Pro Kabaddi; ಬೆಂಗಾಲ್-ಯೋಧಾಸ್ ಪಂದ್ಯ ಟೈ
Team Udayavani, Dec 18, 2023, 11:31 PM IST
ಪುಣೆ: ಜಿದ್ದಾಜಿದ್ದಿ ಪೈಪೋಟಿ ಕಂಡ ಬೆಂಗಾಲ್ ವಾರಿಯರ್-ಯುಪಿ ಯೋಧಾಸ್ ನಡುವಿನ ಸೋಮವಾರದ ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. ಎರಡೂ ತಂಡಗಳು 37 ಅಂಕ ಗಳಿಸಿದವು.
ಬೆಂಗಾಲ್ ಪರ ರೈಡರ್ಗಳಾದ ನಿತಿನ್ ಕುಮಾರ್ (10), ಮಣಿಂದರ್ ಸಿಂಗ್ (9), ಶ್ರೀಕಾಂತ್ ಜಾಧವ್ (6) ಉತ್ತಮ ಪ್ರದರ್ಶನ ನೀಡಿದರು. ಯುಪಿ ತಂಡದಲ್ಲಿ ಸುರೇಂದರ್ ಗಿಲ್ ಆಟ ಅಮೋಘ ಮಟ್ಟದಲ್ಲಿತ್ತು. ಇವರದು 18 ಅಂಕಗಳ ಸಾಧನೆ. ಆಲ್ರೌಂಡರ್ ವಿಜಯ್ ಮಲಿಕ್ 7 ಅಂಕ ಸಂಪಾದಿಸಿದರು. ದ್ವಿತೀಯ ಪಂದ್ಯದಲ್ಲಿ ಪುನೇರಿ ಪಲ್ಟಾನ್ 30-23 ಅಂತರದಿಂದ ದಬಾಂಗ್ ಡೆಲ್ಲಿಯನ್ನು ಸೋಲಿಸಿತು.