Pro Kabaddi; ಬುಲ್ಸ್ಗೆ 3ನೇ ಜಯ: ಟೈಟಾನ್ಸ್ಗೆ 6ನೇ ಸೋಲು
Team Udayavani, Dec 24, 2023, 11:42 PM IST
ಚೆನ್ನೈ: ಬೆಂಗಳೂರು ಬುಲ್ಸ್ ಬಹಳ ದಿನಗಳ ಬಳಿಕ ಗೆಲುವಿನ ನಗು ಬೀರಿದೆ. ರವಿವಾರದ ತನ್ನ 8ನೇ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ ತೆಲುಗು ಟೈಟಾನ್ಸ್ಗೆ 33-31 ಅಂಕಗಳ ಆಘಾತವಿಕ್ಕಿತು. ಟೈಟಾನ್ಸ್ 6ನೇ ಸೋಲಿನಿಂದ ತತ್ತರಿಸಿತು.
ಬುಲ್ಸ್ ಸಾಂ ಕ ಆಟದ ಮೂಲಕ ಯಶಸ್ಸು ಸಾಧಿಸಿತು. ಡಿಫೆಂಡರ್ ಸುರ್ಜಿತ್ ಸಿಂಗ್ (7), ರೈಡರ್ಗಳಾದ ಭರತ್ (6), ವಿಕಾಸ್ ಖಂಡೋಲ (5) ಮತ್ತು ನೀರಜ್ ನರ್ವಾಲ್ (5) ಉತ್ತಮ ಪ್ರದರ್ಶನವಿತ್ತರು. ಟೈಟಾನ್ಸ್ ಪರ ನಾಯಕ ಪವನ್ ಸೆಹ್ರಾವತ್ ಅತ್ಯಧಿಕ 13 ಅಂಕ ತಂದಿತ್ತರು.
ಮುಂಬಾ ಗೆಲುವು
ಮೊದಲ ಪಂದ್ಯದಲ್ಲಿ ಯು ಮುಂಬಾ 39-37 ಅಂತರದಿಂದ ಬೆಂಗಾಲ್ ವಾರಿಯರ್ಗೆ ಸೋಲುಣಿ ಸಿತು. ಆಲ್ರೌಂಡರ್ ಆಮೀರ್ ಮೊಹಮ್ಮದ್ (8), ರೈಡರ್ ಗುಮಾನ್ ಸಿಂಗ್ (6), ಡಿಫೆಂಡರ್ ಮಹೇಂದರ್ ಸಿಂಗ್ (5) ಅವರ ಸಾಂ ಕ ಆಟ ಮುಂಬಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು.
ಬೆಂಗಾಲ್ ನಾಯಕ ಮಣಿಂದರ್ ಸಿಂಗ್ 1,300 ರೈಡ್ ಪಾಯಿಂಟ್ ದಾಖಲೆ ಸ್ಥಾಪಿಸಿದರು.
ಇಂದಿನ ಪಂದ್ಯಗಳು
1. ಡೆಲ್ಲಿ-ಬೆಂಗಾಲ್ ಆರಂಭ: ರಾತ್ರಿ 8.00
2. ತಮಿಳ್-ಹರ್ಯಾಣ ಆರಂಭ: ರಾತ್ರಿ 9.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು