Para Asiad Games: ಅವಳಿ ಪದಕಗಳ ಸಾಧಕ ಕಿಶನ್‌ ಗಂಗೊಳ್ಳಿ


Team Udayavani, Oct 30, 2023, 12:30 AM IST

1-adssa

ಕುಂದಾಪುರ: ಚೀನದ ಹ್ಯಾಂಗ್‌ಝೂನಲ್ಲಿ ನಡೆದ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಚೆಸ್‌ ಪಟು ಕಿಶನ್‌ ಗಂಗೊಳ್ಳಿ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಎರಡು ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.ವೈಯಕ್ತಿಕ ಕಿಶನ್‌ ಕಂಚು ಜಯಿಸಿದ್ದರು. ತಂಡ ವಿಭಾಗದಲ್ಲೂ ಕಂಚಿನ ಪದಕ ಒಲಿಯಿತು. ಜಕಾರ್ತಾದಲ್ಲಿ ನಡೆದ 2018ರ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಕಿಶನ್‌ ಚಿನ್ನದ ಪದಕ ಗೆದ್ದಿದ್ದರು. ಇದು ಅವರ ಮೂರನೇ ಏಷ್ಯಾಡ್‌ ಪದಕ. ಈ ಮೂಲಕ ಸತತ ಎರಡನೇ ಬಾರಿ ಪದಕ ಜಯಿಸಿದ ಭಾರತದ ಮೊದಲ ಚೆಸ್‌ ಪಟು ಎಂಬುದು ಕಿಶನ್‌ ಹೆಗ್ಗಳಿಕೆ.

ಚೆಸ್‌ನಲ್ಲಿ ಕಳೆದ 10 ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕಿಶನ್‌ ಗಂಗೊಳ್ಳಿ ಪ್ರಸ್ತುತ ಶಿವಮೊಗ್ಗದ ವಿನೋಬ ನಗರದಲ್ಲಿ ತಾಯಿ ಗೀತಾ ಜತೆ ನೆಲೆಸಿದ್ದಾರೆ. ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಕಲೈಕಾರ್‌ನವರು. ಅಕ್ಷಯಕಲ್ಪ ಆಗ್ಯಾìನಿಕ್‌ ಸಂಸ್ಥೆಯಲ್ಲಿ ಕಸ್ಟಮರ್‌ ಕೇರ್‌ಗೆ ಮನೆಯಿಂದಲೇ ಉದ್ಯೋಗ ಮಾಡುತ್ತಿದ್ದಾರೆ.

ಅಪ್ರತಿಮ ಸಾಧಕ
30ರ ಹರೆಯದ ಕಿಶನ್‌ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಹುಟ್ಟಿನಿಂದಲೇ ಶೇ.75 ಭಾಗ ದೃಷ್ಟಿ ಸಮಸ್ಯೆ ಹೊಂದಿದ್ದರು. ಆದರೆ ಕಲಿಕೆಗಾಗಲಿ, ಚೆಸ್‌ಗಾಗಲಿ ಈ ಅಂಧತ್ವ ಹಿನ್ನಡೆಯಾಗಲಿಲ್ಲ. 2011ರಿಂದ ಭಾರತವನ್ನು ಪ್ರತಿನಿಧಿಸುತ್ತ ಬಂದಿರುವ ಇವರು 7 ಬಾರಿ ರಾಷ್ಟ್ರೀಯ ಚಾಂಪಿಯನ್‌ ಹಾಗೂ ಎರಡು ಬಾರಿ ಒಲಿಂಪಿಯಾಡ್‌ ಪದಕ ವಿಜೇತರಾಗಿದ್ದಾರೆ. 2012ರಲ್ಲಿ ಚೆನ್ನೈನಲ್ಲಿ ನಡೆದ ಅಂಧರ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಭಾರತವನ್ನು ಪ್ರತಿನಿಧಿಸಿ ಚೈಯಕ್ತಿಕ ಚಿನ್ನದ ಪದಕ ಗೆದ್ದ ದೇಶದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಇವರದು. 2013-2023ರ ವರೆಗೆ ಸತತ 7 ಬಾರಿ ಅಂಧರ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ ಆಗಿ ದಾಖಲೆ ನಿರ್ಮಿಸಿದ್ದಾರೆ.

ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಶಿವಮೊಗ್ಗದ ವಿನೋಬಾ ನಗರದ ಬ್ಯೂಟಿಶಿಯನ್‌ ಗೀತಾ ಗಂಗೊಳ್ಳಿ ಅವರ ಏಕೈಕ ಪುತ್ರ.

ಪ್ರಧಾನಿ ಅಭಿನಂದನೆ
ತಂಡ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕಿಶನ್‌ ಗಂಗೊಳ್ಳಿ, ಆರ್ಯನ್‌ ಜೋಶಿ ಹಾಗೂ ಸೋಮೇಂದ್ರ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಅಭಿನಂದಿಸಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ತಮ್ಮಿಂದ ಮೂಡಿಬರುವಂತಾಗಲಿ ಎಂದು ಹಾರೈಸಿದ್ದಾರೆ. ನ. ಒಂದರಂದು ಪದಕ ವಿಜೇತರನ್ನು ಪ್ರಧಾನಿ ಗೌರವಿಸಲಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಕಿಶನ್‌ ಗಂಗೊಳ್ಳಿ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

4 ಪದಕ ಗೆದ್ದು ಬರುತ್ತೇನೆ ಎಂದಿದ್ದ
ತಾಯಿ ಗೀತಾ”ಈ ಬಾರಿಯ ಪ್ಯಾರಾ ಗೇಮ್ಸ್‌ಗೆ ಹೊರಡುವ ಮುನ್ನ, ಈ ಸಲ ನಾನು 4 ಪದಕ ಗೆದ್ದು ಬರುತ್ತೇನೆ ಎಂದು ಹೇಳಿದ್ದ. ಆದರೆ ಪಂದ್ಯಾ ವಳಿಗೆ ಹೊರಡುವ 15 ದಿನ ಮೊದಲ ಒಂದು ವಾರ ಜ್ವರದಿಂದ ಬಳಲಿದ. ಔಷಧಿಯನ್ನೂ ತೆಗೆದುಕೊಳ್ಳುವಂತಿ ರಲಿಲ್ಲ. ಸರಕಾರದ ಅನು ಮತಿ ಪ್ರಕ್ರಿಯೆಯೂ ತುಸು ವಿಳಂಬ ವಾಗಿತ್ತು. ಈ ಗೊಂದಲದಿಂದ ಚಿಂತೆಗೊಳಗಾಗಿದ್ದ. ಇದು ಟೂರ್ನಿಗೂ ಮುನ್ನ ತರಬೇತಿಗೆ ತುಸು ಹಿನ್ನಡೆಯಾಗಿ ಪರಿಣಮಿಸಿತು. ಆದರೂ ಎರಡು ಪದಕ ಗೆದ್ದಿರುವುದು ತುಂಬಾ ಖುಷಿಯಾಯಿತು. ಅಲ್ಲಿಗೆ ತೆರಳುವ ಮುನ್ನ ಕೊರಗಜ್ಜ ದೈವಸ್ಥಾನ, ಶಿರಡಿ ಸಹಿತ ಅನೇಕ ಧಾರ್ಮಿಕ ಸ್ಥಳಗಳಿಗೆ ತೆರಳಿ ಪ್ರಾರ್ಥಿಸಿದ್ದೆವು. ದೇವರ ದಯೆಯಿಂದ ಈ ಸಾಧನೆ ಮಾಡುವಂತಾಗಿದೆ’ ಎಂದು “ಉದಯವಾಣಿ’ ಜತೆ ಕಿಶನ್‌ ಗಂಗೊಳ್ಳಿ ಅವರ ತಾಯಿ ಗೀತಾ ಗಂಗೊಳ್ಳಿ ಸಂತಸ ಹಂಚಿಕೊಂಡಿದ್ದಾರೆ.

2 ಕಂಚಿನ ಪದಕ ಗೆದ್ದ ಬಳಿಕ ಅಮ್ಮನಿಗೆ ಕರೆ ಮಾಡಿದ ಕಿಶನ್‌, “ಎರಡು ಚಿನ್ನ ಗೆಲ್ಲುವ ಅವಕಾಶ ತಪ್ಪಿತು’ ಎಂದು ಬೇಸರ ವ್ಯಕ್ತಪಡಿ ಸಿದ್ದರು. ಮುಂದಿನ ಬಾರಿ ಇದಕ್ಕಿಂತ ಉತ್ತಮ ಸಾಧನೆ ಮಾಡುತ್ತೇನೆ ಎಂದು ತಾಯಿ ಜತೆ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.