ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಬ್ಯಾಡ್ಮಿಂಟನ್‌ ಸಾಧಕರ ಜತೆ ಪ್ರಧಾನಿ ಸಂವಾದ

Team Udayavani, May 22, 2022, 11:12 PM IST

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಹೊಸದಿಲ್ಲಿ: ಥಾಮಸ್‌ ಕಪ್‌ ಗೆದ್ದು ಐತಿಹಾಸಿಕ ಸಾಧನೆಗೈದ ಭಾರತೀಯ ಬ್ಯಾಡ್ಮಿಂಟನ್‌ ತಂಡದ ಸದಸ್ಯರಿಗೆ ತನ್ನ ಅಧಿಕೃತ ನಿವಾಸದಲ್ಲಿ ಆತಿಥ್ಯ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು “ಇದೊಂದು ಸಣ್ಣ ಸಾಧನೆಯಲ್ಲ. ಇದನ್ನು ಮುಂದುವರಿಸಿಕೊಂಡು ಬನ್ನಿ’ ಎಂದು ಹಾರೈಸಿದರು.

ಥಾಮಸ್‌ ಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ತತ್‌ಕ್ಷಣ ಭಾರತೀಯ ತಂಡದ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದ ಮೋದಿ ಅವರು ಇದೀಗ ತಂಡ ತವರಿಗೆ ಬಂದ ಕೂಡಲೇ ತನ್ನ ನಿವಾಸಕ್ಕೆ ಕರೆದರಲ್ಲದà ಎಲ್ಲರೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಸಂವಾದ ನಡೆಸಿದರು. ಈ ವೇಳೆ ಉಬೆರ್‌ ಕಪ್‌ನಲ್ಲಿ ಆಡಿದ್ದ ವನಿತಾ ಆಟಗಾರ್ತಿಯರೂ ಇದ್ದರು.

ಎಲ್ಲರಿಗೂ ಅಭಿನಂದನೆ
“ದೇಶದ ಪರವಾಗಿ ತಂಡದ ಎಲ್ಲ ಸದಸ್ಯರನ್ನು ನಾನು ಅಭಿನಂದಿಸುತ್ತೇನೆ. ಇದೊಂದು ಸಣ್ಣ ಸಾಧನೆಯಲ್ಲ. ನೀವು ಇದನ್ನು ಸಾಧಿಸಿದ್ದೀರಿ. ಒಂದು ಸಮಯದಲ್ಲಿ ಇಂತಹ ಕೂಟಗಳಲ್ಲಿ ನಾವು ಬಹಳಷ್ಟು ಹಿಂದೆ ಇದ್ದೆವು. ಇದು ಈಗಿನ ಜನರಿಗೆ ಗೊತ್ತಿಲ್ಲ’ ಎಂದು ಮೋದಿ ಹೇಳಿದರು. ವಿಜಯಿ ಆಟಗಾರರೊಂದಿಗೆ ಮೋದಿ ಸಂವಾದ ನಡೆಸಿದರು.

ಈ ವೇಳೆ ಬಲಿಷ್ಠ ಇಂಡೋನೇಷ್ಯಾವನ್ನು ಸೋಲಿಸಿ ಥಾಮಸ್‌ ಕಪ್‌ ಗೆದ್ದ ಸಾಧನೆಯ ನೆನಪುಗಳನ್ನು ಅವರು ಮೆಲುಕು ಹಾಕಿದರು. ಈ ಸ್ಪರ್ಧೆಯಲ್ಲಿ ದಶಕಗಳ ಬಳಿಕ ನಮ್ಮ ಧ್ವಜವನ್ನು ಹಾರಿಸಲು ಭಾರತಕ್ಕೆ ಸಾಧ್ಯವಾಯಿತು. ಇದೊಂದು ಚಿಕ್ಕ ಸಾಧನೆಯಲ್ಲ ಎಂದವರು ಸ್ಪಷ್ಟಪಡಿಸಿದರು.

ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಹಿಂದೆ ಇಂತಹ ಕೂಟಗಳ ಬಗ್ಗೆ ಜನರು ಕಾಳಜಿ ವಹಿಸಿಲ್ಲ. ಥಾಮಸ್‌ ಕಪ್‌ ಗೆಲುವಿನಿಂದ ದೇಶವು ಇದೀಗ ಬ್ಯಾಡ್ಮಿಂಟನ್‌ ಕ್ರೀಡೆ ಮತ್ತು ತಂಡದ ಆಟಗಾರರನ್ನು ಗಮನಿಸುವಂತಾಗಿದೆ ಎಂದರು.

ಹೌದು, ನಮ್ಮಿಂದ ಇದು ಸಾಧ್ಯವಿದೆ ಎಂಬ ಮನೋಭಾವವು ಇಂದು ದೇಶದಲ್ಲಿ ಹೊಸ ಶಕ್ತಿಯಾಗಿ ಮೂಡಿಬಂದಿದೆ. ಸರಕಾರವು ನಮ್ಮ ಆಟಗಾರರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲಿದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಮೋದಿ ತಿಳಿಸಿದರು.

ಥಾಮಸ್‌ ಕಪ್‌ನಲ್ಲಿ, ಅದರಲ್ಲಿಯೂ ಫೈನಲ್‌ ಹೋರಾಟದಲ್ಲಿ ಭಾರತದ ಸವಾಲಿನ ನೇತೃತ್ವ ವಹಿಸಿ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡು ಅದ್ಭುತ ನಿರ್ವಹಣೆ ನೀಡಿದ 29ರ ಹರೆಯದ ಹಿರಿಯ ಆಟಗಾರ ಕಿದಂಬಿ ಶ್ರೀಕಾಂತ್‌ ಅವರನ್ನು ವಿಶೇಷವಾಗಿ ಅಭಿನಂದಿಸಿದರು.

“ಪ್ರಧಾನಿಯವರು ಯಾವಾಗಲೂ ನಮ್ಮ ಆಟಗಾರರು ಮತ್ತು ಕ್ರೀಡೆಯ ಬಗ್ಗೆ ಚಿಂತಿಸುತ್ತಾರೆ ಹಾಗೂ ಅವರ ಅಲೋಚನೆಗಳು ಆಟಗಾರರೊಂದಿಗೆ ಸಂಪರ್ಕ ಹೊಂದಿದೆ ಎಂದು ತಂಡದ ಮುಖ್ಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಹೇಳಿದ್ದಾರೆ. ನಾನು ಆಟಗಾರನಾಗಿದ್ದ ಸಂದರ್ಭ ಹಲವು ಪದಕಗಳನ್ನು ಗೆದ್ದಿದ್ದೆ. ಆದರೆ ಒಮ್ಮೆಯೂ ನಮ್ಮ ಪ್ರಧಾನಿಯವರು ನನ್ನನ್ನು ಕರೆಸಿಕೊಂಡಿಲ್ಲ’ ಎಂದು ಡಬಲ್ಸ್‌ ಆಟಗಾರರ ಕೋಚ್‌ ಮಥಿಯಾಸ್‌ ಬೋಯ್‌ ನೆನಪಿಸಿಕೊಂಡರು.

ಸ್ಟಾರ್‌ ಶಟ್ಲರ್‌ ಲಕ್ಷ್ಯ ಸೇನ್‌ ಸಿಹಿತಿಂಡಿಯ ಪ್ಯಾಕೆಟ್‌ ಒಂದನ್ನು ಪ್ರಧಾನಿಯವರಿಗೆ ಉಡು ಗೊರೆಯಾಗಿ ನೀಡಿದರು. ನೀವು ನಮ್ಮನ್ನು ಭೇಟಿಯಾದಾಗ ಅಥವಾ ನಮ್ಮೊಂದಿಗೆ ಸಂವಹನ ನಡೆಸಿದಗ ನಾವು ತುಂಬಾ ಪ್ರೇರಿತರಾಗಿದ್ದೇವೆ. ದೇಶಕ್ಕಾಗಿ ನಾವು ಪದಕ ಗೆಲ್ಲಲು ಯಾವಾಗಲೂ ಶಕ್ತಿಮೀರಿ ಪ್ರಯತ್ನಿಸಲಿದ್ದೇವೆ ಎಂದ ಲಕ್ಷ್ಯ ಸೇನ್‌, ಪ್ರಧಾನಿ ಯವರು ಆಟಗಾರರ ಚಿಕ್ಕ ವಿಷಯಗಳನ್ನು ಕೂಡ ಮರೆಯದೆ ನೆನಪಿಸಿಕೊಳ್ಳುವುದು ಅತ್ಯಂತ ಖುಷಿಯ ವಿಷಯ ಎಂದರು.

ಹಲವು ಶ್ರೇಷ್ಠ ಆಟಗಾರರನ್ನು ಹುಟ್ಟು ಹಾಕುತ್ತಿರುತ್ತಿರುವುದರಿಂದ ಹರ್ಯಾಣದ ಮಣ್ಣಿನಲ್ಲಿ ಏನಿದೆ ವಿಶೇಷ ಎಂದು ಹರ್ಯಾಣ ಮೂಲದ ಶಟ್ಲರ್‌ ಉನ್ನತಿ ಹೂಡಾ ಅವರಲ್ಲಿ ಮೋದಿ ಪ್ರಶ್ನಿಸಿದರು.

ಇದಕ್ಕೆ ಉನ್ನತಿ ನಕ್ಕರು. “ಸರ್‌, ನನ್ನನ್ನು ಪ್ರೇರೇಪಿಸುವ ಅಂಶವೆಂದರೆ, ನೀವು ಪದಕ ವಿಜೇತರು ಮತ್ತು ಪದಕ ಗೆಲ್ಲದವರ ನಡುವೆ ಭೇದಭಾವ ಮಾಡದಿರುವುದು…’ ಎಂದರು.

ಮಾತಾಡುವ ಸೌಭಾಗ್ಯ…
ವಿಶ್ವದ ಬೇರೆ ಯಾವುದೇ ಆ್ಯತ್ಲೀಟ್‌ಗಳಿಗೆ ಈ ರೀತಿಯ ಪ್ರೋತ್ಸಾಹ, ಬೆಂಬಲ ಸಿಗಲು ಕಷ್ಟ ಸರ್‌ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪ್ರಶಸ್ತಿ ಗೆದ್ದ ತತ್‌ಕ್ಷಣ ನಿಮ್ಮೊಂದಿಗೆ ಮಾತನಾಡುವ ಸೌಭಾಗ್ಯ ನಮಗೆ ಸಿಕ್ಕಿದೆ ಮೊದಲು ನಿಮಗೆ ಅಭಿನಂದನೆಗಳು ಸರ್‌. ಇಷ್ಟು ಮಾತ್ರವಲ್ಲದೇ ನಮ್ಮ ಪ್ರಧಾನಿಯವರ ಬೆಂಬಲ ನಮಗಿದೆ ಎಂದು ಎಲ್ಲ ಆಟಗಾರರು ಹೇಳುತ್ತಿದ್ದಾರೆ ಎಂದು ಶ್ರೀಕಾಂತ್‌ ಹೇಳಿದರು.

ಟಾಪ್ ನ್ಯೂಸ್

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.