10 ವರ್ಷದ ನಂತರ ಪಾಕ್ ನಲ್ಲಿ ಟೆಸ್ಟ್: ಆ ಧೈರ್ಯ ತೋರಿದ ದೇಶ ಯಾವುದು ಗೊತ್ತಾ?

Team Udayavani, Nov 14, 2019, 1:47 PM IST

ಇಸ್ಲಮಾಬಾದ್: ಬರೋಬ್ಬರಿ ಹತ್ತು ವರ್ಷಗಳ ನಂತರ ಪಾಕಿಸ್ಥಾನದಲ್ಲಿ ಟೆಸ್ಟ್ ಕ್ರಿಕೆಟ್ ನಡೆಯಲಿದೆ. 2009ರಲ್ಲಿ ಲಾಹೋರ್ ನಲ್ಲಿ ಲಂಕಾ ಆಟಗಾರರ ಮೇಲೆ ದಾಳಿ ನಡೆದ ನಂತರ ಇದೇ ಮೊದಲ ಬಾರಿಗೆ ಪಾಕ್ ನಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ದೇಶವೊಂದು ಉತ್ಸಾಹ ತೋರಿದೆ. ಆ ದೇಶ ಯಾವುದು ಗೊತ್ತಾ, 10 ವರ್ಷಗಳ ಹಿಂದೆ ಕಿವಿ ಪಕ್ಕದಲ್ಲಿ ಗುಂಡಿನ ಮೊರೆತ ಕೇಳಿ ಬಂದಿದ್ದಅದೇ ಶ್ರೀಲಂಕಾ.

ಶ್ರೀಲಂಕಾ ತಂಡ ಈ ವರ್ಷದ ಅಂತ್ಯದಲ್ಲಿ ಪಾಕ್ ಪ್ರವಾಸ ಕೈಗೊಳ್ಳಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಅಡಿಯಲ್ಲಿ ಈ ಸರಣಿ ಬರಲಿದ್ದು, ಮೊದಲ ಟೆಸ್ಟ್ ಡಿಸೆಂಬರ್ 11ರಂದು ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಕರಾಚಿ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಡಿ 19-23ರವರೆಗೆ ನಡೆಯಲಿದೆ.

2009ರ ಮಾರ್ಚ್ ನಲ್ಲಿ ಕೊನೆಯದಾಗಿ ಪಾಕ್ ನಲ್ಲಿ ಟೆಸ್ಟ್ ಪಂದ್ಯ ಆಯೋಜಿಸಲಾಗಿತ್ತು. ಅಂದು ಲಂಕಾ ಆಟಗಾರರ ಮೇಲೆ ಭಯೋತ್ಪಾದಕ ದಾಳಿಯಾದ ಕಾರಣ ನಂತರ ಯಾವುದೇ ದೇಶಗಳು ಪಾಕ್ ಗೆ ಪ್ರಯಾಣ ಬೆಳೆಸಲು ಹಿಂದೇಟು ಹಾಕಿದ್ದವು. ಆದರೆ ಇತ್ತೀಚೆಗೆ ಲಂಕಾ ತಂಡ ನಿಗದಿತ ಓವರ್ ಪಂದ್ಯಾವಳಿಯನ್ನು ಪಾಕ್ ನಲ್ಲಿ ಆಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ