ಎಫ್ಐಎಚ್ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್: ಭಾರತ ಸೆಮಿಗೆ
Team Udayavani, Apr 8, 2022, 10:58 PM IST
ಪೊಚೆಫ್ಸೂಮ್: ತಮ್ಮ ಅಜೇಯ ಓಟವನ್ನು ಮುಂದುವರಿಸಿರುವ ಭಾರತೀಯ ವನಿತಾ ಹಾಕಿ ತಂಡ, ಶುಕ್ರವಾರದ ಪಂದ್ಯದಲ್ಲಿ ದಕ್ಷಿಣ ಕೊರಿಯವನ್ನು 3-0 ಗೋಲುಗಳಿಂದ ಸೋಲಿಸಿ “ಎಫ್ಐಎಚ್ ಜೂನಿಯರ್ ವಿಶ್ವಕಪ್ ಹಾಕಿ’ ಕೂಟದ ಸೆಮಿಫೈನಲ್ ತಲುಪಿದೆ.
ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಬಣದ ಅಗ್ರಸ್ಥಾನ ಪಡೆದಿದ್ದ ಭಾರತೀಯ ವನಿತೆಯರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯ ವಿರುದ್ಧ ಅಮೋಘ ಪ್ರದರ್ಶನವಿತ್ತರು. ಮುಮ್ತಾಜ್ ಖಾನ್, ಸಂಗೀತಾ ಕುಮಾರಿ ಅವರ ಗೋಲುಗಳ ನೆರವಿನಿಂದ ತಂಡ ಸುಲಭ ಜಯ ಸಾಧಿಸಿತು.
ಇದನ್ನೂ ಓದಿ:ಆಕಾರ್ ಪಟೇಲ್ ವಿದೇಶ ಪ್ರಯಾಣಕ್ಕೆ ದಿಲ್ಲಿ ಕೋರ್ಟ್ ತಡೆ
ರವಿವಾರ ನಡೆಯುವ ಸೆಮಿಫೈನಲ್ನಲ್ಲಿ ಭಾರತದ ವನಿತೆಯರು ನೆದರ್ಲೆಂಡ್ಸ್ ಅಥವಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ.