National ಮಲ್ಲಕಂಬ: ರಾಜ್ಯತಂಡ ಪ್ರಕಟ
Team Udayavani, Oct 24, 2023, 11:32 PM IST
ಮೂಡಬಿದಿರೆ: ಅಕ್ಟೋಬರ್ 26ರಿಂದ ಗೋವಾದಲ್ಲಿ ನಡೆಯಲಿರುವ 37ನೇ ರಾಷ್ಟ್ರೀಯ ಮಲ್ಲಕಂಬ ಕ್ರೀಡಾಕೂಟಕ್ಕೆ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಮಲ್ಲಕಂಬ ಅಸೋಸಿಯೇಷನ್ ಆಶ್ರಯದಲ್ಲಿ ಬಾಲಕೋಟೆ ಜಿಲ್ಲೆಯ ತುಳಸಿಗಿರಿ ಉದ್ದಂಡಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮಾವೇಶದಲ್ಲಿ ಈ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಯಿತು.
ಕರ್ನಾಟಕ ರಾಜ್ಯ ಮಲ್ಲಕಂಬ ತಂಡಕ್ಕಾಗಿ ಒಟ್ಟು 12 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಲ್ಲಕಂಬ ತಂಡದ ಬಾಲಕರಾದ ಹನುಮಂತ್ ಎಂ., ಆಕಾಶ್ ಪಿ., ವಿನಾ¿åಕ್ ಕೆ. ಹಾಗೂ ಬಾಲಕಿಯರ ವಿಭಾಗದಲ್ಲಿ ಭಾಗ್ಯಶ್ರೀ ಎಸ್., ದೊಡ್ಡಮ್ಮ ಪಿ., ಕಾವೇರಿ ಎಸ್. ಸೇರಿ ಒಟ್ಟು 6 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಈ ಆರೂ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಚಿತ ಶಿಕ್ಷಣ ಯೋಜನೆಯಡಿ 4ನೇ ತರಗತಿಯಿಂದ ಸ್ನಾತಕೋತ್ತರ ತರಗತಿಯವರೆಗೆ ಅಧ್ಯಯನ ನಡೆಸುತ್ತಿದ್ದು, ಆಳ್ವಾಸ್ನ ಮಲ್ಲಕಂಬ 110 ವಿದ್ಯಾರ್ಥಿಗಳ ತಂಡದ ಸದಸ್ಯರಾಗಿರುವುದು ಸಂತಸ ತಂದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ