WPL: ವನಿತಾ ಪ್ರೀಮಿಯರ್ ಲೀಗ್: ಆರ್ಸಿಬಿ; ಫೈನಲ್ ಲಕ್ ನಿರೀಕ್ಷೆ
Team Udayavani, Mar 15, 2024, 7:15 AM IST
ಹೊಸದಿಲ್ಲಿ: ಅದೃಷ್ಟದ ಹುಡು ಕಾಟದಲ್ಲಿರುವ ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಶುಕ್ರವಾರ ವನಿತಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಎಲಿಮಿನೇಟರ್ ಸುತ್ತಿನಲ್ಲಿ ಸೆಣಸಲಿವೆ. ಗೆದ್ದವರು ರವಿವಾರದ ಪ್ರಶಸ್ತಿ ಸಮರದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದಾರೆ.
ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸ್ಮತಿ ಮಂಧನಾ ನೇತೃತ್ವದ ಆರ್ಸಿಬಿ 7 ವಿಕೆಟ್ಗಳಿಂದ ಮುಂಬೈಗೆ ಸೋಲುಣಿಸಿ ತೃತೀಯ ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿತ್ತು. ಇದು ಡಬ್ಲ್ಯುಪಿಎಲ್ನಲ್ಲಿ ಮುಂಬೈ ವಿರುದ್ಧ ಆರ್ಸಿಬಿ ಸಾಧಿಸಿದ ಮೊದಲ ಜಯ. ಹಾಗೆಯೇ ಆರ್ಸಿಬಿ ಕಾಣುತ್ತಿರುವ ಮೊದಲ ಪ್ಲೇ ಆಫ್ ಕೂಡ ಹೌದು. ಲೀಗ್ ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ ಮುಂಬೈ ಕೂಡ ಆರ್ಸಿಬಿಯನ್ನು 7 ವಿಕೆಟ್ಗಳಿಂದ ಮಣಿಸಿತ್ತು.
ಮುಂಬೈ ವಿರುದ್ಧ ಆಡಿದ ಮೊದಲ ಮೂರೂ ಪಂದ್ಯಗಳಲ್ಲಿ ಸೋತಿದ್ದ ಬೆಂಗಳೂರು ತಂಡ, ಅಂತಿಮವಾಗಿ ಮಂಗಳವಾರದ ನಿರ್ಣಾಯಕ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ ಗೆಲುವು ಕಾಣುವಲ್ಲಿ ಯಶಸ್ವಿಯಾಗಿತ್ತು. ಎಲ್ಲಿಸ್ ಪೆರ್ರಿ ಅವರ ಬೊಂಬಾಟ್ ಬೌಲಿಂಗ್ ಸಾಹಸದಿಂದ ಬಲಿಷ್ಠ ಮುಂಬೈಯನ್ನು ಬರೀ 113ಕ್ಕೆ ಹಿಡಿದು ನಿಲ್ಲಿಸಿದ ಸ್ಫೂರ್ತಿ, ಉತ್ಸಾಹ ಇನ್ನೂ ಆರ್ಸಿಬಿ ಪಾಳೆಯದಲ್ಲಿ ಚಿಮ್ಮುತ್ತಿದೆ. ಇದು ಶುಕ್ರವಾರವೂ ಮುಂದುವರಿಯಬೇಕಿದೆ.
ಆರ್ಸಿಬಿ ಅತ್ಯಂತ ಸಂತುಲಿತ ತಂಡ. ಕೇವಲ ಒಬ್ಬರನ್ನೇ ಅವಲಂಬಿಸಿಲ್ಲ. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಮಿಂಚಿದ ನಿದರ್ಶ ನವನ್ನು ಕಾಣಬಹುದು. ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ಕೂಡ ಸ್ಟಾರ್ ಆಟಗಾರ್ತಿಯರನ್ನು ಹೊಂದಿರುವ ತಂಡ. ಲೀಗ್ನಲ್ಲಿ 3 ಪಂದ್ಯ ಸೋತ ಮುಂಬೈ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು. ಕೊನೆಯ ಲೀಗ್ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಯೋಜನೆ ಯಲ್ಲಿರುವ ಮುಂಬೈ ವಿರುದ್ಧ ಆರ್ಸಿಬಿ ಎಚ್ಚರಿಕೆಯ ನಡೆಯನ್ನಿರಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು