India vs Afghanistan; ರೋಚಕ ಹೋರಾಟದ 2 ಸೂಪರ್‌ ಓವರ್‌!!: ಭಾರತಕ್ಕೆ ಗೆಲುವು


Team Udayavani, Jan 18, 2024, 6:10 AM IST

1-qeewqeqwe

ಬೆಂಗಳೂರು: ದೊಡ್ಡ ಮೊತ್ತದ ರೋಚಕ ಹೋರಾಟ ಕಂಡ ಬೆಂಗಳೂರಿನ ಅಂತಿಮ ಟಿ20 ಪಂದ್ಯ ಟೈಯಲ್ಲಿ ಅಂತ್ಯಗೊಂಡ ಬಳಿಕ ಅಂತಿಮವಾಗಿ ಎರಡನೇ ಸೂಪರ್‌ ಓವರ್‌ನಲ್ಲಿ ಇತ್ಯರ್ಥ ಕಂಡಿತು. ಇದರಿಂದಾಗಿ ಭಾರತ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು.

ಎರಡನೇ ಸೂಪರ್‌ ಓವರಿನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 5 ಎಸೆತಗಳಲ್ಲಿ ಎರಡು ವಿಕೆಟಿಗೆ 11 ರನ್‌ ಗಳಿಸಿದ್ದರೆ ಅಘಾ^ನಿಸ್ಥಾನ ತಂಡವು ಮೂರು ಎಸೆತಗಳಲ್ಲಿ 2 ವಿಕೆಟಿಗೆ ಕೇವಲ 1 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಈ ಮೊದಲು ನಡೆದ ಮೊದಲ ಸೂಪರ್‌ ಓವರ್‌ನಲ್ಲಿ ಅಘಾ^ನಿಸ್ಥಾನ ಒಂದು ವಿಕೆಟಿಗೆ 16 ರನ್‌ ಗಳಿಸಿದ್ದರೆ ಭಾರತ ಕೂಡ ವಿಕೆಟ್‌ ನಷ್ಟವಿಲ್ಲದೇ 16 ರನ್‌ ಗಳಿಸಿದ್ದರಿಂದ ಮತ್ತೆ ಟೈ ಆಯಿತು. ಈ ಸೂಪರ್‌ ಓವರ್‌ನಲ್ಲಿ ರೋಹಿತ್‌ ಎರಡು ಸಿಕ್ಸರ್‌ ಬಾರಿಸಿ ತಂಡವನ್ನು ಆಧರಿಸಿದ್ದರು.

ಪಂದ್ಯ ಟೈ
ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಭಾರತ 4 ವಿಕೆಟಿಗೆ 212 ರನ್‌ ಪೇರಿಸಿತು. ಇದರಲ್ಲಿ ರೋಹಿತ್‌ ಕೊಡುಗೆ ಅಜೇಯ 121 ರನ್‌. ರಿಂಕು ಸಿಂಗ್‌ ಔಟಾಗದೆ 69 ರನ್‌ ಹೊಡೆದರು. ಇವರಿಬ್ಬರು ಸೇರಿಕೊಂಡು ಅಂತಿಮ 5 ಓವರ್‌ಗಳಲ್ಲಿ 103 ರನ್‌, ಕೊನೆಯ ಓವರ್‌ನಲ್ಲಿ 36 ರನ್‌ ಸೂರೆಗೈದರು. ದಿಟ್ಟ ಜವಾಬಿತ್ತ ಅಫ್ಘಾನಿಸ್ಥಾನ 6 ವಿಕೆಟಿಗೆ 212 ರನ್‌ ಬಾರಿಸಿದ್ದರಿಂದ ಪಂದ್ಯ ಟೈಗೊಂಡಿತು. ಪಂದ್ಯ ಸೂಪರ್‌ ಓವರ್‌ನತ್ತ ಮುಖ ಮಾಡಿತು.

ರೋಹಿತ್‌ ಶರ್ಮ ಅವರ 5ನೇ ಶತಕ ಹೊಡೆದು ಟಿ20ಯಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ಬರೆದರು. ಸೂರ್ಯಕುಮಾರ್‌ ಯಾದವ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ತಲಾ 4 ಸೆಂಚುರಿ ಹೊಡೆದಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಖಾತೆಯನ್ನೇ ತೆರೆಯದಿದ್ದ ರೋಹಿತ್‌ ಇಲ್ಲಿ ಹಿಟ್‌ಮ್ಯಾನ್‌ ಅವತಾರ ಎತ್ತಿದರು. ಕೊನೆಯ ತನಕ ಕ್ರೀಸ್‌ ಆಕ್ರಮಿಸಿಕೊಂಡು ನಿಂತರು. ಅವರ ಶತಕ 64 ಎಸೆತಗಳಲ್ಲಿ ದಾಖಲಾಯಿತು. ಒಟ್ಟು 69 ಎಸೆತ ನಿಭಾಯಿಸಿದ ರೋಹಿತ್‌ 11 ಬೌಂಡರಿ ಹಾಗೂ 8 ಸಿಕ್ಸರ್‌ ಸಿಡಿಸಿದರು.

ರಿಂಕು ಸಿಂಗ್‌ ಅವರ 69 ರನ್‌ 39 ಎಸೆತಗಳಿಂದ ಬಂತು. ಇದರಲ್ಲಿ 2 ಫೋರ್‌, 6 ಸಿಕ್ಸರ್‌ ಸೇರಿತ್ತು. ಇದು ಅವರ 2ನೇ ಫಿಫ್ಟಿ. ರೋಹಿತ್‌-ರಿಂಕು 95 ಎಸೆತಗಳಿಂದ ಮುರಿಯದ 5ನೇ ವಿಕೆಟಿಗೆ 190 ರನ್‌ ಪೇರಿಸಿದರು.
22ಕ್ಕೆ 4 ವಿಕೆಟ್‌ ಉರುಳಿದ ಬಳಿಕ ಜತೆಗೂಡಿದ ರೋಹಿತ್‌-ರಿಂಕು ಅಫ್ಘಾನ್‌ ಬೌಲರ್‌ಗಳಿಗೆ ತಿರುಗೇಟು ನೀಡಿದರು.

ಈ ಜವಾಬ್ದಾರಿಯುತ ಬ್ಯಾಟಿಂಗ್‌ ವೇಳೆ ರೋಹಿತ್‌ ಶರ್ಮ ಟಿ20ಯಲ್ಲಿ ಅತ್ಯಧಿಕ ರನ್‌ ಗಳಿಸಿದ ಭಾರತದ ನಾಯಕರೆನಿಸಿದರು. ವಿರಾಟ್‌ ಕೊಹ್ಲಿ ಅವರ 1,570 ರನ್ನುಗಳ ದಾಖಲೆ ಪತನಗೊಂಡಿತು. ಮೊದಲ ಓವರ್‌ನಲ್ಲೇ 11 ರನ್‌ ಬಿಟ್ಟುಕೊಟ್ಟ ಫ‌ರೀದ್‌ ಅಹ್ಮದ್‌, ಪವರ್‌ ಪ್ಲೇಯಲ್ಲೇ ಭಾರತಕ್ಕೆ ಕಂಟಕವಾಗಿ ಕಾಡಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ-4 ವಿಕೆಟಿಗೆ 212 (ರೋಹಿತ್‌ ಔಟಾಗದೆ 121, ರಿಂಕು ಔಟಾಗದೆ 69, ಫ‌ರೀದ್‌ 20ಕ್ಕೆ 3). ಅಫ್ಘಾನಿಸ್ಥಾನ 6 ವಿಕೆಟಿಗೆ 212 (ಗುರ್ಬಜ್‌ 50, ಜದ್ರಾನ್‌ 50, ನೈಬ್‌ ಔಟಾಗದೆ 55, ನಬಿ 34, ವಾಷಿಂಗ್ಟನ್‌ 18ಕ್ಕೆ 3).

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.