ರಾಜ್ಯ ಕ್ರಿಕೆಟಿಗರ ಮೈಂಡ್‌ ಕೋಚಿಂಗ್‌ಗೆ ಕಾಂಗರೂ ಸುಂದರಿ


Team Udayavani, Mar 26, 2018, 6:20 AM IST

Jaime.jpg

ಬೆಂಗಳೂರು: ಭಾರತೀಯರಿಗೆ ಕ್ರಿಕೆಟ್‌ ಎಂದರೆ ಹಬ್ಬದ ಸಂಭ್ರಮ. ಕ್ರಿಕೆಟಿಗರೆಂದರೆ ಸಾಕ್ಷಾತ್‌ ದೇವರು. ದೇಶದಲ್ಲಿ ಕ್ರಿಕೆಟ್‌ ವೇಗವಾಗಿ ಬೆಳೆಯುತ್ತಿದೆ. ಕ್ರಿಕೆಟಿಗರಲ್ಲಿ ವೃತ್ತಿಪರತೆ ಹೆಚ್ಚುತ್ತಿದೆ. ಬದಲಾದ ಸನ್ನಿವೇಶ, ತಾಂತ್ರಿಕತೆ, ವೃತ್ತಿಪರತೆ ಇದೆಲ್ಲ ಕ್ರಿಕೆಟ್‌ ಬೆಳವಣಿಗೆ ಕಾರಣವಾಗಿದೆ.

ಇದೀಗ ಈ ಸಾಲಿಗೆ ಮೈಂಡ್‌-ಬಾಡಿ ಕೋಚಿಂಗ್‌ ಹೊಸದಾಗಿ ಸೇರಿಕೊಂಡಿದೆ. ಮೈಂಡ್‌-ಬಾಡಿ ಕೋಚಿಂಗ್‌ ಇತ್ತೀಚೆಗೆ ಕ್ರಿಕೆಟ್‌ನ ಒಂದು ಭಾಗವೇ ಆಗಿರುವುದು ವಿಶೇಷ. ಹೀಗಾಗಿ ಎಲ್ಲ ಕ್ರಿಕೆಟ್‌ ಕ್ಲಬ್‌ನವರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಂತೆಯೇ ಬೆಂಗಳೂರಿನಲ್ಲಿ ಹೊಸದಾಗಿ ಆರಂಭವಾಗಿರುವ “ಕಾಸ್ಮಿಕ್‌ ಡ್ಯಾರೆನ್‌ ಲೆಹ್ಮನ್‌ ಕ್ರಿಕೆಟ್‌ ಅಕಾಡೆಮಿ’ ರಾಜ್ಯದಲ್ಲಿ ಮೊದಲ ಬಾರಿಗೆ ನುರಿತ ಮಹಿಳಾ ಸೈಕಾಲಾಜಿಸ್ಟ್‌ ಆಸ್ಟ್ರೇಲಿಯಾದ ಜ್ಯಾಮಿ ಎ ಕಾರ್ಟ್‌ ಅವರನ್ನು ಪರಿಚಯಿಸುತ್ತಿದೆ. ರಾಜ್ಯ ಕ್ರಿಕೆಟಿಗರ ಮನಸ್ಸನ್ನು ಅರಿತು ಅವರಿಗೆ ಉಪಯುಕ್ತ ಸಲಹೆಗಳನ್ನು ಜ್ಯಾಮಿ ಎ ಕಾರ್ಟ್‌ ನೀಡಲಿದ್ದಾರೆ. ಇದು ಪ್ರಮುಖ ಕೂಟಗಳಲ್ಲಿ ಕ್ರಿಕೆಟಿಗರಿಗೆ ನೆರವಾಗಲಿದೆ.

ಏನಿದು ಮೈಂಡ್‌ ಬಾಡಿ ಕೋಚಿಂಗ್‌?: ಕ್ರಿಕೆಟಿಗರು ಎಂದ ಮೇಲೆ ಗಾಯಕ್ಕೆ ತುತ್ತಾಗುವುದು, ಒತ್ತಡಕ್ಕೆ ಒಳಗಾಗಿ ಕುಗ್ಗಿ ಪ್ರದರ್ಶನರಹಿತರಾಗುವುದು ಸಾಮಾನ್ಯ. ಓರ್ವ ಕ್ರಿಕೆಟಿಗನ ಮೇಲೆ ಈ ಎರಡೂ ಘಟನೆಗಳು ಏಕಕಾಲಕ್ಕೆ ಪರಿಣಾಮ ಬೀರಿದಾಗ ಆಟಗಾರ ಕುಗ್ಗಿಯೇ ಬಿಡುತ್ತಾನೆ. ಗೊಂದಲಕ್ಕೆ ಒಳಗಾಗುತ್ತಾನೆ. ಈ ವೇಳೆ ಮೈಂಡ್‌ ಹಾಗೂ ಬಾಡಿ ಕೋಚಿಂಗ್‌ ಎರಡೂ ಸೇರಿ ಆಟಗಾರನನ್ನು ಕಷ್ಟಗಳಿಂದ ಬಚಾವ್‌ ಮಾಡುವ ಸ್ನೇಹಿತನಂತೆ ಕಾರ್ಯ ನಿರ್ವಹಿಸುತ್ತದೆ. ದೈಹಿಕ-ಮಾನಸಿಕವಾಗಿ ಘಾಸಿಗೊಂಡಿರುವ ಆಟಗಾರನನ್ನು ಕಷ್ಟದ ಸಂಕೋಲೆಗಳಿಂದ ಬಿಡಿಸುವುದು, ಧೈರ್ಯ ತುಂಬುವುದು, ಗಾಯಗಳಿಂದ ಹೊರಕ್ಕೆ ಬರುವಂತೆ ಮಾಡುವುದು, ಮೈಂಡ್‌ ಬಾಡಿ ಕೋಚ್‌ನ ಪ್ರಮುಖ ಕೆಲಸ.

ಎದುರಾಳಿ ಅರಿಯಲು ಮೈಂಡ್‌ ಕೋಚ್‌ ಅಸ್ತ್ರ: ಮೈಂಡ್‌ ಕೋಚಿಂಗ್‌ನಿಂದ ಹಲವು ಲಾಭಗಳಿವೆ. ಆಟಗಾರನೊಬ್ಬ ಸರಣಿ ಪಂದ್ಯಗಳನ್ನು ಆಡಿ ಬಂದರೂ ಮೈಂಡ್‌ ಕೋಚಿಂಗ್‌ ತರಬೇತಿ ಪಡೆಯುವುದರಿಂದ ಮಾನಸಿಕ ಒತ್ತಡದಿಂದ ಪಾರಾಗಬಹುದು. ಒಂದರ ಹಿಂದೆ ಒಂದರಂತೆ ಸರಣಿ ಪಂದ್ಯಗಳು ಬಂದರೂ ಮೈಂಡ್‌ ಫ್ರೆಶ್‌ ಆಗಿ ಮತ್ತೂಂದು ಪಂದ್ಯ ಆಡಲು ಅಡ್ಡಿಯಿಲ್ಲ. ಅಷ್ಟೇ ಅಲ್ಲ ಕೆಲವು ಸಂದರ್ಭದಲ್ಲಿ ತಂಡದ ಗೆಲುವಿನಲ್ಲಿ ಮೈಂಡ್‌ ಕೋಚ್‌ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಎದುರಾಳಿ ಬೌಲರ್‌ ಮುಂದಿನ ಎಸೆತವನ್ನು ಬೌನ್ಸರ್‌ ಹಾಕುತ್ತಾನೋ ಅಥವಾ ಯಾರ್ಕರ್‌ ಎಸೆಯುತ್ತಾನೋ ಎನ್ನುವುದನ್ನು ಆತ ಬೌಲಿಂಗ್‌ ಹಾಕುವ ಮೊದಲೇ ನಿರ್ಧರಿಸಲು ಬ್ಯಾಟ್ಸ್‌ಮನ್‌ಗೆ ಹೆಚ್ಚಿನ ಸಹಾಯವಾಗಬಲ್ಲದು.

ಯಾರಿವರು ಜ್ಯಾಮಿ ಎ ಕಾರ್ಟ್‌
ಜ್ಯಾಮಿ ಎ ಕಾರ್ಟ್‌ ಆಸ್ಟ್ರೇಲಿಯಾದವರು. ಅಡಿಲೇಡ್‌ ವಿಶ್ವವಿದ್ಯಾನಿಲಯದಿಂದ “ಬ್ಯಾಚುಲರ್‌ ಆಫ್ ಸೈಕಾಲಾಜಿಕಲ್‌ ಸೈನ್ಸ್‌’ ಪದವಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ 4 ವರ್ಷ ಆಸೀಸ್‌ನಲ್ಲಿ ವ್ಯಕ್ತಿಯ ವರ್ತನೆ ಕುರಿತಂತೆ ಅಧ್ಯಯನ ನಡೆಸಿದರು. ಅಷ್ಟೇ ಅಲ್ಲ ಭಾರತದ ಯೋಗಾ ಶಿಕ್ಷಣವನ್ನು  ಅವರು ಕರಗತ ಮಾಡಿಕೊಂಡಿದ್ದಾರೆ. ಕ್ರಿಕೆಟ್‌ಗೆ ಬರುವ ಮೊದಲು ಫ‌ುಟ್‌ಬಾಲ್‌, ಈಜು ಸೇರಿದಂತೆ ವಿವಿಧ ಕ್ರೀಡೆಗಳಲ್ಲಿರುವ ಆಟಗಾರರಿಗೆ ಮೈಂಡ್‌ ಕೋಚಿಂಗ್‌ ಮಾಡಿದ್ದಾರೆ. ಜತೆ ಜತೆಯಾಗಿ ಯೋಗಾ ತರಬೇತಿಯನ್ನೂ ನೀಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಆರಂಭವಾಗಿರುವ ಆಸೀಸ್‌ ಕ್ರಿಕೆಟ್‌ ದಿಗ್ಗಜ ಡ್ಯಾರೆನ್‌ ಲೆಹ್ಮನ್‌ ಅವರ ಅಕಾಡೆಮಿಯಲ್ಲಿ ರಾಜ್ಯ ಕ್ರಿಕೆಟಿಗರಿಗೆ ಇವರು ತರಬೇತಿ ನೀಡಲಿದ್ದಾರೆ.

ಬೆಂಗಳೂರಿನಲ್ಲಿ ನೂತನವಾಗಿ ಆರಂಭವಾಗಿರುವ ಅಕಾಡೆಮಿಯಲ್ಲಿ  ಜ್ಯಾಮಿ ಎ ಕಾರ್ಟ್‌ 6 ವಾರಗಳ ತನಕ ಆಟಗಾರರಿಗೆ ಮೈಂಡ್‌-ಬಾಡಿ ಕೋಚಿಂಗ್‌ ನೀಡಲಿದ್ದಾರೆ. ಜತೆಗೆ ಯೋಗವನ್ನು ಹೇಳಿಕೊಡಲಿದ್ದಾರೆ. ಮೇ.13ರಿಂದ ಕಿಣಿ ನ್ಪೋರ್ಟ್ಸ್ ಅರೆನಾದಲ್ಲಿ ತರಬೇತಿ ಆರಂಭವಾಗಲಿದೆ.
– ಆರ್‌.ಕಿರಣ್‌ ಕುಮಾರ್‌, ನಿರ್ವಾಹಕ  ಕಿಣಿ ನ್ಪೋರ್ಟ್ಸ್ ಅರೆನಾ

– ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.