![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
Norway Chess tournamen: ನಂ. ವನ್ ಕಾರ್ಲ್ಸನ್ ಕೆಡಹಿದ ಪ್ರಜ್ಞಾನಂದ
Team Udayavani, May 30, 2024, 10:53 PM IST
![Norway Chess tournamen: ನಂ. ವನ್ ಕಾರ್ಲ್ಸನ್ ಕೆಡಹಿದ ಪ್ರಜ್ಞಾನಂದ](https://www.udayavani.com/wp-content/uploads/2024/05/44-620x372.jpg)
ಸ್ಟಾವಂಜರ್ (ನಾರ್ವೆ): ಭಾರತದ ಗ್ರ್ಯಾನ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ನಾರ್ವೆ ಚೆಸ್ ಕೂಟದ ಕ್ಲಾಸಿಕಲ್ ಮಾದರಿಯಲ್ಲಿ ಮೊದಲ ಬಾರಿಗೆ ವಿಶ್ವದ ನಂಬರ್ ವನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದರಲ್ಲದೇ ಮುನ್ನಡೆ ಗಳಿಸಿದರು.
ಆನ್ಲೈನ್ ಮತ್ತು ಕೆಲವೊಂದು ವೇಗದ ಪಂದ್ಯಗಳಲ್ಲಿ ಕಾರ್ಲ್ಸನ್ ಅವರನ್ನು ಸೋಲಿಸಿದ್ದ ಪ್ರಜ್ಞಾನಂದ ಕಳೆದ ವಿಶ್ವಕಪ್ನ ಫೈನಲ್ನಲ್ಲಿ ಅವರಿಗೆ ಸೋತಿದ್ದರು. ನಾರ್ವೆ ಕೂಟದಲ್ಲಿ ತವರಿನ ಫೇವರಿಟ್ ಕಾರ್ಲ್ಸನ್ ಅವರನನ್ನ ಸೋಲಿಸುವಲ್ಲಿ ಯಶಸ್ವಿಯಾದ 18ರ ಹರೆಯದ ಪ್ರಜ್ಞಾನಂದ ಒಟ್ಟಾರೆ 5.5 ಅಂಕಗಳೊಂದಿಗೆ ಮುನ್ನಡೆ ಸ್ಥಾಪಿಸಿದರು. ಅವರೀಗ ದ್ವಿತೀಯ ಸ್ಥಾನಿ ಅಮೆರಿಕದ ಫ್ಯಾಬಿಯಾನೊ ಕರುವಾನ ಅವರ ವಿರುದ್ಧ ಅರ್ಧ ಅಂಕ ಮುನ್ನಡೆಯಲ್ಲಿದ್ದಾರೆ. ಅವರು ಮೂರನೇ ಸುತ್ತಿನ ಪಂದ್ಯದ ಕ್ಲಾಸಿಕಲ್ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಚೀನದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ್ದರು.
ಮೂರಂಕ ಹೊಂದಿರುವ ಕಾರ್ಲ್ ಸನ್ ಮೂರನೇ ಸ್ಥಾನದಲ್ಲಿದ್ದರೆ ಅಮೆರಿಕದ ಹಿಕಾರು ನಕಮುರ, ಫ್ರಾನ್ಸ್ನ ಫಿರೋಜ ಅಲಿರೆಜ ಮತ್ತು ಲಿರೆನ್ ತಲಾ 2.5 ಅಂಕಗಳೊಂದಿಗೆ ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ವನಿತೆಯರ ವಿಭಾಗದಲ್ಲಿ ಪ್ರಜ್ಞಾನಂದ ಅವರ ಹಿರಿಯ ಸಹೋದರಿ ಆರ್. ವೈಶಾಲಿ ಆರ್ಮಗೆಡ್ಡನ್ ಗೇಮ್ನಲ್ಲಿ ನಾರ್ವೆಯ ಅನ್ನಾ ಮುಝಿಚುಕ್ ಅವರನ್ನು ಸೋಲಿಸಿ ಮುನ್ನಡೆ ಸಾಧಿಸಿದರು. ಈ ಮೊದಲು ನಡೆದ ಕ್ಲಾಸಿಕಲ್ ವಿಭಾಗದಲ್ಲಿ ಡ್ರಾ ಸಾಧಿಸಿದ್ದರು. ಒಟ್ಟಾರೆ 5.5 ಅಂಕ ಹೊಂದಿರುವ ವೈಶಾಲಿ ಉಳಿದ ಸ್ಪರ್ಧಿಗಳಿಗಿಂತ ಒಂದಂಕ ಮುನ್ನಡೆಯಲ್ಲಿದ್ದಾರೆ. ವನಿತಾ ವಿಶ್ವ ಚಾಂಪಿಯನ್ ಚೀನದ ವೆನ್ಜುನ್ ಜು ಅವರು 4.5 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-150x83.jpg)
Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ
![ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!](https://www.udayavani.com/wp-content/uploads/2024/07/Dubai1-150x84.jpg)
ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!
![Screenshot (7) copy](https://www.udayavani.com/wp-content/uploads/2024/07/Screenshot-7-copy-150x83.jpg)
Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!
![ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು](https://www.udayavani.com/wp-content/uploads/2024/07/poorna-150x83.jpg)
Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು
![gajanur3](https://www.udayavani.com/wp-content/uploads/2024/07/gajanur3-150x84.jpg)
ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.