ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌: ನವೋಮಿ ಒಸಾಕಾ ಪತನ

Team Udayavani, May 23, 2022, 10:30 PM IST

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌: ನವೋಮಿ ಒಸಾಕಾ ಪತನ

ಪ್ಯಾರಿಸ್‌: ಮಾಜಿ ನಂಬರ್‌ ವನ್‌ ಜಪಾನಿನ ನವೋಮಿ ಒಸಾಕಾ ಮಾತ್ರವಲ್ಲದೇ ಹಾಲಿ ಚಾಂಪಿಯನ್‌ ಮತ್ತು ದ್ವಿತೀಯ ಶ್ರೇಯಾಂಕದ ಕ್ರೆಜಿಸಿಕೋವಾ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಕೂಟದ ಮೊದಲ ಸುತ್ತಿನಲ್ಲಿಯೇ ಸೋಲನ್ನು ಕಂಡಿದ್ದಾರೆ.

ಬಹಳಷ್ಟು ಅನಗತ್ಯ ತಪ್ಪುಗಳನ್ನು ಮಾಡಿದ ಒಸಾಕಾ ಅವರನ್ನು ಅಮೆರಿಕದ ಅಮಂಡಾ ಅನಿಸಿಮೋವಾ 7-5, 6-4 ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು. ಅನಿಸಿಕೋವಾ 2019ರಲ್ಲಿ ಇಲ್ಲಿ ಸೆಮಿಫೈನಲ್‌ ತಲುಪಿದ್ದರು.
ಒಸಾಕಾ ಕಳೆದ ವರ್ಷ ಕಡ್ಡಾಯ ಮಾಧ್ಯಮ ಬದ್ಧತೆಯ ಗೌರವ ಪಾಲಿಸಲು ನಿರಾಕರಿಸಿದ್ದರಿಂದ ಅವರಿಗೆ ದಂಡ ವಿಧಿಸಲಾಗಿತಲ್ಲದೇ ಆ ವರ್ಷ ಫ್ರೆಂಚ್‌ ಓಪನ್‌ ಆಡದಂತೆ ನಿಷೇಧ ಹೇರಲಾಗಿತ್ತು. ಖನ್ನತೆಯಿಂದ ಬಳಲುತ್ತಿದ್ದ ಕಾರಣ ಮಾಧ್ಯಮದ ಜತೆ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ಅವರು ಆಬಳಿಕ ತಿಳಿಸಿದ್ದರು.

ಹಾಲಿ ಚಾಂಪಿಯನ್‌ಗೆ ಸೋಲು
ಹಾಲಿ ಚಾಂಪಿಯನ್‌ ಆಗಿರುವ ಬಾಬೊìರಾ ಕ್ರೆಜಿಸಿಕೋವಾ ಮೂರು ಸೆಟ್‌ಗಳ ಹೋರಾಟದಲ್ಲಿ ಸೋತು ಹೊರಬಿದ್ದಿದ್ದಾರೆ. ಅವರು ಫ್ರಾನ್ಸ್‌ನ ಹದಿಹರೆಯದ ಡಿಯಾನೆ ಪೆರ್ರಿ ಅವರ ಕೈಯಲ್ಲಿ 1-6, 6-2, 6-3 ಸೆಟ್‌ಗಳಿಂದ ಸೋಲನ್ನು ಕಂಡರು. ಮೊಣಕೈ ಗಾಯದಿಂದಾಗಿ ಅವರು ಕಳೆದ ಫೆಬ್ರವರಿ ಬಳಿಕ ಇಷ್ಟರವರೆಗೆ ಟೆನಿಸ್‌ನಿಂದ ದೂರ ಉಳಿದಿದ್ದರು.

ಫ್ರೆಂಚ್‌ ಓಪನ್‌ ಫೇವರಿಟ್‌ ಇಗಾ ಸ್ವಿಯಾಟೆಕ್‌ ಸುಲಭ ಗೆಲುವಿನೊಂದಿಗೆ ದ್ವಿತೀಯ ಸುತ್ತಿಗೇರಿದ್ದಾರೆ. ಉಕ್ರೈನಿನ ಅರ್ಹತಾ ಆಟಗಾರ್ತಿ ಲೆಸಿಯಾ ಟಿಸುರೆಂಕೊ ಅವರನ್ನು 6-2, 6-0 ಸೆಟ್‌ಗಳಿಂದ ಉರುಳಿಸಿದ ಅವರು ತನ್ನ ಸತತ ಗೆಲುವಿನ ಅಭಿಯಾನವನ್ನು 29 ಪಂದ್ಯಗಳಿಗೆ ವಿಸ್ತರಿಸಿದರು.

ವಿಶ್ವದ ನಂಬರ್‌ ವನ್‌ ಆಟಗಾರ್ತಿ ಯಾಗಿರುವ ಸ್ವಿಯಾಟೆಕ್‌ ಕಳೆದ ಐದು ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ್ದಲ್ಲದೇ ಮೂರನೇ ಪ್ರಯತ್ನದಲ್ಲಿ ಎರಡನೇ ಫ್ರೆಂಚ್‌ ಓಪನ್‌ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಕಳೆದ ಫೆಬ್ರವರಿಯಿಂದ ಅಜೇಯ ಸಾಧನೆ ಮುಂದುವರಿಸಿರುವ ಸ್ವಿಯಾಟೆಕ್‌ ಡಬ್ಲ್ಯುಟಿಎ ಟೂರ್‌ನಲ್ಲಿ ಎರಡನೇ ದೀರ್ಘ‌ ಪಂದ್ಯಗಳ ಗೆಲುವಿನ ದಾಖಲೆಯನ್ನು ಹೊಂದಿದ್ದಾರೆ. 2013ರಲ್ಲಿ ಸತತ 34 ಪಂದ್ಯ ಗೆದ್ದಿರುವ ಸೆರೆನಾ ವಿಲಿಯಮ್ಸ್‌ ಮೊದಲ ಸ್ಥಾನದಲ್ಲಿದ್ದಾರೆ.

ಡೊಮಿನಿಕ್‌ ಥೀಮ್‌ಗೆ ಸೋಲು
ಎರಡು ಬಾರಿಯ ರನ್ನರ್‌ ಅಪ್‌ ಡೊಮಿನಿಕ್‌ ಥೀಮ್‌ ಅವರು ಬೊಲಿವಿಯಾದ ಹುಗೊ ಡೆಲ್ಲೀನ್‌ ಅವರ ಕೈಯಲ್ಲಿ 6-3, 6-2, 6-4 ಸೆಟ್‌ಗಳಿಂದ ಸೋಲನ್ನು ಕಂಡಿದ್ದಾರೆ. 2020ರ ಯುಎಸ್‌ ಚಾಂಪಿಯನ್‌ ಆಗಿದ್ದ ಥೀಮ್‌ ಗಾಯದ ಸಮಸ್ಯೆಯಿಂದಾಗಿ ಹಲವು ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಇಬ್ಬರು ನಾಯಕರ ಪೈಪೋಟಿ : ಸಚಿವ ಬಿ ಶ್ರೀರಾಮುಲು ಲೇವಡಿ

ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಇಬ್ಬರು ನಾಯಕರ ಪೈಪೋಟಿ : ಸಚಿವ ಬಿ ಶ್ರೀರಾಮುಲು ಲೇವಡಿ

ಜುಲೈ 8ರವರೆಗೂ ಮುಂಬೈನಲ್ಲಿ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ; NDRF ರವಾನೆ

ಜುಲೈ 8ರವರೆಗೂ ಮುಂಬೈನಲ್ಲಿ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ; NDRF ರವಾನೆ

tdy-28

ಪೊಲೀಸರ ಮಿಂಚಿನ ಕಾರ್ಯಾಚರಣೆ: ಚಂದ್ರಶೇಖರ ಗುರೂಜಿ ಹಂತಕರ ಬಂಧನ

ಚಿಕ್ಕೋಡಿ: ಸಾಕಲಾಗುವುದಿಲ್ಲವೆಂದು ಮಗಳನ್ನು ಹತ್ಯೆಗೈದ ತಂದೆಗೆ ಜೀವಾವಧಿ ಶಿಕ್ಷೆ

ಚಿಕ್ಕೋಡಿ: ಸಾಕಲಾಗುವುದಿಲ್ಲವೆಂದು ಮಗಳನ್ನು ಹತ್ಯೆಗೈದ ತಂದೆಗೆ ಜೀವಾವಧಿ ಶಿಕ್ಷೆ

ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್

ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್

cm-b-bommai

ನನ್ನ ರಾಜೀನಾಮೆ ಕೇಳಲು ಸಿದ್ದರಾಮಯ್ಯ ಗೆ ಯಾವ ನೈತಿಕತೆ ಇದೆ?: ಸಿಎಂ ಬೊಮ್ಮಾಯಿ

ಆಪ್ತ ಕಾರ್ಯದರ್ಶಿಯಿಂದಲೇ ಕೊಲೆಯಾದರೆ ಚಂದ್ರಶೇಖರ ಗುರೂಜಿ; ಮಹಿಳೆ ಪೊಲೀಸ್ ವಶಕ್ಕೆ

ಆಪ್ತ ಕಾರ್ಯದರ್ಶಿಯಿಂದಲೇ ಕೊಲೆಯಾದರೆ ಚಂದ್ರಶೇಖರ ಗುರೂಜಿ; ಮಹಿಳೆ ಪೊಲೀಸ್ ವಶಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್

ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್

ಟಿ20 ಪಂದ್ಯ: ಪೊವೆಲ್‌ ಪರಾಕ್ರಮ; ಬಾಂಗ್ಲಾದೇಶ ವಿರುದ್ಧ ವೆಸ್ಟ್‌ ಇಂಡೀಸ್‌ ವಿಜಯ

ಟಿ20 ಪಂದ್ಯ: ಪೊವೆಲ್‌ ಪರಾಕ್ರಮ; ಬಾಂಗ್ಲಾದೇಶ ವಿರುದ್ಧ ವೆಸ್ಟ್‌ ಇಂಡೀಸ್‌ ವಿಜಯ

ವಿಂಬಲ್ಡನ್‌-2022: ರಿಬಾಕಿನಾ, ಗಾರಿನ್‌ ಕ್ವಾ.ಫೈನಲ್‌ ಪ್ರವೇಶ

ವಿಂಬಲ್ಡನ್‌-2022: ರಿಬಾಕಿನಾ, ಗಾರಿನ್‌ ಕ್ವಾ.ಫೈನಲ್‌ ಪ್ರವೇಶ

ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌: ಟಾರ್ಗೆಟ್‌ 378; ಗೆಲುವಿಗೆ ಪೈಪೋಟಿ

ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌: ಟಾರ್ಗೆಟ್‌ 378; ಗೆಲುವಿಗೆ ಪೈಪೋಟಿ

ಮಂಧನಾ-ಶಫಾಲಿ ಅಜೇಯ ಜೊತೆಯಾಟ: ಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ವನಿತೆಯರು

ಮಂಧನಾ-ಶಫಾಲಿ ಅಜೇಯ ಜೊತೆಯಾಟ: ಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ವನಿತೆಯರು

MUST WATCH

udayavani youtube

ಹುಬ್ಬಳ್ಳಿ ಹೋಟೆಲ್ ನಲ್ಲಿ ‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ!

udayavani youtube

ವಿದ್ಯುದಾಘಾತದಿಂದ ಒದ್ದಾಡುತ್ತಿದ್ದ ಹಸುವನ್ನು ರಕ್ಷಿಸಿದ ವ್ಯಕ್ತಿ

udayavani youtube

ನ್ಯಾಯಾಧೀಶರ ಸ್ಥಾನಕ್ಕೆ ದೊಡ್ಡ ಕಂಟಕ !

udayavani youtube

ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್

udayavani youtube

ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು

ಹೊಸ ಸೇರ್ಪಡೆ

ಕನ್ಹಯ್ಯ ಹತ್ಯೆಗೆ ರಾಜಸ್ಥಾನ ಸರ್ಕಾರವೇ ಕಾರಣ; ರೇಣುಕಾಚಾರ್ಯ

ಕನ್ಹಯ್ಯ ಹತ್ಯೆಗೆ ರಾಜಸ್ಥಾನ ಸರ್ಕಾರವೇ ಕಾರಣ; ರೇಣುಕಾಚಾರ್ಯ

18roadblock

ಜನರಿಂದ ಮರಾಠಿ ವಿದ್ಯಾಲಯ ಬಳಿ ದಿಢೀರ್‌ ರಸ್ತೆ ತಡೆ

19

ಈಗ ಮಳೆಯಾದ್ರೆ ಮಾತ್ರ ಕೈಗೆ ಬೆಳೆ

ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಇಬ್ಬರು ನಾಯಕರ ಪೈಪೋಟಿ : ಸಚಿವ ಬಿ ಶ್ರೀರಾಮುಲು ಲೇವಡಿ

ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಇಬ್ಬರು ನಾಯಕರ ಪೈಪೋಟಿ : ಸಚಿವ ಬಿ ಶ್ರೀರಾಮುಲು ಲೇವಡಿ

18

ಮಿಶ್ರ ಬೆಳೆಯಲ್ಲಿ ಯಶ ಕಂಡ ರೈತ ಸುರೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.