ಜಾನ್‌ ಇಸ್ನರ್‌ ಮಯಾಮಿ ಮ್ಯಾಜಿಕ್‌

Team Udayavani, Apr 3, 2018, 6:50 AM IST

John-Isner,-Miami-Open-Tenn.jpg

ಮಯಾಮಿ (ಫ್ಲೋರಿಡಾ): ಅಮೆರಿಕದ ಬಿಗ್‌ ಸರ್ವರ್‌ ಖ್ಯಾತಿಯ ಜಾನ್‌ ಇಸ್ನರ್‌ “ಮಯಾಮಿ ಎಟಿಪಿ ಮಾಸ್ಟರ್’ ಟೆನಿಸ್‌ ಚಾಂಪಿಯನ್‌ ಕಿರೀಟ ಏರಿಸಿಕೊಂಡಿದ್ದಾರೆ. 

ರವಿವಾರ ರಾತ್ರಿ ನಡೆದ ತೀವ್ರ ಪೈಪೋಟಿಯ ರ್ಯಾಕೆಟ್‌ ಸಮರದಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ 6-7 (4-7), 6-4, 6-4 ಅಂತರದಿಂದ ಗೆದ್ದು ಬಂದರು.

ಇದು ಜಾನ್‌ ಇಸ್ನರ್‌ಗೆ ಒಲಿದ ಮೊದಲ ಮಯಾಮಿ ಟೆನಿಸ್‌ ಪ್ರಶಸ್ತಿ ಎಂಬುದು ವಿಶೇಷ. ಇದಕ್ಕೂ ಮುನ್ನ 2012, 2013 ಹಾಗೂ 2016ರಲ್ಲಿ ಫೈನಲ್‌ ಪ್ರವೇಶಿಸಿಯೂ ಸೋಲನುಭವಿಸಿದ್ದರು. ಇದರೊಂದಿಗೆ ಪ್ರಸಕ್ತ ಋತುವಿನ ಮಯಾಮಿ ಪ್ರಶಸ್ತಿಗಳೆರಡೂ ಅಮೆರಿಕದ ಪಾಲಾದಂತಾಯಿತು. ವನಿತಾ ಸಿಂಗಲ್ಸ್‌ನಲ್ಲಿ ಸ್ಲೋನ್‌ ಸ್ಟೀಫ‌ನ್ಸ್‌ ಚಾಂಪಿಯನ್‌ ಆಗಿದ್ದರು. ಸ್ಟೀಫ‌ನ್ಸ್‌ಗೂ ಇದು ಮೊದಲ ಮಯಾಮಿ ಪ್ರಶಸ್ತಿ ಆಗಿತ್ತೆಂಬುದು ಉಲ್ಲೇಖನೀಯ.

ಇಸ್ನರ್‌ ಜಯದೊಂದಿಗೆ 2010ರ ಬಳಿಕ ಮಯಾಮಿ ಟೆನಿಸ್‌ ಪ್ರಶಸ್ತಿ ಅಮೆರಿಕದ ಆಟಗಾರನ ಪಾಲಾಗಿದೆ. ಅಂದು ಆ್ಯಂಡಿ ರಾಡಿಕ್‌ ಚಾಂಪಿಯನ್‌ ಆಗಿದ್ದರು.

ಅವಕಾಶ ಕೈಚೆಲ್ಲಿದ ಜ್ವೆರೇವ್‌
14ನೇ ಶ್ರೇಯಾಂಕದ ಜಾನ್‌ ಇಸ್ನರ್‌ ಜರ್ಮನ್‌ ಟೆನಿಸಿಗನ ವಿರುದ್ಧ 2 ಗಂಟೆ, 29 ನಿಮಿಷಗಳ ಹೋರಾಟ ನಡೆಸಿದರು. ಮೊದಲ ಸೆಟ್‌ ಅನ್ನು ಟೈ ಬ್ರೇಕರ್‌ನಲ್ಲಿ ವಶಪಡಿಸಿಕೊಂಡ ಜ್ವೆರೇವ್‌ ಉಳಿದೆರಡು ಸೆಟ್‌ಗಳಲ್ಲೂ ತೀವ್ರ ಪೈಪೋಟಿಯೊಡ್ಡಿದರು. ದ್ವಿತೀಯ ಸೆಟ್‌ನಲ್ಲೊಮ್ಮೆ 4-4 ಸಮಬಲ ಕಂಡುಬಂತು. ತೃತೀಯ ಸೆಟ್‌ನಲ್ಲಿ ಜ್ವೆರೇವ್‌ 5-4ರ ಮುನ್ನಡೆ ದಾಖಲಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫ‌ಲರಾದರು. ಒಟ್ಟಾರೆ ಅಮೆರಿಕನ್‌ ಟೆನಿಸಿಗನ ಅದೃಷ್ಟ ದೊಡ್ಡದಿತ್ತು. ಈ ಸೋಲಿನೊಂದಿಗೆ ಜ್ವೆರೇವ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೇರಲು ವಿಫ‌ಲರಾದರು.

“ಇಡೀ ಕೂಟದಲ್ಲಿ ಮಿಸ್‌ ಮಾಡಿಕೊಂಡ ಶಾಟ್‌ಗಳಿಗಿಂತ ಹೆಚ್ಚಿನ ಶಾಟ್‌ಗಳನ್ನು ನಾನು ನಾನು ಫೈನಲ್‌ನಲ್ಲಿ ಕಾಣಬೇಕಾಯಿತು. ಅಷ್ಟೊಂದು ಕೆಟ್ಟದಾಗಿ ಆಡಿದೆ. ಆದರೆ ಇಸ್ನರ್‌ ಅವರನ್ನು ಎದುರಿಸುವುದು ಅಷ್ಟೊಂದು ಸುಲಭ ಸವಾಲಾಗಿರಲಿಲ್ಲ…’ ಎಂದು ಜ್ವೆರೇವ್‌ ನೊಂದು ನುಡಿದರು.

“ಈ ಗೆಲುವನ್ನು ವಿಶ್ಲೇಷಿಸಲಾಗುತ್ತಿಲ್ಲ. ಈ ವರ್ಷ ಕೇವಲ ಒಂದು ಎಟಿಪಿ ಪಂದ್ಯವನ್ನು ಗೆದ್ದು ಈ ಪಂದ್ಯಾವಳಿಗೆ ಆಗಮಿಸಿದ್ದೆ. ಅತ್ಯಂತ ಕೆಟ್ಟದಾಗಿ ಆಡುತ್ತ ಬಂದಿದೆ. ಆದರೆ ಮಯಾಮಿಯಲ್ಲಿ ಮ್ಯಾಜಿಕ್‌ ನಡೆಯಿತು’ ಎಂಬುದು ವಿಜೇತ ಜಾನ್‌ ಇಸ್ನರ್‌ ಪ್ರತಿಕ್ರಿಯೆ.

ಟಾಪ್ ನ್ಯೂಸ್

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

nosthush-kenjige

T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್‌ ಕೆಂಜಿಗೆಗೆ ಸ್ಥಾನ

Kohli IPL 2024

IPL;ಇಂದು ಆರ್‌ಸಿಬಿ ಎದುರಾಳಿ ಗುಜರಾತ್‌ ಟೈಟಾನ್ಸ್‌:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ

1-qewqeqwe

England;  20 ವರ್ಷದ ಕ್ರಿಕೆಟಿಗ ನಿಗೂಢ ಸಾವು!

1-weweqwe

IPL; ವಾಂಖೇಡೆಯಲ್ಲಿ ಬೌಲರ್‌ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.