ಮಿನಿ ಒಲಿಂಪಿಕ್ಸ್‌: ಜಕಾರ್ತಾ ಸರ್ವಾಂಗ ಸುಂದರ

Team Udayavani, Aug 18, 2018, 6:00 AM IST

25.jpg

ಮಿನಿ ಒಲಿಂಪಿಕ್ಸ್‌ ಎಂದೇ ಖ್ಯಾತಿ ಪಡೆದಿರುವ 18ನೇ ಏಶ್ಯನ್‌ ಗೇಮ್ಸ್‌ಗೆ ಶನಿವಾರ ಜಕಾರ್ತಾ ಹಾಗೂ ಪಾಲೆಂಬಾಂಗ್‌ನ ಬಾಗಿಲು ತೆರೆಯಲಿದೆ. ಮೇ ತಿಂಗಳಲ್ಲಿ ಭಯೋತ್ಪಾದಕ ಕೃತ್ಯದಿಂದ ಹಾಗೂ ಕಳೆದ ವಾರ ಭೂಕಂಪದಿಂದ ನಲುಗಿದ್ದ ದ್ವೀಪರಾಷ್ಟ್ರ ಇಂಡೋನೇಶ್ಯದಲ್ಲಿ ಈಗ ಹಬ್ಬದ 
ವಾತಾವರಣ. ಅರ್ಧ ಶತಮಾನದ ಬಳಿಕ ಜಕಾರ್ತಾ ಏಶ್ಯನ್‌ ಗೇಮ್ಸ್‌ ಆತಿಥ್ಯ ವಹಿ ಸು ತ್ತಿದೆ. 1962ರಲ್ಲಿ ಇಲ್ಲಿ ಏಶ್ಯನ್‌ ಗೇಮ್ಸ್‌ ಆಯೋಜನೆಯಾಗಿತ್ತು.

ಕೆಂಪು ಟೀ ಶರ್ಟ್‌ ಧರಿಸಿದ್ದ ವಿದ್ಯಾರ್ಥಿ ಸ್ವಯಂಸೇವಕರು ಕ್ರೀಡಾಪಟುಗಳನ್ನು, ಅಧಿಕಾರಿಗಳನ್ನು ಹಾಗೂ ಕ್ರೀಡಾಭಿಮಾನಿಗಳನ್ನು ಇಲ್ಲಿನ “ಸೊಯಿ ಕರ್ನೋ ಹಟ್ಟಾ’ ವಿಮಾನ ನಿಲ್ದಾಣದಲ್ಲಿ ನಗುಮೊಗದಿಂದ ಸ್ವಾಗತಿಸುತ್ತಿದ್ದಾರೆ. ಅವರಿಗೆ ಎಲ್ಲ ಬಗೆಯ ನೆರವು ನೀಡಿ, ಭದ್ರತಾ ತಪಾಸಣೆಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದ್ದಾರೆ. ಭಾಷಾ ಸಮಸ್ಯೆ ಎದುರಾದಲ್ಲಿ ಮುಗುಳ್ನಗು ಹಾಗೂ ಬಾಗಿ ನಮಸ್ಕಾರ ಮಾಡುವ ವಿನಯವೇ ಸಾಕಾಗುತ್ತಿದೆ.

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಹಾಗೂ ಪಾಕಿಸ್ಥಾನದ ಪ್ರಧಾನಿ ಮಹಮ್ಮ ದಾಲಿ ಜಿನ್ನಾ ಅವರ ಆಳೆತ್ತರದ ಕಟೌಟ್‌ ಗಳನ್ನು ನಿಲ್ಲಿಸಿ ಏಶ್ಯನ್‌ ಗೇಮ್ಸ್‌ನ ರೂವಾರಿಗಳನ್ನು ನೆನಪಿಸಿಕೊಳ್ಳಲಾಗಿದೆ. “ಏಶ್ಯದ ಶಕ್ತಿ’ ಎಂಬ ಧ್ಯೇಯ ವಾಕ್ಯದಲ್ಲಿ ಇಂಡೋನೇಶ್ಯ ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತಿದೆ ಎಂದು ಸ್ವಯಂಸೇವಕರೊಬ್ಬರು ವಿವರಿಸಿದ್ದು ಅರ್ಥ ಪೂರ್ಣವಾಗಿತ್ತು. ಉಪ ಖಂಡದ ದೇಶಗಳ ನಡುವೆ ಸ್ನೇಹ ಹಾಗೂ ಸಂಬಂಧವನ್ನು ವೃದ್ಧಿಸಿಕೊಳ್ಳಲು ಈ ಕ್ರೀಡಾಕೂಟ ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ.

2ನೇ ದೊಡ್ಡ  ಕ್ರೀಡಾಕೂಟ 
ಒಲಿಂಪಿಕ್ಸ್‌ ಹೊರತು ಪಡಿಸಿದರೆ 2ನೇ ಅತೀ ದೊಡ್ಡ ಕ್ರೀಡಾಕೂಟವಾಗಿರುವ ಏಶ್ಯನ್‌ ಗೇಮ್ಸ್‌ನ 18ನೇ ಆವೃತ್ತಿಗೆ ಜಕಾರ್ತಾ ಸರ್ವಾಂಗ ಸುಂದರವಾಗಿ ಸಿದ್ಧಗೊಂಡಿದೆ. ಕ್ರೀಡಾ ಗ್ರಾಮ 9,000ಕ್ಕೂ ಹೆಚ್ಚು ಕ್ರೀಡಾಪಗಳಿಗೆ ಮುಂದಿನ 15 ದಿನಗಳ ಕಾಲ ಆಡುಂಬೊಲವಾಗಲಿದೆ. ಸ್ಥಳೀಯ ಪತ್ರಿಕೆಗಳು ಸಿದ್ಧತೆ ಪೂರ್ಣಗೊಂಡಿರುವ ಬಗ್ಗೆ ಇನ್ನೂ ಅನುಮಾನ ವ್ಯಕ್ತಪಡಿಸುತ್ತಿವೆ. ಆರ್ಥಿಕ ಸಂಕಷ್ಟದ ಕಾರಣಕ್ಕೆ ಹನೋಯಿ ಕ್ರಿಡಾಕೂಟ ಆಯೋಜನೆಯಿಂದ ಹಿಂದೆ ಸರಿದ ಮೇಲೆ ಜಕಾರ್ತಾ ಆತಿಥ್ಯ ವಹಿಸಲು ಒಪ್ಪಿಕೊಂಡಿತು. ಒಂದು ತಿಂಗಳಿಗಿಂತಲೂ ಕಡಿಮೆ ಕಾಲಾವಕಾಶದಲ್ಲಿ ಇಲ್ಲಿನ ಕ್ರೀಡಾ ಗ್ರಾಮ ಸಜ್ಜಾಗಿದೆ.

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-male

WC; ಭಾರತ-ಕೆನಡಾ ಪಂದ್ಯ ರದ್ದು: ಸೂಪರ್‌-8 ಮೊದಲ ಎದುರಾಳಿ ಅಫ್ಘಾನ್

TT

TT: ಭಾರತ ವನಿತೆಯರಿಗೆ ಕಂಚು

Trent Boult confirms “This is my last T20I World Cup

T20 WorldCup; ಕ್ರಿಕೆಟ್ ವಿಶ್ವಕ್ಕೆ ಶಾಕ್ ನೀಡಿದ ಕಿವೀಸ್ ಬೌಲರ್ ಟ್ರೆಂಟ್ ಬೌಲ್ಟ್ ನಿರ್ಧಾರ

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.