ಮ್ಯಾಡ್ರಿಡ್‌ ಓಪನ್‌: ಸೆಮಿಫೈನಲ್‌ ಗೆ ನಡಾಲ್

ಫೆಡರರ್‌ಗೆ ಸೋಲು; ಫೈನಲ್ ಪ್ರವೇಶಿಸಿದ ಹಾಲೆಪ್‌

Team Udayavani, May 12, 2019, 6:00 AM IST

ಮ್ಯಾಡ್ರಿಡ್‌:  5 ಬಾರಿಯ ಚಾಂಪಿಯನ್‌ ರಫೆಲ್ ನಡಾಲ್ ‘ಮ್ಯಾಡ್ರಿಡ್‌ ಓಪನ್‌’ ಟೆನಿಸ್‌ ಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಡಾಲ್ ಸ್ಟಾನ್‌ ವಾಂವ್ರಿಕ ವಿರುದ್ಧ ಕೇವಲ ಒಂದು ಗಂಟೆ ಕಾದಾಟದಲ್ಲಿ 6-1, 6-2 ನೇರ ಸೆಟ್‌ಗಳ ಗೆಲವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. 2ನೇ ಶ್ರೇಯಾಂಕದ ನಡಾಲ್ ಕಳೆದ 15 ವರ್ಷಗಳಲ್ಲಿ 14ನೇ ಬಾರಿ ‘ಮ್ಯಾಡ್ರಿಡ್‌ ಓಪನ್‌’ ಕೂಟದ ಕ್ವಾರ್ಟರ್‌ಫೈನಲ್ನಲ್ಲಿ ಆಡುತ್ತಿದ್ದಾರೆ.

ಸೆಮಿಫೈನಲ್ನಲ್ಲಿ ನಡಾಲ್ ಗ್ರೀಕ್‌ನ ಸ್ಟಿಫ‌ನಸ್‌ ಸಿಸಿಪಸ್‌ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಕ್ವಾರ್ಟರ್‌ ಫೈನಲ್ನಲ್ಲಿ ಸಿಸಿಪಸ್‌ ಹಾಲಿ ಚಾಂಪಿಯನ್‌ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ 7-5, 3-6, 6-2 ಸೆಟ್‌ಗಳ ಗೆಲುವು ದಾಖಲಿಸಿ ಸೆಮಿಫೈನಲ್ಗೆ ಪ್ರವೇಶಿಸಿದರು.

ಫೆಡರರ್‌ಗೆ ಆಘಾತ
ಇನ್ನೊಂದು ಕ್ವಾರ್ಟರ್‌ ಫೈನಲ್ ಕಾದಾಟದಲ್ಲಿ ರೋಜರ್‌ ಫೆಡರರ್‌ ಡೋಮಿನಿಕ್‌ ಥೀಮ್‌ ವಿರುದ್ಧ ಸೋಲು ಆಘಾತ ಅನುಭವಿಸಿದ್ದಾರೆ.

ಆವೆಮಣ್ಣಿನಲ್ಲಿ 3 ವರ್ಷದ ಅನಂತರ ಆಟಕ್ಕಿಳಿದ ಫೆಡರರ್‌ ಭಾರೀ ಹೋರಾಟದ ಬಳಿಕ 6-3, 6-7 (11-13), 4-6 ಸೆಟ್‌ಗಳಿಂದ ಸೋತು ಕೂಟದಿಂದ ನಿರ್ಗಮಿಸಿದರು. ಮೊದಲ ಸೆಟ್‌ನಲ್ಲಿ ಗೆದ್ದ ಫೆಡರರ್‌ಗೆ ದ್ವಿತೀಯ ಸೆಟ್‌ನಲ್ಲಿ ಥೀಮ್‌ ಅವರಿಂದ ಭಾರೀ ಪೈಪೋಟಿಯೇ ದೊರಕಿತು. ಟೈ ಬ್ರೇಕರ್‌ಗೆ ಸಾಗಿದ ಸೆಟ್‌ನಲ್ಲಿ ಥೀಮ್‌ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ನಿರ್ಣಾಯ ಸೆಟ್‌ನಲ್ಲೂ ಪ್ರಾಬಲ್ಯ ಮೆರೆದ ಥೀಮ್‌ 6-4 ಅಂತರದಿಂದ ಗೆದ್ದ ಸೆಮಿಫೈನಲ್ ಪ್ರವೇಶಿಸಿದರು. ಸೆಮಿಯಲ್ಲಿ ಅವರು ವಿಶ್ವದ ನಂ. ವನ್‌ ಆಟಗಾರ ನೊವಾಕ್‌ ಜೊಕೋವಿಕ್‌ ವಿರುದ್ಧ ಸೆಣೆಸಾಡಲಿದ್ದಾರೆ.

ಫೈನಲ್ ಹಾಲೆಪ್‌
ವನಿತಾ ವಿಭಾಗದ ಸೆಮಿಫೈನಲ್ನಲ್ಲಿ ಪಂದ್ಯದಲ್ಲಿ ಬೆಲಿಂಡಾ ಬೆನ್ಸಿಕ್‌ ವಿರುದ್ಧ ಗೆಲುವು ದಾಖಲಿಸಿದ ಸಿಮೋನಾ ಹಾಲೆಪ್‌ 4ನೇ ಬಾರಿಗೆ ‘ಮ್ಯಾಡ್ರಿಡ್‌ ಓಪನ್‌’ ಫೈನಲ್ಗೆ ಕಾಲಿಟ್ಟಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ನಲ್ಲಿ ರೊಮೇನಿಯದ ಹಾಲೆಪ್‌ ಸ್ವಿಟ್ಸರ್ಲಂಡ್‌ನ‌ ಬೆಲಿಂಡಾ ಅವರನ್ನು 6-2, 6-7 (2-7), 6-0 ಸೆಟ್‌ಗಳಿಂದ ಗೆದ್ದು ನೆದರ್‌ಲ್ಯಾಂಡ್‌ನ‌ ಕಿಕಿ ಬರ್ಟೆನ್ಸ್‌ ವಿರುದ್ಧ ಫೈನಲ್ ಕಾದಾಟಕ್ಕೆ ಸಿದ್ಧರಾಗಿದ್ದಾರೆ. ಒಂದು ವೇಳೆ ಫೈನಲ್ನಲ್ಲಿ ಹಾಲೆಪ್‌ ಜಯಿಸಿದರೇ ನೂತನ ರ್‍ಯಾಂಕಿಂಗ್‌ನಲ್ಲಿ ನವೋಮಿ ಒಸಾಕಾ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ