ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌ಗೆ ಸೋಲು

ರಾಂಕಿರೆಡ್ಡಿ, ಚಿರಾಗ್‌ ಶೆಟ್ಟಿಗೆ ಮೊದಲ ಸುತ್ತಿನಲ್ಲಿ ಆಘಾತ

Team Udayavani, Jan 8, 2020, 6:14 AM IST

LAKSYA-SEN

ಕೌಲಾಲಂಪುರ: ಭಾರತದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್‌ ಕೂಟದ ಮೊದಲ ಸುತ್ತಿನಲ್ಲಿಯೇ ಸೋತು ನಿರಾಶೆಗೊಳಿಸಿದ್ದಾರೆ. ಇದೇ ವೇಳೆ ಲಕ್ಷ್ಯಸೇನ್‌ ಮುಖ್ಯ ಡ್ರಾದಲ್ಲಿ ಆಡಲು ವಿಫ‌ಲರಾಗಿದ್ದಾರೆ.

ವಿಶ್ವದ 12ನೇ ರ್‍ಯಾಂಕಿನ ಡಬಲ್ಸ್‌ ಜೋಡಿ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಕಠಿನ ಹೋರಾಟದಲ್ಲಿ ಮಲೇಶ್ಯದ ಆಂಗ್‌ ಯ್ಯು ಸಿನ್‌ ಮತ್ತು ತಿಯೊ ಇ ಯಿ ಅವರೆದುರು 15-21, 21-18, 15-21 ಗೇಮ್‌ಗಳಿಂದ ಶರಣಾದರು. ಪೂಜಾ ದಂಡು ಮತ್ತು ಸಂಜನಾ ಸಂತೋಷ್‌ ಅವರನ್ನು ಒಳಗೊಂಡ ವನಿತಾ ಡಬಲ್ಸ್‌ ಜೋಡಿ ಈ ಮೊದಲು ಅರ್ಹತಾ ಸುತ್ತಿನಲ್ಲಿಯೇ ಸೋತಿತ್ತು.

ಕಶ್ಯಪ್‌ಗೆ ಕೆಂಟೊ ಸವಾಲು
ಪಾರುಪಳ್ಳಿ ಕಶ್ಯಪ್‌ ಅವರು ಬುಧವಾರ ಅಗ್ರ ಶ್ರೇಯಾಂಕದ ಕೆಂಟೊ ಮೊಮೊಟ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕಿದಂಬಿ ಶ್ರೀಕಾಂತ್‌ ಇನ್ನೊಂದು ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಚೈನೀಸ್‌ ತೈಪೆಯ ಚೊ ತಿಯಾನ್‌ ಚೆನ್‌ ಅವರ ಸವಾಲಿಗೆ ಉತ್ತರಿಸಲಿದ್ದಾರೆ. ಸಮೀರ್‌ ವರ್ಮ, ಎಚ್‌.ಎಸ್‌. ಪ್ರಣಯ್‌ ಮತ್ತು ಬಿ. ಸಾಯಿಪ್ರಣೀತ್‌ ಕೂಡ ಬುಧವಾರ ಮೊದಲ ಸುತ್ತಿನಲ್ಲಿ ಆಡಲಿದ್ದಾರೆ.

ವನಿತೆಯರ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಪಿ.ವಿ. ಸಿಂಧು ರಶ್ಯದ ಎವ್‌ಗೇನಿಯಾ ಕೊಸೆಟ್ಸ್‌ ಕಾಯ ಅವರನ್ನು ಎದುರಿಸಲಿದ್ದರೆ ಸೈನಾ ನೆಹ್ವಾಲ್‌ ಅವರು ಬೆಲ್ಜಿಯಂನ ಲಿಯಾನ್ನೆ ತಾನ್‌ ಅವರ ಸವಾಲಿಗೆ ಉತ್ತರಿಸಲಿದ್ದಾರೆ.

ಕೂಟದಿಂದ ಹೊರಬಿದ್ದ ಸೇನ್‌
ಭರವಸೆಯ ಶಟ್ಲರ್‌ ಲಕ್ಷ್ಯಸೇನ್‌ ಮಲೇಶ್ಯ ಮಾಸ್ಟರ್ ಕೂಟದ ಅರ್ಹತಾ ಸುತ್ತಿನಲ್ಲಿ ಸೋತು ಕೂಟದಿಂದ ಹೊರಬಿದ್ದಿದ್ದಾರೆ. ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಅವರು ಡೆನ್ಮಾರ್ಕ್‌ನ ಹ್ಯಾನ್ಸ್‌ ಕ್ರಿಸ್ಟಿಯನ್‌ ಸೋಲ್ಬರ್ಗ್‌ ವಿಟ್ಟಿಂಗಸ್‌ ಅವರೆದುರು 21-11, 18-21, 14-21 ಗೇಮ್‌ಗಳಿಂದ ಶರಣಾದರು.

ಸೇನ್‌ ಅವರ ತಂಡಸದಸ್ಯ ಶುಭಂಕರ್‌ ದೇವ್‌ ಕೂಡ ಮುಖ್ಯ ಡ್ರಾಕ್ಕೆ ತೇರ್ಗಡೆಯಾಗಲು ವಿಫ‌ಲರಾಗಿದ್ದಾರೆ. ಅವರು ಅರ್ಹತಾ ಸುತ್ತಿನಲ್ಲಿ ಮಲೇಶ್ಯದ ಲಿಯು ಡ್ಯಾರೆನ್‌ ಅವರಿಗೆ 15-21, 15-21 ಗೇಮ್‌ಗಳಿಂದ ಸೋತು ಹೊರಬಿದ್ದರು.

ಟಾಪ್ ನ್ಯೂಸ್

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-sasa

ಬಿಲ್ಗಾರಿಕೆ: ಉಕ್ರೇನ್‌ ಎದುರು ಭಾರತಕ್ಕೆ 3-5 ಸೋಲು

1-dsadsadsa

Paris Olympics ಕಾರಣ ವಿಂಬಲ್ಡನ್‌ಗೆ ನಡಾಲ್‌ ಗೈರು

two team India players will return home after the match against Canada

Team India; ಕೆನಡಾ ವಿರುದ್ದದ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ ಇಬ್ಬರು ಆಟಗಾರರು

BANvsNED; ಅರ್ಧಶತಕದ ಬೆನ್ನಲ್ಲೇ ‘ಸೆಹ್ವಾಗ್ ಯಾರು…?’ ಎಂದು ಪ್ರಶ್ನಿಸಿದ ಶಕೀಬ್ ಅಲ್ ಹಸನ್

BANvsNED; ಅರ್ಧಶತಕದ ಬೆನ್ನಲ್ಲೇ ‘ಸೆಹ್ವಾಗ್ ಯಾರು…?’ ಎಂದು ಪ್ರಶ್ನಿಸಿದ ಶಕೀಬ್ ಅಲ್ ಹಸನ್

Two giant teams were eliminated from the ICC T20 World Cup 2024

ICC T20 World Cup 2024 ಕೂಟದಿಂದಲೇ ಹೊರಬಿದ್ದ ಎರಡು ದಿಗ್ಗಜ ತಂಡಗಳು

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

pinarayi

ಅಗ್ನಿ ದುರಂತ; ಕುವೈಟ್‌ಗೆ ತೆರಳಲು ಸಚಿವೆಗೆ ಕೇಂದ್ರ ಅಡ್ಡಿ: ಕೇರಳ ಸಿಎಂ

1-rt

ಗಲಾಟೆ ವಿವಾದ: ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ ರವೀನಾ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.