Pro Kabaddi ಮ್ಯಾಚ್ ನಂ.1000: ಬುಲ್ಸ್ಗೆ ತಿವಿದ ಬೆಂಗಾಲ್
Team Udayavani, Jan 15, 2024, 10:32 PM IST
ಜೈಪುರ: ಐತಿಹಾಸಿಕ 1,000ನೇ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಸೋಲನುಭವಿಸಿದೆ. ಬೆಂಗಾಲ್ ವಾರಿಯರ್ ವಿರುದ್ಧ ಆಡಲಾದ ಈ ಮುಖಾಮುಖೀಯಲ್ಲಿ ಬುಲ್ಸ್ಗೆ 29-35 ಅಂತರದ ಸೋಲು ಎದುರಾಯಿತು.
ಇದರೊಂದಿಗೆ ಸೌರಭ್ ನಂದಲ್ ಪಡೆ 13 ಪಂದ್ಯಗಳಲ್ಲಿ 8ನೇ ಆಘಾತಕ್ಕೆ ಸಿಲುಕಿತು. ಬೆಂಗಾಲ್ ಇಷ್ಟೇ ಪಂದ್ಯಗಳಿಂದ 6ನೇ ಗೆಲುವು ಸಾಧಿಸಿತು.
ನಾಯಕ ಮಣಿಂದರ್ ಸಿಂಗ್ (9 ಅಂಕ), ಡಿಫೆಂಡರ್ ಶುಭಂ ಶಿಂದೆ (7 ಅಂಕ) ಬೆಂಗಾಲ್ ಜಯದ ರೂವಾರಿಗಳೆನಿಸಿದರು. ಬೆಂಗಳೂರು ಬುಲ್ಸ್ ತಂಡದಲ್ಲಿ ರೈಡರ್ ಭರತ್ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು 10 ಅಂಕ ಗಳಿಸಿದರು.
ಜೈಪುರಕ್ಕೆ ಅಗ್ರಸ್ಥಾನ
ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಜೈಪುರ್ ಪಿಂಕ್ ಪ್ಯಾಂಥರ್ 31-29 ಅಂಕಗಳಿಂದ ಯು ಮುಂಬಾವನ್ನು ಮಣಿಸಿ ಅಗ್ರಸ್ಥಾನಕ್ಕೆ ನೆಗೆಯಿತು.
1,000ನೇ ಪಂದ್ಯಕ್ಕೂ ಮುನ್ನ ಐವರು ಲೆಜೆಂಡ್ರಿ ಕಬಡ್ಡಿ ಆಟಗಾರರಾದ ಅನೂಪ್ ಕುಮಾರ್, ಧರ್ಮರಾಜ್ ಚೆರಲಥಾನ್, ಅಜಯ್ ಠಾಕೂರ್, ಮನ್ಜೀತ್ ಚಿಲ್ಲಾರ್ ಮತ್ತು ರಿಷಾಂಕ್ ದೇವಾಡಿಗ ಅವರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ