Ranji Trophy; ಅವಮಾನವಾಗಿದೆ..: ಇನ್ನು ಮುಂದೆ ಆಂಧ್ರ ಪರ ಆಡುವುದಿಲ್ಲ ಎಂದ ಹನುಮ ವಿಹಾರಿ


Team Udayavani, Feb 26, 2024, 5:57 PM IST

ಅವಮಾನವಾಗಿದೆ..: ಇನ್ನು ಮುಂದೆ ಆಂಧ್ರ ಪರ ಆಡುವುದಿಲ್ಲ ಎಂದ ಹನುಮ ವಿಹಾರಿ

ಹೈದರಾಬಾದ್: ಟೀಂ ಇಂಡಿಯಾದ ಸಿಡ್ನಿ ಟೆಸ್ಟ್ ಮ್ಯಾಚ್ ಹೀರೊ ಹನುಮ ವಿಹಾರಿ ಅವರು ಇನ್ನು ಮುಂದೆ ಆಂಧ್ರ ಪ್ರದೇಶದ ಪರವಾಗಿ ಆಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್ ಮಾಡಿರುವ ವಿಹಾರಿ, ಆಟಗಾರನೊಂದಿಗಿನ ಜಗಳದ ಬಳಿಕ ನನಗೆ ನಾಯಕತ್ವಕ್ಕೆ ರಾಜೀನಾಮೆ ನೀಡುವಂತೆ ಕೇಳಲಾಯಿತು. ಆ ಆಟಗಾರನ ತಂದೆ ‘ರಾಜಕಾರಣಿ’ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಗೆ ದೂರು ನೀಡಿದ್ದರು ಎಂದು ಹೇಳಿದ್ದಾರೆ.

“ಬೆಂಗಾಲದ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ನಾಯಕನಾಗಿದ್ದೆ. ಆ ಆಟದ ಸಮಯದಲ್ಲಿ ನಾನು 17 ನೇ ಆಟಗಾರನ ಮೇಲೆ ಕೂಗಾಡಿದ್ದೆ. ಅವನು ತನ್ನ ತಂದೆಗೆ (ರಾಜಕಾರಣಿಯಾಗಿದ್ದ) ದೂರು ನೀಡಿದ್ದ, ಪ್ರತಿಯಾಗಿ ಅವರ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸೋಸಿಯೇಷನ್‌ ಗೆ ಕೇಳಿದರು. ಬಂಗಾಳ ವಿರುದ್ದದ ಪಂದ್ಯದಲ್ಲಿ ನಾವು ಗೆದ್ದರೂ, ನನ್ನ ಯಾವುದೇ ತಪ್ಪು ಇಲ್ಲದೆ ಹೋದರೂ ರಾಜೀನಾಮೆ ಕೊಡಲು ನನ್ನಲ್ಲಿ ಕೇಳಲಾಯಿತು. ನಾನು ವೈಯಕ್ತಿಕವಾಗಿ ಆ ಆಟಗಾರನಿಗೆ ಏನೂ ಹೇಳಿರಲಿಲ್ಲ. ಆದರೆ ಕಳೆದ ಏಳು ವರ್ಷಗಳಲ್ಲಿ ಐದು ಬಾರಿ ತಂಡವನ್ನು ನಾಕೌಟ್ ಗೆ ತಲುಪಿಸಿದ, ತಂಡಕ್ಕೆ ಎಲ್ಲವನ್ನೂ ಕೊಟ್ಟ ಆಟಗಾರನಿಗಿಂತ ಆ ಆಟಗಾರನೇ ಮಂಡಳಿಗೆ ಪ್ರಿಯವಾದ. ನಾನು ಮುಜುಗರ ಅನುಭವಿಸಿದೆ, ಆದರೆ ನಾನು ಆಟ ಮತ್ತು ನನ್ನ ತಂಡವನ್ನು ಗೌರವಿಸುವ ಏಕೈಕ ಕಾರಣದಿಂದ ಈ ಋತುವಿನಲ್ಲಿ ಆಟವಾಡುವುದನ್ನು ಮುಂದುವರೆಸಿದೆ” ಎಂದು ವಿಹಾರಿ ಬರೆದುಕೊಂಡಿದ್ದಾರೆ.

“ದುಃಖದ ಭಾಗವೆಂದರೆ ಆಟಗಾರರು ತಾವು ಹೇಳುವುದನ್ನು ಕೇಳಬೇಕು ಮತ್ತು ಅವರ ಕಾರಣದಿಂದಾಗಿ ಆಟಗಾರರು ಇದ್ದಾರೆ ಎಂದು ಅಸೋಸಿಯೇಷನ್ ಭಾವಿಸುತ್ತದೆ. ನಾನು ಅವಮಾನ ಮತ್ತು ಮುಜುಗರವನ್ನು ಅನುಭವಿಸಿದೆ. ಆದರೆ ನಾನು ಅದನ್ನು ಇಂದಿನವರೆಗೂ ವ್ಯಕ್ತಪಡಿಸಿಲ್ಲ. ನಾನು ನನ್ನ ಆತ್ಮಗೌರವವನ್ನು ಕಳೆದುಕೊಂಡಿರುವ ಆಂಧ್ರದ ಪರವಾಗಿ ನಾನು ಎಂದಿಗೂ ಆಡುವುದಿಲ್ಲ ಎಂದು ನಿರ್ಧರಿಸಿದೆ. ನಾನು ತಂಡವನ್ನು ಪ್ರೀತಿಸುತ್ತೇನೆ. ನಾವು ಪ್ರತಿ ಋತುವಿನಲ್ಲಿ ಬೆಳೆಯುತ್ತಿರುವ ರೀತಿಯನ್ನು ನಾನು ಪ್ರೀತಿಸುತ್ತೇನೆ. ಆದರೆ ಮಂಡಳಿಯು ನಾವು ಬೆಳೆಯುವುದನ್ನು ಬಯಸುವುದಿಲ್ಲ” ಎಂದು ವಿಹಾರಿ ಹೇಳಿದರು.

ಟಾಪ್ ನ್ಯೂಸ್

Temple: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

Temple: ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

2-

Crocodile: ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ !

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

1-weweewqe

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

1-24-saturday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

IPL (2)

IPL; ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ, 64000 ರೂ. ನೀಡಿ ಟಿಕೆಟ್‌ ಖರೀದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweewqe

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

IPL (2)

IPL; ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ, 64000 ರೂ. ನೀಡಿ ಟಿಕೆಟ್‌ ಖರೀದಿ!

Rohit SHarma (2)

Retirement ಸದ್ಯಕ್ಕಿಲ್ಲ, ಇನ್ನೂ ಹಲವು ವರ್ಷ ಆಡುತ್ತೇನೆ: ರೋಹಿತ್‌ ಶರ್ಮ

1-wqeeqwe

BCCI;ಹಲವು ಸಂಗತಿಗಳು ಆಟಗಾರರ ಕೈಯಲ್ಲಿ ಇರಲ್ಲ: ಇಶಾನ್‌ ಕಿಶನ್‌

1-qwewqeqw

Hockey; ಐದು ಪಂದ್ಯಗಳ ಸರಣಿ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ನಾಲ್ಕನೇ ಸೋಲು

MUST WATCH

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

ಹೊಸ ಸೇರ್ಪಡೆ

3-mangaluru

Mangaluru: ಪೂರ್ವ ಮುಂಗಾರು ನಿರೀಕ್ಷೆಯಲ್ಲಿ ಭತ್ತದ ಕೃಷಿ!

Temple: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

Temple: ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

2-

Crocodile: ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ !

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

1-weweewqe

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.