ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ನಿಖತ್ ಜರೀನ್ ಫೈನಲಿಗೆ
Team Udayavani, May 19, 2022, 2:05 AM IST
ಹೊಸದಿಲ್ಲಿ: ಭಾರತದ ನಿಖತ್ ಜರೀನ್ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಹಂತಕ್ಕೇರಿದ್ದಾರೆ.
ಇನ್ನಿಬ್ಬರು ಸೆಮಿಫೈನಲ್‌ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
52 ಕೆ.ಜಿ. ವಿಭಾಗದಲ್ಲಿ ಬ್ರಝಿಲಿನ ಕ್ಯಾರೊಲಿನ್ ಡಿ ಅಲ್ಮೇಡಾ ಅವರನ್ನು 5-0 ಅಂತರದಿಂದ ಸುಲಭ ವಾಗಿ ಮಣಿಸಿದ ನಿಖಾತ್ ಫೈನಲಿಗೇರಿದ್ದಾರೆ. ಮಾಜಿ ಜೂನಿಯರ್ ಚಾಂಪಿಯನ್ ಆಗಿರುವ ನಿಖಾತ್ ತನ್ನ ಎದುರಾಳಿಯೆದುರು ಸಂಪೂರ್ಣ ಪ್ರಾಬಲ್ಯ ಸ್ಥಾಪಿಸಿದ್ದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಬಾರಿ ಸ್ಪರ್ಧಿಸುತ್ತಿರುವ ಮನೀಷಾ 57 ಕೆ.ಜಿ. ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಇಟೆಲಿಯ ಇರ್ಮಾ ಟೆಸ್ಟಾ ಅವರ ಕೈಯಲ್ಲಿ 0-5 ಅಂತರದಿಂದ ಸೋತು ಕಂಚು ಪಡೆದರು. 63 ಕೆ.ಜಿ. ವಿಭಾಗದಲ್ಲಿ ಪರ್ವೀನ್ ಹೂಡಾ ಯುರೋಪಿಯನ್ ಚಾಂಪಿಯನ್‌ಶಿಪ್ ಕಂಚು ವಿಜೇತೆ ಆ್ಯಮಿ ಬ್ರಾಡ್‌ಹರ್ಸ್ಡ್ ಅವರ ಕೈಯಲ್ಲಿ 1-4 ಅಂತರದ ಪರಾಭವಗೊಂಡರು.
ಆರು ಬಾರಿಯ ಚಾಂಪಿಯನ್ ಎಂಸಿ ಮೇರಿಕಾಂ, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಸಿ ಅವರು ಈ ಹಿಂದೆ ವಿಶ್ವ ಪ್ರಶಸ್ತಿ ಗೆದ್ದ ಭಾರತೀಯ ವನಿತಾ ಬಾಕ್ಸರ್‌ಗಳಾಗಿದ್ದಾರೆ. ಇದೀಗ ಹೈದರಾಬಾದ್ ಮೂಲದ ಜರೀನಾ ಅವರಿಗೆ ಈ ಸಾಧಕರ ಸಾಲಿಗೆ ಸೇರುವ ಅವಕಾಶ ವೊಂದು ಒದಗಿ ಬಂದಿದೆ.
ಭಾರತ 2006ರಲ್ಲಿ ಈ ಕೂಟದಲ್ಲಿ ಶ್ರೇಷ್ಠ ನಿರ್ವಹಣೆಯನ್ನು ದಾಖಲಿಸಿತ್ತು. ಆಗ ಭಾರತವು ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು 3 ಕಂಚು ಸಹಿತ ಎಂಟು ಪದಕ ಜಯಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಜ್ ಬಾಸ್ಟನ್ ಟೆಸ್ಟ್: ಟೀಂ ಇಂಡಿಯಾಗೆ ಬುಮ್ರಾ ಕ್ಯಾಪ್ಟನ್; ಟಾಸ್ ಗೆದ್ದ ಆಂಗ್ಲರು
ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video
ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್
ಬರ್ಮಿಂಗ್ಹ್ಯಾಮ್: ಭಾರತಕ್ಕೆ ಸವಾಲಿನ ಟೆಸ್ಟ್
ವನಿತಾ ವಿಶ್ವಕಪ್ ಹಾಕಿ ನೆದರ್ಲೆಂಡ್ಸ್ ಫೇವರಿಟ್; ಭಾರತಕ್ಕೆ ಚಾಲೆಂಜ್
MUST WATCH
ಹೊಸ ಸೇರ್ಪಡೆ
ಗುತ್ತಿಗೆ ಪೌರಕಾರ್ಮಿಕರ ಖಾಯಂಗೆ ಒಪ್ಪಿಗೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತ?
ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಶಿರೋಮಣಿ ಅಕಾಲಿದಳ ಬೆಂಬಲ: ರಾಗ ಬದಲಿಸಿದ ದೀದಿ
ರಾಜ್ಯ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಷ ಕೊಟ್ಟು ಕೊಲ್ಲುತ್ತಿದೆ: ಸಿದ್ದರಾಮಯ್ಯ
ಒನ್ಪ್ಲಸ್ ನೋರ್ಡ್ 2ಟಿ 5ಜಿ ಬಿಡುಗಡೆ: 80 ವ್ಯಾಟ್ ಫಾಸ್ಟ್ ಚಾರ್ಜಿಂಗ್