US Open 2023: ಮರಿನ್ ಸಿಲಿಕ್, ಡೆನ್ನಿಸ್ ಶಪಲೋವ್ ಗಾಯಾಳು
Team Udayavani, Aug 19, 2023, 8:00 PM IST
ನ್ಯೂಯಾರ್ಕ್: ಗಾಯಾಳಾಗಿರುವ ಮರಿನ್ ಸಿಲಿಕ್ ಮತ್ತು ಡೆನ್ನಿಸ್ ಶಪವಲೋವ್ ಈ ಬಾರಿಯ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಆಡುವುದಿಲ್ಲ. ಇಬ್ಬರೂ ಮಂಡಿನೋವಿಗೆ ಸಿಲುಕಿದ್ದಾರೆ.
ಕ್ರೊವೇಶಿಯಾದ ಮರಿನ್ ಸಿಲಿಕ್ 2014ರ ಯುಎಸ್ ಓಪನ್ ಚಾಂಪಿಯನ್ ಆಗಿದ್ದಾರೆ. ಸತತವಾಗಿ ಕಾಡುತ್ತಿರುವ ಮಂಡಿನೋವಿನಿಂದಾಗಿ ಸಿಲಿಕ್ ಈ ವರ್ಷ ಕೇವಲ 2 ಪಂದ್ಯಗಳಲ್ಲಿ ಆಡಿದ್ದರು. ಇದರಲ್ಲಿ ಯಾವುದೇ ಗ್ರ್ಯಾನ್ಸ್ಲಾಮ್ ಸೇರಿಲ್ಲ. ಇದರಿಂದಾಗಿ ಅವರು ವಿಶ್ವ ರ್ಯಾಂಕಿಂಗ್ನಲ್ಲಿ 121ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕೆನಡಾದ ಡೆನ್ನಿಸ್ ಶಪವಲೋವ್ ವಿಂಬಲ್ಡನ್ 4ನೇ ಸುತ್ತಿನಲ್ಲಿ ಸೋತ ಬಳಿಕ ಟೆನಿಸ್ ಅಂಕಣಕ್ಕೆ ಇಳಿದಿಲ್ಲ. 2020ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದು ಯುಎಸ್ ಓಪನ್ನಲ್ಲಿ ಶಪವಲೋವ್ ಅವರ ಅತ್ಯುತ್ತಮ ಸಾಧನೆಯಾಗಿದೆ.
ಇವರಿಬ್ಬರ ಬದಲು ದಕ್ಷಿಣ ಕೊರಿಯಾದ ಸೂನೂÌ ಕೋನ್ ಮತ್ತು ಹಂಗೇರಿಯ ಆ್ಯಟಿಲ್ ಬಲಾಜ್Õ ಯುಎಸ್ ಓಪನ್ ಮುಖ್ಯ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?