ಕರ್ನಾಟಕ ದಾಳಿಗೆ ಉದುರಿದ ಮುಂಬಯಿ

ಕೌಶಿಕ್‌, ಮಿಥುನ್‌, ರೋನಿತ್‌, ಪ್ರತೀಕ್‌ ಬಿರುಸಿನ ಬೌಲಿಂಗ್‌ ಮುಂಬಯಿ-194; ಕರ್ನಾಟಕ-79/3

Team Udayavani, Jan 3, 2020, 11:06 PM IST

PTI1_3_2020_000179B

ಮುಂಬಯಿ: ಮುಂಬಯಿ ವಿರುದ್ಧ ಶುಕ್ರವಾರ ಅವರದೇ ಅಂಗಳದಲ್ಲಿ ಆರಂಭಗೊಂಡ ಹೊಸ ವರ್ಷದ ಮೊದಲ ರಣಜಿ ಪಂದ್ಯವನ್ನು ಕರ್ನಾಟಕ ಉತ್ತಮ ರೀತಿಯಲ್ಲಿ ಆರಂಭಿಸಿದೆ. ಮುಂಬಯಿಯನ್ನು ಕೇವಲ 194 ರನ್‌ಗೆ ಉರುಳಿಸುವ ಮೂಲಕ ಅಮೋಘ ನಿಯಂತ್ರಣ ಸಾಧಿಸಿದೆ.

“ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌’ನಲ್ಲಿ ಮೊದಲು ಬ್ಯಾಟಿಂಗಿಗೆ ಇಳಿದ ಮುಂಬಯಿ ಸರದಿ ಮೇಲೆ ಕರ್ನಾಟಕದ ಬೌಲರ್‌ಗಳು ಘಾತಕವಾಗಿ ಎರಗಿದರು. ವೇಗಿಗಳಾದ ವಿ. ಕೌಶಿಕ್‌ (45ಕ್ಕೆ 3), ಅಭಿಮನ್ಯು ಮಿಥುನ್‌ (48ಕ್ಕೆ 2), ರೋನಿತ್‌ ಮೋರೆ (47ಕ್ಕೆ 2) ಹಾಗೂ ಪ್ರತೀಕ್‌ ಜೈನ್‌ (20ಕ್ಕೆ 2) ಬಿಗು ಬೌಲಿಂಗ್‌ ದಾಳಿಗೆ ಸಿಲುಕಿದ ಮುಂಬಯಿ 55.5 ಓವರ್‌ಗಳಲ್ಲಿ ಸರ್ವಪತನ ಕಂಡಿತು.

ಮೊದಲ ದಿನದ ಆಟದ ಅಂತ್ಯಕ್ಕೆ ಕರ್ನಾಟಕ 3 ವಿಕೆಟಿಗೆ 79 ರನ್‌ ಮಾಡಿದೆ. ಆರಂಭಿಕ ವಿಕೆಟಿಗೆ ಆರ್‌. ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್‌ 19.3 ಓವರ್‌ಗಳಿಂದ 68 ರನ್‌ ಜತೆಯಾಟ ನಡೆಸಿದರೂ ಅನಂತರ ದಿಢೀರ್‌ ಕುಸಿತಕ್ಕೆ ಸಿಲುಕಿತು. ಸಮರ್ಥ್ 40 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಇವರೊಂದಿಗೆ ಖಾತೆ ತೆರೆಯದ ಕಪ್ತಾನ ಕರುಣ್‌ ನಾಯರ್‌ ಇದ್ದಾರೆ. ದೇವದತ್ತ ಪಡಿಕ್ಕಲ್‌ 32 ರನ್‌ ಮಾಡಿದರೆ, ಅಭಿಷೇಕ್‌ ರೆಡ್ಡಿ (0) ಹಾಗೂ ರೋಹನ್‌ ಕದಮ್‌ (4 ರನ್‌) ಬೇಗನೆ ಪೆವಿಲಿಯನ್‌ ಸೇರಿಕೊಂಡರು.
ಶಮ್ಸ್‌ ಮಲಾನಿ (13ಕ್ಕೆ 2) ಮತ್ತು ಶಶಾಂಕ್‌ ಅಟ್ಟರ್ಡೆ (14ಕ್ಕೆ 1) ವಿಕೆಟ್‌ ಹಂಚಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸುವುದು ಕರ್ನಾಟಕದ ಸದ್ಯದ ಗುರಿ.

ಪೃಥ್ವಿ ಶಾ, ರಹಾನೆ ವಿಫ‌ಲ
ಕಳೆದ ಪಂದ್ಯದಲ್ಲಿ ತವರಿನ ವಾಂಖೇಡೆ ಅಂಗಳ ದಲ್ಲಿ ರೈಲ್ವೇಸ್‌ಗೆ 10 ವಿಕೆಟ್‌ಗಳಿಂದ ಶರಣಾಗಿದ್ದ ಮುಂಬಯಿ, ಈ ಮುಖಾಮುಖೀಯಲ್ಲೂ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿತು.

ಆರಂಭಕಾರ ಆದಿತ್ಯ ತಾರೆ ಶೂನ್ಯಕ್ಕೆ ವಿಕೆಟ್‌ ಕಳೆದುಕೊಂಡರು. ಟೆಸ್ಟ್‌ ಸ್ಪೆಷಲಿಸ್ಟ್‌ ಅಜಿಂಕ್ಯ ರಹಾನೆ (7), ಸಿದ್ದೇಶ್‌ ಲಾಡ್‌ (4) ಹಾಗೂ ಪೃಥ್ವಿ ಶಾ (29) ವಿಕೆಟ್‌ 46 ರನ್‌ ಆಗುವಷ್ಟರಲ್ಲಿ ಉರುಳಿತು. ಸಫ‌ìರಾಜ್‌ ಖಾನ್‌ (8), ಶಮ್ಸ್‌ ಮುಲಾನಿ (0) ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ. 60 ರನ್ನಿಗೆ ಮುಂಬಯಿಯ 6 ವಿಕೆಟ್‌ ಹಾರಿ ಹೋಯಿತು.

ಆದರೆ ನಾಯಕ ಸೂರ್ಯಕುಮಾರ್‌ ಯಾದವ್‌ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿ ತಂಡದ ರಕ್ಷಣೆಗೆ ನಿಂತರು. ಅವರಿಗೆ ಶಶಾಂಕ್‌ ಅಟ್ಟರ್ಡೆ ಉತ್ತಮ ಬೆಂಬಲವಿತ್ತರು. 7ನೇ ವಿಕೆಟಿಗೆ 88 ರನ್‌ ಒಟ್ಟುಗೂಡಿತು. ಯಾದವ್‌ 94 ಎಸೆತಗಳಿಂದ 77 ರನ್‌ ಮಾಡಿದರು (10 ಬೌಂಡರಿ, 2 ಸಿಕ್ಸರ್‌). ಯಾದವ್‌ ಹೊರತುಪಡಿಸಿದರೆ 35 ರನ್‌ ಮಾಡಿದ ಶಶಾಂಕ್‌ ಅವರದೇ ಹೆಚ್ಚಿನ ಗಳಿಕೆ.

ಕೇರಳ ಬ್ಯಾಟಿಂಗ್‌ ಕುಸಿತ
ಹೈದರಾಬಾದ್‌, ಜ. 3: ಹೈದರಾಬಾದ್‌ ಮತ್ತು ಕೇರಳ ನಡುವಿನ ರಣಜಿ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಮೊದಲ ದಿನ ಕೇವಲ 41 ಓವರ್‌ಗಳ ಆಟವಷ್ಟೇ ನಡೆದಿದ್ದು, ಕೇರಳ 7 ವಿಕೆಟಿಗೆ 126 ಮಾಡಿದೆ. ಇದರಲ್ಲಿ 20 ರನ್‌ ಎಕ್ಸ್‌ಟ್ರಾ ರೂಪದಲ್ಲಿ ಬಂದಿದೆ.

ರವಿ ಕಿರಣ್‌ (24ಕ್ಕೆ 3) ಮತ್ತು ಮೊಹಮ್ಮದ್‌ ಸಿರಾಜ್‌ (36ಕ್ಕೆ 2) ತವರಿನಂಗಳದ ಲಾಭವೆತ್ತಿದರು. ಕೇರಳ 32ಕ್ಕೆ 4 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು. ನಾಯಕ ಸಚಿನ್‌ ಬಾಬಿ 29, ಸಲ್ಮಾನ್‌ ನಜೀರ್‌ 37 ರನ್‌ ಮಾಡಿ ಸಣ್ಣ ಮಟ್ಟದ ಹೋರಾಟ ಪ್ರದರ್ಶಿಸಿದರು.

ಸಂಕ್ಷಿಪ್ತ ಸ್ಕೋರ್‌
ಮುಂಬಯಿ-194 (ಯಾದವ್‌ 77, ಅಟ್ಟರ್ಡೆ 35, ಶಾ 29, ತುಷಾರ್‌ 10, ಕೌಶಿಕ್‌ 45ಕ್ಕೆ 3, ಪ್ರತೀಕ್‌ 20ಕ್ಕೆ 2, ಮೋರೆ 47ಕ್ಕೆ 2, ಮಿಥುನ್‌ 48ಕ್ಕೆ 2, ಗೋಪಾಲ್‌ 24ಕ್ಕೆ 1). ಕರ್ನಾಟಕ-3 ವಿಕೆಟಿಗೆ 79 (ಸಮರ್ಥ್ ಬ್ಯಾಟಿಂಗ್‌ 40, ಪಡಿಕ್ಕಲ್‌ 32, ಕದಮ್‌ 4, ರೆಡ್ಡಿ 0, ನಾಯರ್‌ ಬ್ಯಾಟಿಂಗ್‌ 0, ಮುಲಾನಿ 13ಕ್ಕೆ 2, ಅಟ್ಟರ್ಡೆ 14ಕ್ಕೆ 1).

ಟಾಪ್ ನ್ಯೂಸ್

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

1-wccc

ವನಿತಾ ಕ್ರಿಕೆಟ್‌ ಸರಣಿಯ ಸಮಯ

1-sadsdsad

Australia-ಸ್ಕಾಟ್ಲೆಂಡ್‌ ಮುಖಾಮುಖಿ: ಸೂಪರ್‌-8ಕ್ಕೇರುವ ಮತ್ತೊಂದು ತಂಡ ಯಾವುದು?

1-male

WC; ಭಾರತ-ಕೆನಡಾ ಪಂದ್ಯ ರದ್ದು: ಸೂಪರ್‌-8 ಮೊದಲ ಎದುರಾಳಿ ಅಫ್ಘಾನ್

TT

TT: ಭಾರತ ವನಿತೆಯರಿಗೆ ಕಂಚು

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.