ಮನೆಯಲ್ಲೇ ಇರಿ, ಇಲ್ಲಾಂದ್ರೆ ಔಟ್ ಆಗ್ತೀರಾ; ರನೌಟ್ ವಿಡಿಯೊ ಪ್ರಕಟಿಸಿ ಎಚ್ಚರಿಸಿದ ಕೈಫ್
Team Udayavani, Mar 29, 2020, 10:26 AM IST
ಹೊಸದಿಲ್ಲಿ: ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವಿಟ್ಟರ್ನಲ್ಲಿ ರನೌಟ್ ವಿಡಿಯೊ ಪ್ರಕಟಿಸಿ ಕೋವಿಡ್-19 ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯುತ್ನ ನಡೆಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶಾರ್ಟ್ ಲೆಗ್ನಲ್ಲಿ ಅದ್ಭುತ ಫಿಲ್ಡಿಂಗ್ ನಡೆಸಿ ತಾವೆ ಕಾಲಿಂಗ್ ವುಡ್ ಅವರನ್ನು ರನೌಟ್ ಮಾಡುತ್ತಿರುವ ವಿಡಿಯೊ ಇದಾಗಿದೆ. “ಮನೆ ಯೊಳಗೆ ಇರಿ, ಹೊರಗಡೆ ಹೋಗಬೇಡಿ’ ಎನ್ನುವ ಸಂದೇಶ ವನ್ನು ವಿಡಿಯೊ ಕೆಳಗಡೆ ಕೈಫ್ ಪ್ರಕಟಿಸಿದ್ದಾರೆ. ನಿಮ್ಮ ಜಾಗದಲ್ಲೇ ಸುರಕ್ಷಿತವಾಗಿರಿ, ಇಲ್ಲದಿದ್ದರೇ ಪ್ರಾಣಕ್ಕೆ ಅಪಾಯ ಎನ್ನುವ ಅರ್ಥದಲ್ಲಿ ಮೊಹಮ್ಮದ್ ಕೈಫ್ ಎಚ್ಚರಿಕೆ ನೀಡಿದ್ದಾರೆ.
ಹಲವಾರು ಕ್ರಿಕೆಟಿಗರು, ಸಿನಿಮಾ ತಾರೆಯರು ಕೊರೊನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡಾ ಹಲವು ವಿಡಿಯೋಗಳನ್ನು ಹರಿಬಿಟ್ಟು ಸಮಾಜಕ್ಕೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.
अंदर रहें, सुरक्षित रहें ??#ThrowbackThursday #Lockdown21 pic.twitter.com/i0mgojfloE
— Mohammad Kaif (@MohammadKaif) March 26, 2020