Baby Boy; ಆಸ್ಟ್ರೇಲಿಯದ ಆಲ್ರೌಂಡರ್ ಮ್ಯಾಕ್ಸ್ವೆಲ್ಗೆ ಗಂಡು ಮಗು
Team Udayavani, Sep 16, 2023, 2:29 AM IST
ಮೆಲ್ಬರ್ನ್: ಆಸ್ಟ್ರೇಲಿಯದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ತಂದೆಯಾದ ಸಿಹಿ ಸುದ್ದಿಯನ್ನು ಬಿತ್ತರಿಸಿದ್ದಾರೆ.
ಅವರ ಭಾರತೀಯ ಮೂಲದ ಪತ್ನಿ ವಿನಿ ರಾಮನ್ ಸೆ. 11ರಂದು ಗಂಡು ಮಗುವಿಗೆ ಜನ್ಮವಿತ್ತರು. ಮಗುವಿಗೆ ಲೋಗನ್ ಮಾವೆರಿಕ್ ಎಂದು ಹೆಸರಿಡಲಾಗಿದೆ ಎಂಬುದಾಗಿಯೂ ಮ್ಯಾಕ್ಸ್ ವೆಲ್ ತಿಳಿಸಿದ್ದಾರೆ.
ಮಗುವಿನ ಚಿತ್ರವೊಂದನ್ನು ವಿನಿ ಸಾಮಾ ಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, “11.09.2023. ಲೋಗನ್ ಮಾವೆರಿಕ್ ಮ್ಯಾಕ್ಸ್ ವೆಲ್’ ಎಂಬ ಶೀರ್ಷಿಕೆ ನೀಡಿದ್ದಾರೆ. 2022ರ ಮಾರ್ಚ್ 18ರಂದು ಗ್ಲೆನ್ ಮ್ಯಾಕ್ಸ್ವೆಲ್-ವಿನಿ ರಾಮನ್ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದರು. ಸದ್ಯ ಗಾಯಾಳಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ದಕ್ಷಿಣ ಆಫ್ರಿಕಾ ಪ್ರವಾಸ ದಿಂದ ಬೇರ್ಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ