ಮೊರಾಕ್ಕೊ ತಂಡದ ಪರ ಆಡುತ್ತಿರುವ ಅಶ್ರಫ್ ಹಕೀಮಿ ಅವರ ಪತ್ನಿ ಅತಿ ಸುಂದರ ನಟಿ
Team Udayavani, Dec 14, 2022, 8:05 AM IST
ಮೊರಾಕ್ಕೊ ತಂಡವನ್ನು ವಿಶ್ವಕಪ್ನಲ್ಲಿ ಪ್ರತಿನಿಧಿಸುತ್ತಿರುವ ಅಶ್ರಫ್ ಹಕೀಮಿ ಹುಟ್ಟಿದ್ದೆಲ್ಲ ಸ್ಪೇನ್ನಲ್ಲಿ. ಜಗತ್ತಿನ ಶ್ರೇಷ್ಠ ಮುನ್ಪಡೆ ಆಟಗಾರರಲ್ಲಿ ಒಬ್ಬರು. ಇವರು ತಮ್ಮ ಪೂರ್ವಿಕರ ದೇಶವಾದ ಮೊರಾಕ್ಕೊ ತಂಡದ ಪರ ಆಡುತ್ತಿದ್ದಾರೆ. ಈಗ ವಿಶ್ವಕಪ್ ನಡೆಯುತ್ತಿರುವುದರಿಂದ ಅಭಿಮಾನಿಗಳಿಗೆ ಇವರು ಯಾರು ಎನ್ನುವುದು ಖಚಿತವಾಗಿದೆ.
ಆದರೆ ಇವರ ಪತ್ನಿ ಯಾರು? ಅವರ ಹೆಗ್ಗಳಿಕೆ ಏನೆಂದು ಗೊತ್ತಾ? ಹೆಸರು ಹಿಬಾ ಅಬೌಕ್. ಟ್ಯುನೀಶಿಯದಲ್ಲಿ ನಟಿಯಾಗಿ ಖ್ಯಾತರಾಗಿದ್ದಾರೆ. ಹುಟ್ಟಿದ್ದೆಲ್ಲ ಲಿಬಿಯದಲ್ಲಿ. ಅತಿ ಸುಂದರ ನಟಿ ಎಂಬ ಹೆಗ್ಗಳಿಕೆ ಹೊಂದಿರುವ ಈಕೆಯೀಗ ಅಶ್ರಫ್ ಕಾರಣಕ್ಕೆ ಮತ್ತಷ್ಟು ಸುದ್ದಿಯಲ್ಲಿದ್ದಾರೆ.
ಅವರ ಬಗ್ಗೆ ಬೇಕಾದಷ್ಟು ಹುಡುಕಾಟ ನಡೆಯುತ್ತಿದೆ. ವಿಶೇಷವೆಂದರೆ ಅಶ್ರಫ್ ಹಕೀಮಿಗೆ ಇನ್ನೂ ಕೇವಲ 24 ವರ್ಷ. ಪತ್ನಿ ಅಬೌಕ್ಗೆ 36 ವರ್ಷ! ಇವರಿಬ್ಬರು ಮೊದಲ ಬಾರಿ 2018ರಲ್ಲಿ ಭೇಟಿಯಾದರು. 2020ರಲ್ಲಿ ವಿವಾಹವಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ