RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

ಬೆಂಗಳೂರಿನ ಮೂರು ಕೆರೆಗಳಿಗೆ ಪುನರುಜ್ಜೀವ..

Team Udayavani, Apr 20, 2024, 6:45 AM IST

1-RCB

ಬೆಂಗಳೂರು: ಸಂಪ್ರ ದಾಯ ದಂತೆ ರಾಯಲ್‌ ಚಾಲೆಂಜರ್ ಬೆಂಗಳೂರು ಕ್ರಿಕೆಟಿಗರು “ಗೋ ಗ್ರೀನ್‌’ ಅಭಿಯಾನದ ಕ್ಷಣಗಣನೆ ಯಲ್ಲಿದ್ದಾರೆ. ರವಿವಾರ ಕೋಲ್ಕತಾ ನೈಟ್‌ರೈಡರ್ ವಿರುದ್ಧ ಐತಿಹಾಸಿಕ “ಈಡನ್‌ ಗಾರ್ಡನ್ಸ್‌’ನಲ್ಲಿ ಅಪರಾಹ್ನ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಕ್ರಿಕೆಟಿಗರು ಹಸಿರು ಉಡುಗೆಯಲ್ಲಿ ಆಡಲಿಳಿಯಲಿದ್ದಾರೆ. ಆರ್‌ಸಿಬಿ ತನ್ನ “ಎಕ್ಸ್‌’ ಖಾತೆಯಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.

ಸ್ವತ್ಛ ಮತ್ತು ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲು ವಾಗಿ ಆರ್‌ಸಿಬಿ 2011ರಿಂದ ಈ ಅಭಿಯಾನವನ್ನು ನಡೆಸಿಕೊಂಡು ಬಂದಿದೆ. ಸಾಮಾನ್ಯವಾಗಿ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಹಗಲು ವೇಳೆ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಕ್ರಿಕೆಟಿಗರು ಹಸಿರು ಜೆರ್ಸಿ ಧರಿಸುವುದು ವಾಡಿಕೆ. ಆದರೆ ಕೋವಿಡ್‌ ಕಾರಣದಿಂದ 2021ರಿಂದ ಮೊದಲ್ಗೊಂಡು 2023ರ ತನಕ ಸೀಮಿತ ತಾಣಗಳಲ್ಲಿ ಐಪಿಎಲ್‌ ಪಂದ್ಯಗಳು ನಡೆದುದರಿಂದ ಈ ಸಂಪ್ರದಾಯವನ್ನು ಪಾಲಿಸ ಲಾಗಲಿಲ್ಲ. 2023ರಲ್ಲಿ ಮತ್ತೆ ಬೆಂಗಳೂರು ಪಂದ್ಯದಲ್ಲೇ ಹಸಿರು ಉಡುಗೆ ಧರಿಸಿ ಆಡಿತು. ಈ ಬಾರಿ ತವರಿ ನಾಚೆಯ ಪಂದ್ಯದಲ್ಲಿ ಗೋ ಗ್ರೀನ್‌ ಅಭಿಯಾನ ಅನಿವಾರ್ಯ ವಾಗಿದೆ.

ಕೋಲ್ಕತಾದಲ್ಲೇ ಏಕೆ?
ಆರ್‌ಸಿಬಿಗೆ ಇನ್ನು ತವರಲ್ಲಿ 3 ಪಂದ್ಯಗಳಿವೆ. ಗುಜರಾತ್‌, ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ. ಆದರೆ ಇವೆಲ್ಲವೂ ರಾತ್ರಿ ಪಂದ್ಯಗಳು. ಆರ್‌ಸಿಬಿ ಪ್ರಸಕ್ತ ಸೀಸನ್‌ನಲ್ಲಿ ಆಡಲಿರುವ ಡೇ ಮ್ಯಾಚ್‌ ಒಂದು ಮಾತ್ರ. ಇದು ರವಿವಾರ ಕೆಕೆಆರ್‌ ವಿರುದ್ಧ ಕೋಲ್ಕತಾದಲ್ಲಿ ನಡೆಯುವ ಕಾರಣ ಈ ಪಂದ್ಯವನ್ನೇ ಗೋ ಗ್ರೀನ್‌ ಅಭಿಯಾನಕ್ಕೆ ಆಯ್ದುಕೊಂಡಿದೆ. ಈ ಜೆರ್ಸಿಯ ಬಹು ಭಾಗ ಹಸಿರಿನಿಂದ ಕೂಡಿದ್ದು, ಶರ್ಟ್‌ನ ಮೇಲ್ಭಾಗ ನೀಲಿ ಬಣ್ಣವನ್ನು ಹೊಂದಿದೆ.

ಬೆಂಗಳೂರಿನ ಮೂರು ಕೆರೆಗಳಿಗೆ ಪುನರುಜ್ಜೀವ

ಗೋ ಗ್ರೀನ್ ಇನಿಶಿಯೇಟಿವ್‌ನ ಭಾಗವಾಗಿ ಬೆಂಗಳೂರಿನ ಮೂರು ಕೆರೆಗಳನ್ನು ಪುನರುಜ್ಜೀವಗೊಳಿಸುವ ಮೂಲಕ ಕಳೆದೆರಡು ತಿಂಗಳುಗಳಿಂದ ಬೆಂಗಳೂರನ್ನು ಆವರಿಸಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನಗಳಿಗೆ ಕೊಡುಗೆ ಸಲ್ಲಿಸಲು ಮುಂದಾಗಿದೆ.

ಇಂಡಿಯಾ ಕೇರ್ಸ್ ಫೌಂಡೇಶನ್ ವರದಿಯ ಪ್ರಕಾರ ಆರ್ ಸಿಬಿ , ಕಣ್ಣೂರು ಕೆರೆ, ಇಟ್ಟಗಲ್‌ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಗಳ ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಲಿದೆ.

ಆರ್‌ಸಿಬಿಯು ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಇಎಸ್‌ಜಿ ಬದ್ಧತೆಯ ಭಾಗವಾಗಿ ಕೆರೆಗಳ ಸುಧಾರಣಾ ಕಾರ್ಯಗಳ ಯೋಜನೆಯನ್ನು ಪ್ರಾರಂಭಿಸಿದ್ದು, ಕಾವೇರಿ ನೀರು ತಲುಪದ, ಅಂತರ್ಜಲ ಮತ್ತು ಮೇಲ್ಮೈ ನೀರಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಪ್ರದೇಶಗಳಲ್ಲಿ ಜಲಮೂಲಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ.

ಟಾಪ್ ನ್ಯೂಸ್

2-aranthodu

Aranthodu: ತಡರಾತ್ರಿ ಭೀಕರ ಕಾರು ಅಪಘಾತ

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್

Police detained Revanna’s son suraj revanna

Hassan; ಅನೈಸರ್ಗಿಕ ಲೈಂಗಿಕ ಕ್ರಿಯೆ: ರೇವಣ್ಣ ಪುತ್ರ ಸೂರಜ್‌ ಪೊಲೀಸ್‌ ಬಲೆಗೆ

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

ಕರಾವಳಿಯಲ್ಲಿ ಸುರಿದೇ ಇಲ್ಲ ಜಿಟಿ ಜಿಟಿ ಮಳೆ

ಕರಾವಳಿಯಲ್ಲಿ ಸುರಿದೇ ಇಲ್ಲ ಜಿಟಿ ಜಿಟಿ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್

1-shreyasi

Olympics; ತಂಡಕ್ಕೆ ಸೇರ್ಪಡೆಗೊಂಡ ಬಿಹಾರದ ಶಾಸಕಿ ಶ್ರೇಯಸಿ

1-women-ODI

Women’s ODI ಸರಣಿ : ಕ್ಲೀನ್‌ಸ್ವೀಪ್‌ ಯೋಜನೆಯಲ್ಲಿ ಭಾರತ

1-aawew

Super 8; ಅಮೆರಿಕ ವಿರುದ್ಧ  ದೊಡ್ಡ ಗೆಲುವಿಗೆ ಇಂಗ್ಲೆಂಡ್‌ ಹೊಂಚು

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

2-aranthodu

Aranthodu: ತಡರಾತ್ರಿ ಭೀಕರ ಕಾರು ಅಪಘಾತ

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

Kalaburagi; ನೇಣಿಗೆ ಶರಣಾದ ಪೊಲೀಸ್ ಕಾನ್ಸಟೇಬಲ್

Kalaburagi; ನೇಣಿಗೆ ಶರಣಾದ ಪೊಲೀಸ್ ಕಾನ್ಸಟೇಬಲ್

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.