ಋತುರಾಜ್ ಗಾಯಕ್ವಾಡ್ ಆಕರ್ಷಕ ಶತಕ
Team Udayavani, Sep 15, 2022, 10:37 PM IST
ಬೆಂಗಳೂರು: ನ್ಯೂಜಿಲ್ಯಾಂಡ್ “ಎ’ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಋತುರಾಜ್ ಗಾಯಕ್ವಾಡ್ ಆಕರ್ಷಕ ಶತಕ ಬಾರಿಸಿದ್ದಾರೆ. ಭಾರತ “ಎ’ 293ಕ್ಕೆ ಆಲೌಟ್ ಆಗಿದೆ.
ವನ್ಡೌನ್ನಲ್ಲಿ ಬಂದ ಋತುರಾಜ್ ಗಾಯಕ್ವಾಡ್ 108 ರನ್ ಬಾರಿಸಿದರು (127 ಎಸೆತ, 12 ಬೌಂಡರಿ, 2 ಸಿಕ್ಸರ್). ಕೀಪರ್ ಉಪೇಂದ್ರ ಯಾದವ್ 76, ಆರಂಭಕಾರ ಅಭಿಮನ್ಯು ಈಶ್ವರನ್ 38 ರನ್ ಮಾಡಿದರು ಕಿವೀಸ್ ಮಧ್ಯಮ ವೇಗಿ ಮ್ಯಾಥ್ಯೂ ಫಿಶರ್ 4 ವಿಕೆಟ್ಗಳಿಗೆ ಬಲೆ ಬೀಸಿದರು. ಜೇಕಬ್ ಡಫಿ ಮತ್ತು ಜೋ ವಾಕರ್ ತಲಾ 2 ವಿಕೆಟ್ ಉರುಳಿಸಿದರು.