್ಸ (ಪೋಲೆಂಡ್‌): ಗೌರವ್‌ ಸೋಲಂಕಿ ಮತ್ತು ಮನೀಷ್‌ ಕೌಶಿಕ್‌ ಅವರ ಚಿನ್ನದ ಪದಕದೊಂದಿಗೆ ಭಾರತ “ಫೆಲಿಕ್ಸ್‌ ಸ್ಟಾಮ್‌ ಅಂತಾರಾಷ್ಟ್ರೀಯ ಬಾಕ್ಸಿಂಗ್‌’ ಕೂಟವನ್ನು 6 ಪದಕಗಳೊಂದಿಗೆ ಮುಗಿಸಿದೆ.

ಭಾರತದ ಬಾಕ್ಸರ್‌ಗಳು ಎರಡು ಚಿನ್ನ ಸಹಿತ ಒಂದು ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 22 ವರ್ಷದ ಸೋಲಂಕಿ 52 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ನ‌ ವಿಲಿಯಮ್ಸ್‌ ಕ್ಯಾಲೆ ವಿರುದ್ಧ 5-0 ಅಂಕಗಳಿಂದ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

60 ಕೆ.ಜಿ. ಸ್ಪರ್ಧೆಯ ಫೈನಲ್‌ನಲ್ಲಿ ಮನೀಷ್‌ ಕೌಶಿಕ್‌ ಮೊರೊಕ್ಕೊದ ಮೊಹಮ್ಮದ್‌ ಹ್ಯಾಮ್‌ಔಟ್‌ ಅವರನ್ನು 4-1 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಜಯಿಸಿದರು. 56 ಕೆ.ಜಿ. ವಿಭಾಗದ ಬಾಟಮ್‌ವೇಟ್‌ ಸ್ಪರ್ಧೆಯ ಫೈನಲ್‌ ಪ್ರವೇಶಿಸಿದ್ದ ಮೊಹ್ಮಮ್ಮದ್‌ ಹುಸ್ಸಮುದ್ದೀನ್‌ 1-4 ಅಂಕಗಳ ಹಿನ್ನಡೆಯಿಂದ ರಶ್ಯದ ಮುಖಮ್ಮದ್‌ ಶೆಖೊವ್‌ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

3 ಕಂಚು: ಉಳಿದ ಮೂವರು ಬಾಕ್ಸರ್‌ಗಳು ತಮ್ಮ ವಿಭಾಗದ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಸೋತು ಕಂಚು ಗೆದ್ದರು. 69 ಕೆ.ಜಿ. ವಿಭಾಗದಲ್ಲಿ ಮನ್‌ದೀಪ್‌ ಜಂಗ್ರಾ ರಶ್ಯದ ವಡೀಮ್‌ ಮುಸೇವ್‌ ವಿರುದ್ಧ 0-5 ಅಂಕಗಳಿಂದ ಪರಾಭವಗೊಂಡರು. 91 ಕೆ.ಜಿ. ವಿಭಾಗದಲ್ಲಿ ಸಂಜೀತ್‌ ನ್ಯೂಜಿಲ್ಯಾಂಡ್‌ನ‌ ಡೇವಿಡ್‌ ನೈಕಾ ಅವರ ಕೈಯಲ್ಲಿ ಸೋತರು. 64 ಕೆ.ಜಿ. ವಿಭಾಗದಲ್ಲಿ ಅಂಕಿತ್‌ ಖತಾನ್‌ ಭಾರೀ ಫೈಪೋಟಿ ನೀಡಿಯೂ 2-3 ಅಂತರದಿಂದ ಆತಿಥೇಯ ನಾಡಿನ ಡಾಮಿಯನ್‌ ಡರ್ಕಾಕ್‌ ವಿರುದ್ಧ ಮುಗ್ಗರಿಸಿ ಕಂಚಿನ ಪದಕ ಜಯಿಸಿದರು.

ಟಾಪ್ ನ್ಯೂಸ್

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ

1-asddasdsa

ODI ಸ್ಮೃತಿ ಮಂಧನಾ ಅಮೋಘ ಶತಕ; ಮಂಕಾದ ದಕ್ಷಿಣ ಆಫ್ರಿಕಾ

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

arrested

ಸಲ್ಮಾನ್‌ ಮನೆ ಹೊರಗೆ ಗುಂಡಿನ ದಾಳಿ: ರಾಜಸ್ಥಾನದ ವ್ಯಕ್ತಿ ಸೆರೆ

baby

UP ಕ್ಷುಲ್ಲಕ ಕಾರಣಕ್ಕೆ 2 ವರ್ಷದ ಮಗಳನ್ನು ಕಾಲುವೆಗೆಸೆದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.