Pro Kabaddi; ಪುನೇರಿ ಟಾಪ್; ಗುಜರಾತ್ ಪ್ಲೇ ಆಫ್
Team Udayavani, Feb 11, 2024, 11:47 PM IST
ಕೋಲ್ಕತಾ: ರವಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ತಮಿಳ್ ತಲೈವಾಸ್ಗೆ 56-29 ಅಂತರದ ಭಾರೀ ಸೋಲುಣಿಸಿದ ಪುನೇರಿ ಪಲ್ಟಾನ್ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು (81 ಅಂಕ). ಜತೆಗೆ ಸೆಮಿಫೈನಲ್ ಪ್ರವೇಶವನ್ನೂ ಖಾತ್ರಿಗೊಳಿಸಿತು.
ಇದು 19 ಪಂದ್ಯಗಳಲ್ಲಿ ಪುನೇರಿ ಮೊಳಗಿಸಿದ 14ನೇ ಜಯಭೇರಿ. ರೈಡರ್ ಪಂಕಜ್ ಮೋಹಿತೆ (12 ಅಂಕ), ಆಲ್ರೌಂಡರ್ ಮೊಹಮ್ಮದ್ ರೇಝ (8 ಅಂಕ), ರೈಡರ್ ಮೋಹಿತ್ ಗೋಯತ್ (7 ಅಂಕ) ಪುನೇರಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೊಂದೆಡೆ ತಮಿಳ್ ತಲೈ ವಾಸ್ 20 ಪಂದ್ಯಗಳಲ್ಲಿ 12ನೇ ಸೋಲನುಭವಿಸಿತು.
ಬುಲ್ಸ್ ಹೊರಕ್ಕೆ
ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ಗೆ 50-28 ಅಂತರದ ಸೋಲು ಣಿ ಸಿದ ಗುಜರಾತ್ ಜೈಂಟ್ಸ್ 4ನೇ ತಂಡವಾಗಿ ಪ್ಲೇ ಆಫ್ ಪ್ರವೇ ಶಿ ಸಿದೆ. ಬುಲ್ಸ್ ರೇಸ್ನಿಂದ ಹೊರಬಿತ್ತು.
ಇದು 20 ಪಂದ್ಯಗಳಲ್ಲಿ ಬುಲ್ಸ್ ಅನು ಭವಿಸಿದ 11ನೇ ಸೋಲು. ಗುಜರಾತ್ ಇಷ್ಟೇ ಪಂದ್ಯಗಳಿಂದ 12ನೇ ಜಯ ಸಾಧಿಸಿ 4ನೇ ಸ್ಥಾನಕ್ಕೆ ನೆಗೆಯಿತು. ಪ್ರತೀಕ್ ದಹಿಯಾ ಗುಜರಾತ್ ತಂಡದ ಹೀರೋ ಎನಿಸಿದರು. ಇವರದು 13 ಅಂಕಗಳ ಸಾಧನೆ. ನಾಯಕ ಫಜಲ್ ಅಟ್ರಾಚಲಿ 6 ಅಂಕ ತಂದಿತ್ತರು.
ಬುಲ್ಸ್ ಪರ ರೈಡರ್ ವಿಕಾಸ್ ಖಂಡೋಲ, ಡಿಫೆಂಡರ್ ರಕ್ಷಿತ್ ಒಂದಿಷ್ಟು ಹೋರಾಟ ತೋರಿದರು (ತಲಾ 6 ಅಂಕ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ