ಚೆಸ್ ಆಟವನ್ನು ಹೆಚ್ಚು ಪ್ರೀತಿಸುತ್ತೇನೆ : ಸೂಪರ್ಸ್ಟಾರ್ ರಜನಿಕಾಂತ್
Team Udayavani, Jul 28, 2022, 2:09 PM IST
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ 44ನೇ ಚೆಸ್ ಒಲಿಂಪಿಯಾಡ್ಗೆ ತಮಿಳುನಾಡು ಆತಿಥ್ಯ ವಹಿಸಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಅವರು ಚೆಸ್ ಅನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಚೆಸ್ ಆಟಗಾರರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಚೆಸ್ ಒಲಿಂಪಿಯಾಡ್ 2022 ಹ್ಯಾಶ್ಟ್ಯಾಗ್ ಬಳಸಿರುವ ಮೇರು ನಟ, “ನಾನು ಅತ್ಯಂತ ಇಷ್ಟಪಡುವ ಒಳಾಂಗಣ ಆಟ, ಎಲ್ಲಾ ಚೆಸ್ ಆಟಗಾರರಿಗೆ ಶುಭವಾಗಲಿ…ದೇವರು ಆಶೀರ್ವದಿಸಲಿ” ಎಂದು ಹಾರೈಸಿದ್ದಾರೆ.
ರಜನಿಕಾಂತ್ ಅವರು ಚೆಸ್ ಆಡುತ್ತಿರುವ ಮತ್ತು ಚಿಂತನಶೀಲ ಮನಸ್ಥಿತಿಯಲ್ಲಿ ಕಾಣಿಸಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜುಲೈ 28 ರಿಂದ ಆಗಸ್ಟ್ 10 ರವರೆಗೆ ಚೆನ್ನೈಯಿಂದ ಸುಮಾರು 50 ಕಿಮೀ ದೂರದಲ್ಲಿರುವ ಮಾಮಲ್ಲಪುರಂನಲ್ಲಿ ಕ್ರೀಡಾಕೂಟ ನಡೆಯಲಿದೆ.