ಖೇಲೋ ಇಂಡಿಯಾ ಖೋ-ಖೋದಲ್ಲಿ ರಾಜ್ಯಕ್ಕೆ 2 ಕಂಚು
Team Udayavani, Feb 8, 2018, 6:25 AM IST
ಹೊಸದಿಲ್ಲಿ: ಕಳೆದ ಎರಡು ದಿನಗಳಿಂದ ತೀವ್ರ ಪದಕದ ಬರ ಎದುರಿಸಿದ್ದ ಕರ್ನಾಟಕ ತಂಡ ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟದಲ್ಲಿ 8ನೇ ದಿನವಾದ ಬುಧವಾರ ಎರಡು ಕಂಚಿನ ಪದಕ ಗೆದ್ದಿದೆ.
ಖೋ-ಖೋದಲ್ಲಿ ಕರ್ನಾಟಕ ಬಾಲಕ-ಬಾಲಕಿಯರು ಪದಕ ಗೆದ್ದು ಸಮಾಧಾನ ಮೂಡಿಸಿದರು. ಕರ್ನಾಟಕ ಬಾಲಕರ ತಂಡ 9-12 ಅಂಕಗಳ ಅಂತರದಿಂದ ಮಹಾರಾಷ್ಟ್ರ ವಿರುದ್ಧ ಸೋಲು ಅನುಭವಿಸಿ ಕಂಚಿಗೆ ತೃಪ್ತಿಪಟ್ಟಿತು. ರಾಜ್ಯ ತಂಡವನ್ನು ವೇಣುಗೋಪಾಲ್, ಮಣಿಕಂಠನ್, ಶರತ್, ಕೃಷ್ಣ, ದಿನೇಶ್, ಹಾಲೇಶ್ ಪ್ರತಿನಿಧಿಸಿದ್ದರು.
ಬಾಲಕಿಯರ ತಂಡ 8-9 ಅಂಕಗಳ ಅಂತರದಿಂದ ಗುಜರಾತ್ ತಂಡದ ವಿರುದ್ಧ ಸೋಲು ಅನುಭವಿಸಿತು. ರಾಜ್ಯದ ತಂಡವನ್ನು ಮೋನಾಶ್ರೀ, ಮೇಘನಾ, ಮೋನಿಕಾ, ಅನುಷಾ, ಪವಿತ್ರಾ, ಚೈತ್ರಾ ಪ್ರತಿನಿಧಿಸಿದ್ದರು.