Chess World Cup: ಹೋರಾಟದಲ್ಲಿ ಸೋತ ಪ್ರಜ್ಞಾನಂದ; ವಿಶ್ವಕಪ್ ಗೆದ್ದ ಕಾರ್ಲ್ಸನ್
Team Udayavani, Aug 24, 2023, 5:14 PM IST
ಬಾಕು (ಅಜರ್ಬೈಜಾನ್): ತೀವ್ರ ಕುತೂಹಲ ಸೃಷ್ಟಿಸಿದ್ದ ವಿಶ್ವ ಚೆಸ್ ಪಂದ್ಯಾವಳಿಯ ಗುರುವಾರ ನಡೆದ ಫೈನಲ್ ಟೈ ಬ್ರೇಕರ್ ಸ್ಪರ್ಧೆಯಲ್ಲಿ ಭಾರತದ ಆರ್. ಪ್ರಜ್ಞಾನಂದ ಎರಡೂ ಸುತ್ತಿನಲ್ಲೂ ಸೋಲು ಅನುಭವಿಸಿ ನಿರಾಸೆ ಅನುಭವಿಸಿದ್ದು, ಮ್ಯಾಗ್ನಸ್ ಕಾರ್ಲ್ಸನ್ ವಿಶ್ವ ಕಪ್ ಗೆದ್ದಿದ್ದಾರೆ.
ಟೈ ಬ್ರೇಕರ್ನಲ್ಲಿ ಇಬ್ಬರೂ ತಲಾ 10 ನಿಮಿಷಗಳ 2 ರ್ಯಾಪಿಡ್ ಗೇಮ್ಗಳನ್ನು ಆಡಿದರು. ಎರಡರಲ್ಲೂ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಭರವಸೆಯ ಪ್ರತಿಭೆ ಪ್ರಜ್ಞಾನಂದ ನಾರ್ವೇ ಚೆಸ್ ಮಾಸ್ಟರ್ ಎದುರು ಸೋಲಿಗೆ ಶರಣಾಗಬೇಕಾಯಿತು.
ಮಂಗಳವಾರ ನಡೆದ ಮೊದಲ ಸುತ್ತು, ಬುಧವಾರದ ದ್ವಿತೀಯ ಸುತ್ತಿನ ಫೈನಲ್ ಪಂದ್ಯ ಕೂಡ ಡ್ರಾಗೊಂಡಿತ್ತು. ಇದರೊಂದಿಗೆ ಎರಡೂ ಕ್ಲಾಸಿಕಲ್ ಗೇಮ್ಗಳಲ್ಲಿ ಫಲಿತಾಂಶ ದಾಖಲಾಗಿರಲಿಲ್ಲ.