ರವಿವಾರ ಸಾಕ್ಷಿ ಮಲಿಕ್ ಮದುವೆ
Team Udayavani, Apr 1, 2017, 12:16 PM IST
ರೊಹ್ಟಕ್: ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ವಿವಾಹ ರವಿವಾರ ರೊಹ್ಟಕ್ನ ನಂದಲ್ ಭವನದಲ್ಲಿ ಕುಸ್ತಿಪಟು ಸತ್ಯವೃತ್ ಕಾಡಿಯನ್ ಜತೆ ನೆರವೇರಲಿದೆ. ಮದುವೆಗೂ ಮೊದಲು ಶನಿವಾರ ಸಾಕ್ಷಿ ಮಲಿಕ್ ನಿವಾಸದಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಯಲಿದೆ.
ವಿವಾಹ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಸಚಿವ ಸುರೇಶ್ ಬಾಬು, ಬಾಲಿವುಡ್ ನಟ ರಣದೀಪ್ ಹೂಡಾ, ಮಾಜಿ ಕ್ರಿಕೆಟಿಗರಾದ ತೆಂಡುಲ್ಕರ್, ಸೆಹವಾಗ್, ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು, ಜಿಮ್ನಾಸ್ಟ್ ದೀಪಾ ಕರ್ಮಾಕರ್ ಸೇರಿದಂತೆ ಹಲವು ಉದ್ಯಮಿಗಳು, ರಾಜ ಕಾರಣಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಸಾಕ್ಷಿ ಕುಟುಂಬದ ಮೂಲಗಳು ತಿಳಿಸಿವೆ.