Pro Kabaddi: ಸೆಮಿಫೈನಲ್ ಪ್ರವೇಶಿಸಿದ ಪಾಟ್ನಾ , ಹರ್ಯಾಣ
Team Udayavani, Feb 26, 2024, 11:27 PM IST
ಹೈದರಾಬಾದ್: ಪಾಟ್ನಾ ಪೈರೆಟ್ಸ್ ಮತ್ತು ಹರ್ಯಾಣ ಸ್ಟೀಲರ್ ಪ್ರೊ ಕಬಡ್ಡಿ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿವೆ. ಸೋಮವಾರದ ಎಲಿಮಿನೇಟರ್ ಪಂದ್ಯಗಳಲ್ಲಿ ದಬಾಂಗ್ ಡೆಲ್ಲಿ ಮತ್ತು ಗುಜರಾತ್ ಟೈಟಾನ್ಸ್ ಪರಾಭವಗೊಂಡವು.
ಸೆಮಿಫೈನಲ್ನಲ್ಲಿ ಪಾಟ್ನಾ-ಪುನೇರಿ ಹಾಗೂ ಹರ್ಯಾಣ- ಜೈಪುರ್ ಸೆಣಸಲಿವೆ. ಎರಡೂ ಪಂದ್ಯಗಳು ಬುಧವಾರ ನಡೆಯಲಿವೆ.
ಪಾಟ್ನಾಕ್ಕೆ ರೋಚಕ ಜಯ
ಅತ್ಯಂತ ರೋಚಕವಾಗಿ ಸಾಗಿದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ 37-35 ಅಂತರದಿಂದ ದಬಾಂಗ್ ಡೆಲ್ಲಿಯನ್ನು ಸೋಲಿಸಿತು.
ಪಾಟ್ನಾ ಪರ ರೈಡರ್ ಸಚಿನ್ ನಾಯಕನ ಆಟವಾಡಿ ಸರ್ವಾಧಿಕ 9 ಅಂಕ ತಂದಿತ್ತರು. ಮಂಜೀತ್, ಸುಧಾಕರ್ ಎಂ., ಸಂದೀಪ್ ಕುಮಾರ್ ತಲಾ 5 ಅಂಕ ಗಳಿಸಿದರು. ಇನ್ನೊಂದೆಡೆ ಡೆಲ್ಲಿ ನಾಯಕ ಆಶು ಮಲಿಕ್ಗೆ ಉಳಿದವರಿಂದ ಸೂಕ್ತ ಬೆಂಬಲ ಸಿಗದೇ ಹೋಯಿತು. ಏಕಾಂಗಿಯಾಗಿ ಹೋರಾಡಿದ ಅವರು 19 ಅಂಕ ಗಳಿಸಿ ಕೊಟ್ಟರು. ಲೀಗ್ ಅಂಕಪಟ್ಟಿಯಲ್ಲಿ ಪಾಟ್ನಾ 6ನೇ ಹಾಗೂ ಡೆಲ್ಲಿ 3ನೇ ಸ್ಥಾನದಲ್ಲಿತ್ತು.
ಹರ್ಯಾಣ ಆಕ್ರಮಣ
ದ್ವಿತೀಯ ಮುಖಾಮುಖಿ ಏಕಪಕ್ಷೀಯವಾಗಿ ಸಾಗಿತು. ಹರ್ಯಾಣ 42-25 ಅಂತರದಿಂದ ಗುಜರಾತ್ ತಂಡವನ್ನು ಬಗ್ಗುಬಡಿಯಿತು. ಹರ್ಯಾಣದ ರೈಡರ್ ವಿನಯ್ ಅಮೋಘ ಆಟವಾಡಿ 12 ಅಂಕ ಗಳಿಸಿದರು. ಲೀಗ್ನಲ್ಲಿ 4ನೇ ಸ್ಥಾನಿಯಾಗಿದ್ದ ಗುಜರಾತ್ ಇಲ್ಲಿ ಜೋಶ್ ತೋರಲು ವಿಫಲವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಿ: ಬ್ರಿ| ಐ.ಎನ್. ರೈ
Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.